ಆಗ ಮೂರು ಕರಾಳ ಕೃಷಿ ಕಾನೂನುಗಳು – ಈಗ 20 ಸಾವಿರ ಕೋಟಿ ರೂ. ಗಳ ಕಾಂಟ್ರಾಕ್ಟ್ ! ಏಕಸ್ವಾಮ್ಯ
ಭಾರತೀಯ ಆಹಾರ ನಿಗಮ (ಎಫ್ಸಿಐ) ರೈತರಿಂದ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಧಾನ್ಯವನ್ನು ಖರೀದಿಸಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಸುಮಾರು 81 ಕೋಟಿ ಜನರಿಗೆ ವಿತರಿಸುತ್ತದೆ. ಅದು ಭಾರತದ ಧಾನ್ಯ ಪೂರೈಕೆ ಸರಪಳಿಯನ್ನು ಬೃಹತ್ ಪ್ರಮಾಣದಲ್ಲಿ ಮರುವಿನ್ಯಾಸಗೊಳಿಸುವ ಮತ್ತು ಆಧುನೀಕರಿಸುವ ಉದ್ದೇಶದಿಂದ ರೂ. 20,000 ಕೋಟಿ ಮೌಲ್ಯದ “ಹಬ್ ಅಂಡ್ ಸ್ಪೋಕ್” (ಗುಂಬ ಮತ್ತು ಆರೆಗಳು) ಹೆಸರಿನ ಹಗೇವು (ಸಿಲೋ)ಆಧುನೀಕರಣ ಕಾರ್ಯಕ್ರಮವನ್ನು ಯೋಜಿಸಿತು. “ಆಹಾರ ಧಾನ್ಯಗಳ ಪರಿಣಾಮಕಾರಿ ಮತ್ತು ಸುಸ್ಥಿರ ಸಂಗ್ರಹಣೆ ಮತ್ತು ಚಲನೆಯನ್ನು ಖಚಿತಪಡಿಸಿಕೊಳ್ಳಲು” ಇದನ್ನು ಮಾಡಲಾಗಿದೆ ಎಂದು ಅದು ಹೇಳಿತ್ತು. ಆಹಾರ ಭದ್ರತೆಯ ಕಾರ್ಯತಂತ್ರದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಒಂದು ಕಂಪನಿಯು ಎಲ್ಲಾ ಯೋಜನೆಗಳನ್ನು ಬಾಚಿಕೊಳ್ಳದಂತೆ ತಡೆಯಲು ಎಫ್ಸಿಐ ಮೂಲತಃ ಒಂದು “ಏಕಸ್ವಾಮ್ಯ-ವಿರೋಧಿ” ಕಲಮನ್ನು ಸೇರಿಸಲು ಸೂಚಿಸಿತ್ತು. ಏಕಸ್ವಾಮ್ಯ
– ವೇದರಾಜ್ ಎನ್ ಕೆ
ಆದರೆ ಅದಾನಿಯ ಬಯಕೆಯ ಮೇರೆಗೆ, ನೀತಿ ಆಯೋಗ ಮತ್ತು ಮೋದಿ ಸರಕಾರದ ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ) ಈ “ಏಕಸ್ವಾಮ್ಯ ವಿರೋಧಿ” ಕಲಮನ್ನು ತೊಡೆದುಹಾಕಲು ಕೈಜೋಡಿಸಿದವು ಎಂದು ‘ನ್ಯೂಸ್ಲಾಂಡ್ರಿ’ ವೆಬ್ ಮಾಧ್ಯಮ ನಡೆಸಿದ ಒಂದು ತನಿಖೆಯು ಸ್ಪಷ್ಟವಾಗಿ ತೋರಿಸಿದೆ.( ಮೇ 29, 2026). ‘ಸಾರ್ವಜನಿಕ ಖಾಸಗಿ ಸಹಭಾಗಿತ್ವ ಪರಾಮರ್ಶೆ ಸಮಿತಿ'(ಪಿಪಿಪಿಎಸಿ)ಯ 2022 ರ ಒಂದು ಅಧಿಕೃತ ಸಭೆಯಲ್ಲಿ (ಮೇ 13) ಇದನ್ನು ಮಾಡಲಾಯಿತು ಎಂದು ತಿಳಿದು ಬಂದಿದೆ. ಮಾರುಕಟ್ಟೆ ಶಕ್ತಿಗಳು ಮೇಲುಗೈ ಸಾಧಿಸಬೇಕು ಮತ್ತು ಪ್ರಭುತ್ವದ ಹಸ್ತಕ್ಷೇಪವು ಅದನ್ನು ವಿರೂಪಗೊಳಿಸುತ್ತದೆ ಎಂಬ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಿಗರ ನವ-ಉದಾರವಾದಿ ತರ್ಕ ಇದರ ಹಿಂದಿತ್ತು.. ಏಕಸ್ವಾಮ್ಯ
ಕಾರ್ಪೊರೇಟ್ಗಳ ಈ ನಿರ್ಣಾಯಕ ಪ್ರಭುತ್ವ-ಹಸ್ತಕ್ಷೇಪದ ನಂತರ, ಅಂದರೆ ಆರ್ಎಸ್ಎಸ್-ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಶಾಮೀಲಿನೊಂದಿಗೆ, ʼಅದಾನಿ ಅಗ್ರಿ ಲಾಜಿಸ್ಟಿಕ್ಸ್ ಲಿಮಿಟೆಡ್ʼ ಮತ್ತು ‘ಲೀಪ್ ಇಂಡಿಯಾ ಫುಡ್ & ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್’ ಇವೆರಡೂ ಸೇರಿಕೊಂಡು 134 ಹಗೇವು ಒಪ್ಪಂದಗಳಲ್ಲಿ 110 ನ್ನು ಹೇಗೆ ಪಡೆದುಕೊಂಡಿವೆ ಎಂಬುದನ್ನು ನ್ಯೂಸ್ಲಾಂಡ್ರಿಯ ತನಿಖೆಯು ಸ್ಪಷ್ಟವಾಗಿ ತೋರಿಸುತ್ತದೆ. ಇವುಗಳ ಒಟ್ಟು ಮೌಲ್ಯ 16,500 ಕೋಟಿ ರೂ.ಗಳಿಗಿಂತ ಹೆಚ್ಚು. ಒಟ್ಟು 60 ಲಕ್ಷ ಮೆಟ್ರಿಕ್ ಟನ್ ಧಾನ್ಯಗಳಲ್ಲಿ, ಸುಮಾರು 46.5 ಲಕ್ಷ ಮೆಟ್ರಿಕ್ ಟನ್ಗಳನ್ನು ಈ ಎರಡೇ ಕಂಪನಿಗಳ ಒಡೆತನದ ಹಗೇವುಗಳಲ್ಲಿ ಇಡಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಬಾರಿ ಅದಾನಿಗೆ 9700 ಕೋಟಿ ರೂ.ಗಳ ಕಾಂಟ್ರಾಕ್ಟ್ ದಕ್ಕಿದೆ ಎಂದು ‘ನ್ಯೂಸ್ ಲಾಂಡ್ರಿ’ ಹೇಳಿದೆ. ಏಕಸ್ವಾಮ್ಯ
ಮ್ಯ
ವ್ಯಂಗ್ಯಚಿತ್ರ ಕೃಪೆ: ಮಂಜುಲ್, ನ್ಯೂಸ್ ಲಾಂಡ್ರಿ
ಇದು ಸಾರ್ವಜನಿಕ ಆಹಾರ ಭದ್ರತಾ ಮೂಲಸೌಕರ್ಯವನ್ನು ಕಾರ್ಪೊರೇಟ್ ಸ್ವಾಧೀನಕ್ಕೆ ಒಪ್ಪಿಸುವ ಕ್ರಮ ಎಂದು ಅಖಿಲ ಭಾರತ ಕಿಸಾನ್ ಸಭಾ ಬಲವಾಗಿ ಖಂಡಿಸಿದೆ.
ಅದಾನಿ “ಹಂತ 1 ರ ಎರಡನೇ ಸುತ್ತಿನಲ್ಲಿ ಪ್ರತಿಯೊಂದು ಒಪ್ಪಂದವನ್ನು ಗೆದ್ದರು” ಎಂದು ʼನ್ಯೂಸ್ ಲಾಂಡ್ರಿʼ ವರದಿ ತೋರಿಸುತ್ತದೆ. “ಹಂತ 2 ರ ಹೊತ್ತಿಗೆ,ಇಬ್ಬರ ಗುತ್ತೇದಾರಿಕೆ ಹೊರಹೊಮ್ಮಿತು. ಅದಾನಿ ಮತ್ತು ಲೀಪ್ ಭಾರತದ ಅತಿದೊಡ್ಡ ಆಧುನಿಕ ಧಾನ್ಯ ಸಂಗ್ರಹ ಕಾರ್ಯಕ್ರಮದಲ್ಲಿ ಪ್ರಾಬಲ್ಯ ಸಾಧಿಸಿದರು. ವಿವಿಧ ಸರ್ಕಾರಿ ಏಜೆನ್ಸಿಗಳು ಮತ್ತು ಸಂಸ್ಥೆಗಳ ಸಕ್ರಿಯ ಶಾಮೀಲುಗಳ ಮೂಲಕ ಹೇಗೆ ಈ ಪ್ರಕ್ರಿಯೆ ಗುಟ್ಟಾಗಿ ನಡೆದಿದೆ ಎಂಬುದನ್ನು ‘ನ್ಯೂಸ್ ಲಾಂಡ್ರಿ’ ತನಿಖೆ ಬಯಲಿಗೆ ತಂದಿದೆ. ಏಕಸ್ವಾಮ್ಯ
ಇದನ್ನೂ ಓದಿ: ಮುಖ್ಯಮಂತ್ರಿ ಆಗುವ ಅವಕಾಶ ಬಂದಿತ್ತು, ಆದರೆ…: ಪರಮೇಶ್ವರ್ ಭಾವುಕ ನುಡಿ
ಇದು ‘ಉದಾರವಾದಿ’ ಸ್ಪರ್ಧಾ ಕಾನೂನುಗಳನ್ನು ಸಹ ಅಕ್ಷರಶಃ ಉಲ್ಲಂಘಿಸಿರುವ ಪ್ರಕ್ರಿಯೆ ಭಯಾನಕ ಮಾರುಕಟ್ಟೆ ಕೇಂದ್ರೀಕರಣ . ಉದಾಹರಣೆಗೆ, ಕೇಂದ್ರ ಸರ್ಕಾರವು “ಆಳವಾದ ಬ್ಯಾಲೆನ್ಸ್ ಶೀಟ್ಗಳನ್ನು” ಹೊಂದಿರುವ ಕಂಪನಿಗಳಿಗೆ ಅನುಕೂಲಕರವಾದ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ಅಭಿವೃದ್ಧಿಪಡಿಸಿತು, ಆ ಮೂಲಕ ಸಾರ್ವಜನಿಕ ವಲಯದ ಕಂಪನಿಗಳು, ಸಣ್ಣ ಕಂಪನಿಗಳು, ಸಹಕಾರಿ ಸಂಸ್ಥೆಗಳು ಇತ್ಯಾದಿಗಳು ಸ್ಪರ್ಧಿಸದಂತೆ ಮಾಡಲಾಯಿತು.
ಕೃಷಿಯ ಕಾರ್ಪೊರೇಟೀಕರಣದ ಗುಪ್ತ ನಡೆ-ಎಐಕೆಎಸ್
ಸಾಮ್ರಾಜ್ಯಶಾಹಿ ಮತ್ತು ಅದರೊಡನೆ ಶಾಮೀಲಾಗುವ ಭಾರತೀಯ ದೊಡ್ಡ ಕಾರ್ಪೊರೇಟ್ ಸಮೂಹಗಳು ಭಾರತೀಯ ಕೃಷಿ ವಲಯದಲ್ಲಿ ಸುಲಿಗೆಕೋರ ಶೇಖರಣೆ ಮಾಡಿಕೊಳ್ಳಲು ಕಾದುಕೊಂಡಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಮೋದಿ ಸರ್ಕಾರ ರೂಪಿಸಿದ ಮೂರು ಕರಾಳ ಕೃಷಿ ಕಾನೂನುಗಳನ್ನು ಮುಂದೊತ್ತುವಲ್ಲಿ ಅದಾನಿ ವಹಿಸಿದ ಪಾತ್ರ ಮತ್ತು ಅದಕ್ಕೆ ರೈತರ ಧೀರ ಪ್ರತಿರೋಧ ಕೂಡ ಈಗಲೂ ಗ್ರಾಮೀಣ ಜನಮಾನಸದಲ್ಲಿ ಹಸಿರಾಗಿರುವ ಸಂಗತಿ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಈ ಸಂದರ್ಭದಲ್ಲಿ ನೆನಪಿಸಿದೆ.
ಕೃಷಿ ಸಂಬಂಧಿ ಸಾಗಾಣಿಕೆ ಮತ್ತು ಶೇಖರಣೆಯಲ್ಲಿ ಪರಿಣತಿ ಹೊಂದಿರುವ ಲೀಪ್ ಇಂಡಿಯಾ ಕೂಡ ಪ್ರಬಲ ವಿದೇಶಿ ಖಾಸಗಿ ಷೇರು ನಿಧಿಗಳ (ಯುಕೆ ಬೆಂಬಲಿತ ನೀವ್ ನಿಧಿ ಮತ್ತು ಡ್ಯಾನಿಶ್ ಎಸ್ಜಿಡಿ ನಿಧಿ) ಬೆಂಬಲ ಪಡೆದಿದೆ ಎನ್ನಲಾಗಿದೆ.
ಇದನ್ನೂ ನೋಡಿ: ದೇಶದ ಆರ್ಥಿಕತೆ ಮತ್ತು ಹಣದುಬ್ಬರ: ನಿಜ ಹೇಳಿ ಮೋದಿಜೀ.. nation wants to know #JanashakthiMedia
ಭಾರತ ಆಹಾರ ನಿಗಮದ ಹಗೇವುಗಳಲ್ಲಿ ಎರಡು ಖಾಸಗಿ ಕಾರ್ಪೊರೇಟ್ಗಳಿಗೆ ಗುತ್ತೇದಾರಿಕೆ ಆರ್ಎಸ್ಎಸ್-ಬಿಜೆಪಿ ಸರ್ಕಾರವು ಮಾಡಿರುವ ಭಾರತೀಯ ಕೃಷಿಯ ಕಂಪನೀಕರಣದ ಗುಪ್ತ ನಡೆ ಎಂದು ಎಐಕೆಎಸ್ ಹೇಳಿದೆ.
“ಏಕಸ್ವಾಮ್ಯ ವಿರೋಧಿ” ಕಲಮನ್ನು ತಕ್ಷಣವೇ ಮತ್ತೆ ಸೇರಿಸಬೇಕು ಮತ್ತು ಯಾವುದೇ ಒಂದು ಕಾರ್ಪೊರೇಟ್ ಗುಂಪಿನ ಹಗೇವು ಸಾಮರ್ಥ್ಯದ ಪಾಲನ್ನು ನಿರ್ಬಂಧಿಸುವ ಮಿತಿಯನ್ನು ವಿಧಿಸಬೇಕು ಎಂದು ಎಐಕೆಎಸ್ ಒತ್ತಾಯಿಸಿದೆ. ಮಾರುಕಟ್ಟೆ ಕೇಂದ್ರೀಕರಣವನ್ನು ತಡೆಯುವ “ಏಕಸ್ವಾಮ್ಯ ವಿರೋಧಿ” ಮತ್ತು ಇತರ ಕಲಮುಗಳನ್ನು ತೆಗೆದುಹಾಕುವಲ್ಲಿ ಪಿಪಿಪಿಎಸಿಯ ಪಾತ್ರದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕೆಂದು ಕೂಡ ಎಐಕೆಎಸ್ ಒತ್ತಾಯಿಸಿದೆ.
ಕಾರ್ಪೊರೇಟ್ ಏಕಸ್ವಾಮ್ಯಗಳಿಗೆ ದೀರ್ಘಾವಧಿ ಹಸ್ತಾಂತರದ ಬದಲು ಸಾರ್ವಜನಿಕ ಹೂಡಿಕೆಯ ಮೂಲಕ ಎಫ್ಸಿಐನ ಸ್ವಂತ ಸಂಗ್ರಹ ಸಾಮರ್ಥ್ಯವನ್ನು ಬಲಪಡಿಸುವುದು ಈ ಸಮಯದ ಅಗತ್ಯವಾಗಿದೆ. ನಮ್ಮ ಆಹಾರ ಭದ್ರತಾ ಮೂಲಸೌಕರ್ಯದ ಈ ಲೂಟಿಯನ್ನು ವಿರೋಧಿಸಲು ರೈತರು, ಕೃಷಿ ಕಾರ್ಮಿಕರು ಮತ್ತು ಎಲ್ಲಾ ಪ್ರಜಾಪ್ರಭುತ್ವ ಶಕ್ತಿಗಳಿಗೆ ಅಖಿಲ ಭಾರತ ಕಿಸಾನ್ ಸಭಾ ಕರೆ ನೀಡಿದೆ.

ಇವರ ಹಣದಿಂದ ನನಗೆ ಅಧಿಕಾರ!
ಇವರ ಅಧಿಕಾರದಿಂದ ನನಗೆ ಹಣ!
ವ್ಯಂಗ್ಯಚಿತ್ರ ಕೃಪೆ: ಸ್ಯನಿಟರಿ ಪ್ಯಾನಲ್ಸ್
