ನ್ಯೂಸ್‌ಕ್ಲಿಕ್ ಪ್ರಕರಣ ವಜಾ: ಇಡಿ, ಇಒಡಬ್ಲ್ಯೂಗೆ ದೆಹಲಿ ಹೈಕೋರ್ಟ್ ಚಾಟಿ

ದೆಹಲಿ ಹೈಕೋರ್ಟ್ ನೆನ್ನೆಯ ಜಡ್ಜ್‌ಮೆಂಟ್ ಇದು ದೆಹಲಿ ಪೊಲೀಸ್‌ನ EOW (Economic Offences Wing) ಮತ್ತು ಇಡಿ (Enforcement Directorate) ಸಂಸ್ಥೆಗಳಿಗೆ ಕೋರ್ಟ್ ಕೊಟ್ಟಿರೋ ತೀರಾ ಖಡಕ್ ಆದ ಮತ್ತು ಗಂಭೀರವಾದ ಚಾಟಿ ಏಟು ಅಂತಾನೇ ಹೇಳಬೇಕು. ಆದ್ರೂ ಛೋಟಾ ಭಾಯಿ ಮತ್ತು ಬಡಾ ಭಾಯಿ ಅಣತಿಗಳನ್ನು ಮಾನ ಮರ್ಯಾದೆ ನಯಾ ನಾಚಿಕೆ ಎಲ್ಲಾ ಬಿಟ್ಟು ಪಾಲಿಸುತ್ತಿರುವ ಇಡಿ ಯಂತಹ ಸಂಸ್ಥೆಗಳಿಗೆ ಇದರಿಂದ ಹೆಚ್ಚಿನ ವ್ಯತ್ಯಾಸವಾಗುತ್ತೆ ಅಂತ ನಂಗೇನೂ ಅನ್ನಿಸುವುದಿಲ್ಲ. ಇಡಿ

– ಕುಂಟಾಡಿ ನಿತೀಶ್

NewsClick ಮತ್ತು ಅದರ ಸ್ಥಾಪಕರಾದ ಪ್ರಬೀರ್ ಪುರಕಾಯಸ್ಥ ಅವರ ಮೇಲಿದ್ದ 2020ರ EOW FIR ಮತ್ತು ED ಮನಿ ಲಾಂಡರಿಂಗ್ ಕೇಸ್‌ಗಳನ್ನು ಕೋರ್ಟ್ ಕೇವಲ ವಜಾಗೊಳಿಸಿಲ್ಲ, ಬದಲಿಗೆ ತನಿಖಾ ಸಂಸ್ಥೆಗಳ ಉದ್ದೇಶ ಹಾಗೂ ಅವರು ಕೆಲಸ ಮಾಡಿದ ರೀತಿಯನ್ನು ತೀವ್ರವಾಗಿ ಖಂಡಿಸಿದೆ. ಈ ಇಡೀ ಪ್ರೊಸೀಡಿಂಗ್ಸ್ “gross abuse of the process of law” ಅಂದರೆ ಕಾನೂನಿನ ದುರುಪಯೋಗದ ಪರಮಾವಧಿ ಅಂತ ಕೋರ್ಟ್ ನೇರವಾಗಿಯೇ ಹೇಳಿದೆ. ಇಡಿ

ಅಷ್ಟೇ ಅಲ್ಲ, ತನಿಖಾ ಸಂಸ್ಥೆಗಳ ಈ ಕ್ರಮಗಳು ಕೇವಲ ದುರುದ್ದೇಶದಿಂದ (mala fide) ಕೂಡಿರಲಿಲ್ಲ, ಬದಲಿಗೆ ಇದು ಸ್ವತಂತ್ರ ಮತ್ತು ನಿಷ್ಪಕ್ಷಪಾತ ಪತ್ರಿಕೋದ್ಯಮದ ಮೇಲಿನ ಒಂದು ಆರ್ಬಿಟ್ರರಿ ಅಟ್ಯಾಕ್ ಹಾಗೂ ಅಧಿಕಾರ ದುರ್ಬಳಕೆ ಅಂತಾನೂ ಜಡ್ಜ್‌ಮೆಂಟ್‌ನಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಸರ್ಕಾರಿ ಸಂಸ್ಥೆಗಳನ್ನು ಬಳಸಿ ಕ್ರಿಟಿಕಲ್ ಆಗಿರೋ ಮೀಡಿಯಾ ಧ್ವನಿಗಳನ್ನು ಹತ್ತಿಕ್ಕಲಾಗುತ್ತಿದೆ ಅನ್ನೋ ಆರೋಪಕ್ಕೆ ಈ ತೀರ್ಪು ಒಂದು ಗಟ್ಟಿಯಾದ ಸಾಕ್ಷಿಯ ತರಹ ನಿಲ್ಲುತ್ತದೆ. ಇಡಿ

ಇದನ್ನೂ ಓದಿ: ಟಿಎಂಸಿಗೆ ಮತ್ತೆ ಹೊಡೆತ: ರಾಜ್ಯಸಭಾ ಸದಸ್ಯ ಪ್ರಕಾಶ್ ಚಿಕ್‌ ಬರಾಯಿಕ್ ರಾಜೀನಾಮೆ

ಕೋರ್ಟ್ ತನ್ನ ಅನಾಲಿಸಿಸ್‌ನಲ್ಲಿ ಈ ಏಜೆನ್ಸಿಗಳು ಹೇಗೆ ಸಂಪೂರ್ಣವಾಗಿ ಲೀಗಲ್ ಆದ, ದಿನನಿತ್ಯದ ಬಿಸಿನೆಸ್ ವ್ಯವಹಾರಗಳನ್ನು ಕ್ರಿಮಿನಲ್ ಕೇಸ್ ತರಹ ಬಿಂಬಿಸಲು ಪ್ರಯತ್ನಿಸಿದವು ಅನ್ನೋದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ. 2018ರಲ್ಲಿ NewsClick ಸಂಸ್ಥೆಯು ನಿಯಮಗಳನ್ನು ಮೀರಿ, ಶೇರುಗಳ ಮೌಲ್ಯವನ್ನು ಅತಿಯಾಗಿ ತೋರಿಸಿ ₹9.59 ಕೋಟಿ ವಿದೇಶಿ ಹೂಡಿಕೆ (FDI) ಪಡೆದಿದೆ ಅನ್ನೋದು ಏಜೆನ್ಸಿಗಳ ಮೇನ್ ಆರೋಪ ಆಗಿತ್ತು. ಆದರೆ ಕೋರ್ಟ್ ಇದನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ಇಡಿ

ಡಿಜಿಟಲ್ ಮೀಡಿಯಾಗೆ 26% FDI ಕ್ಯಾಪ್ ಬಂದಿದ್ದೇ 2019ರ ಕೊನೆಯಲ್ಲಿ, ಹಾಗಿರುವಾಗ 2018ರಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಲು ಹೇಗೆ ಸಾಧ್ಯ ಅಂತ ಕೋರ್ಟ್ ಸಿಂಪಲ್ ಆಗಿ ಪ್ರಶ್ನಿಸಿದೆ. ಇನ್ನು ಶೇರುಗಳ ವ್ಯಾಲ್ಯೂಯೇಷನ್ ಅನ್ನೋದು ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಮೇಲೆ ನಡೆಯುವ ಕಮರ್ಷಿಯಲ್ ಮ್ಯಾಟರ್, ಅದನ್ನು ಚೀಟಿಂಗ್ ಅಥವಾ ಕ್ರಿಮಿನಲ್ ಕೇಸ್ ಅಂತ ಟ್ವಿಸ್ಟ್ ಮಾಡಲು ಬರಲ್ಲ ಅಂತ ಜಡ್ಜ್ ಹೇಳಿದ್ದಾರೆ.

ಅಸಲಿಗೆ, ಹಣ ಹೂಡಿಕೆ ಮಾಡಿದ ವಿದೇಶಿ ಕಂಪನಿಯೇ ತಮಗೆ ಮೋಸ ಆಗಿದೆ ಅಂತ ಎಲ್ಲೂ ಹೇಳಿಲ್ಲದಿರುವಾಗ, ಇಲ್ಲಿ ಚೀಟಿಂಗ್ ಕೇಸ್ ಎಲ್ಲಿಂದ ಬಂತು? ಇದರ ಜೊತೆಗೆ, ಆ ಹಣ ಪ್ರಾಪರ್ ಆದ ಆಟೋಮ್ಯಾಟಿಕ್ ರೂಟ್‌ನಲ್ಲೇ ಬಂದಿದೆ ಮತ್ತು ಯಾವುದೇ FEMA ಉಲ್ಲಂಘನೆ ಆಗಿಲ್ಲ ಅಂತ RBI ಮೊದಲೇ ಕ್ಲಾರಿಟಿ ಕೊಟ್ಟಿತ್ತು. ಸಂಬಳ ಕೊಡಲು ಮತ್ತು ಕನ್ಸಲ್ಟೆನ್ಸಿ ಫೀಸ್ ಕಟ್ಟಲು ಬಳಸಿದ ಹಣವನ್ನು “ಸೈಫನ್ ಆಫ್” (ಹಣ ದುರುಪಯೋಗ) ಮಾಡಿದ್ದಾರೆ ಅನ್ನೋ ಏಜೆನ್ಸಿಗಳ ವಾದವಂತೂ ತೀರಾ ನಗುಬರಿಸುವಂತದ್ದು ಅಂತ ಕೋರ್ಟ್ ಅಭಿಪ್ರಾಯಪಟ್ಟಿದೆ.

ಕೊನೆಯದಾಗಿ, ವರ್ಷಗಟ್ಟಲೆ ರೈಡ್ಸ್ ಮಾಡಿ, ಸಿಬ್ಬಂದಿಗಳನ್ನು ದಿನಗಟ್ಟಲೆ ವಿಚಾರಣೆಗೆ ಒಳಪಡಿಸಿದ ED ತನಿಖೆಯನ್ನು ಕೋರ್ಟ್ ಕೇವಲ ಒಂದು “fishing and roving exercise” (ಅಂದರೆ ಏನಾದರೂ ಸಿಗಬಹುದು ಅಂತ ಸುಮ್ಮನೆ ಹುಡುಕಾಡುವ ಪ್ರಯತ್ನ) ಅಂತ ಕರೆದಿದೆ. ಅಷ್ಟು ತನಿಖೆ ಮಾಡಿದ ಮೇಲೂ PMLA ಕಾಯ್ದೆಯಡಿ ಚಾರ್ಜ್ ಮಾಡಲು ED ಹತ್ತಿರ ಒಂದು ಸಣ್ಣ ಸಾಕ್ಷ್ಯ ಕೂಡ ಇರಲಿಲ್ಲ, ಕೇವಲ ಹಸಿಸುಳ್ಳು ಮತ್ತು ಊಹೆಗಳಷ್ಟೇ ಇದ್ದವು ಅಂತ ಕೋರ್ಟ್ ಛೀಮಾರಿ ಹಾಕಿದೆ. ಈ ಇಡೀ ಜಡ್ಜ್‌ಮೆಂಟ್ ನೋಡಿದರೆ ಒಂದು ಮಾತು ಸ್ಪಷ್ಟವಾಗುತ್ತದೆ, ಇಲ್ಲಿ ಅಪರಾಧವನ್ನು ಪತ್ತೆಹಚ್ಚುವುದಕ್ಕಿಂತ ಹೆಚ್ಚಾಗಿ, ಕಾನೂನು ಪ್ರಕ್ರಿಯೆಯನ್ನೇ (legal process) ಒಂದು ಶಿಕ್ಷೆಯಾಗಿ ಬಳಸಿ, ಸ್ವತಂತ್ರ ಪತ್ರಿಕೋದ್ಯಮವನ್ನು ಹೆದರಿಸಲು ಪ್ರಯತ್ನಿಸಲಾಗಿತ್ತು ಅನ್ನೋದು ಕೋರ್ಟ್ ಆದೇಶದಿಂದ ಸಾಬೀತಾದಂತಾಗಿದೆ.

ಈಗ ಭಾರತ ಪ್ರೆಸ್ ಫ್ರೀಡಂ ಇಂಡೆಕ್ಸ್ ನಲ್ಲಿ ಯಾಕೆ 157th out of 180 countries ಅನ್ನೋದು ಸುಲಭಕ್ಕೆ ಅರ್ಥವಾಗುತ್ತದೆ. ಇಂತಹ ಘನ ಕಾರ್ಯ ಮಾಡಿದ ಮಾಡಿಸಿದ ಮಹನೀಯರಿಗೆ ನಾವು ಯಾವುದೇ ಪ್ರಶ್ನೆ ಕೇಳದೆ , ಕಣ್ಣು ಮುಚ್ಚಿ ದಿನಾ ಉದ್ದಂಡ ನಮಸ್ಕಾರ ಮಾಡುತ್ತಾ ಇರಬೇಕು .

ಅಂಟಿಸಿರುವ ಫೋಟೋ ಪ್ರಬೀರ್ ಪುರಕಾಯಸ್ಥ ಅವರ Keeping Up the Good Fight: From the Emergency to the Present Day ಕೃತಿಯ ಕನ್ನಡದಾನುವಾದದ ಕವರ್. ಅಭಿರುಚಿ ಪ್ರಕಾಶನ ಕನ್ನಡದಲ್ಲಿ ಇದನ್ನು ಪ್ರಕಟಿಸಿದೆ. ಇದು ಪ್ರಬೀರ್ ಪುರಕಾಯಸ್ಥ ರಾಜಕೀಯ ಜೀವನಚರಿತ್ರೆ. ಅರ್ಧ ಶತಮಾನದ ಅಂತರದಲ್ಲಿ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ (1975) ಮತ್ತು ಪ್ರಸ್ತುತ ‘ಅಘೋಷಿತ ತುರ್ತು ಪರಿಸ್ಥಿತಿ’ಯ ನಡುವಿನ ಹೋಲಿಕೆಗಳನ್ನು ಮತ್ತು ನಮ್ಮ ಮುಂದಿರುವ ಹೋರಾಟಗಳನ್ನು ನಿಮ್ಮ ಕಣ್ಣ ಮುಂದೆ ಹಿಡಿದು ತೋರಿಸುತ್ತದೆ.

ಇದನ್ನೂ ನೋಡಿ: ಪರೀಕ್ಷಾ ಅಕ್ರಮಗಳಿಗೆ ಇನ್ನು ಸಾಕು! ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ವ್ಯಾಪಕ ಒತ್ತಾಯ Janashakthi Media

Donate Janashakthi Media

Leave a Reply

Your email address will not be published. Required fields are marked *