ತುಮಕೂರು: ಮೇ 16ರ ಸಂಜೆ ರಸ್ತೆ ದುರಸ್ತಿ, ವಿದ್ಯುತ್ ದೀಪ ಅಳವಡಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ (ಸಿಪಿಎಂ) ನಗರ ಹೊರವಲಯದ ಅಂತರಸನಹಳ್ಳಿ ಸೇತುವೆ ಬಳಿ ಪ್ರತಿಭಟನೆ ನಡೆಸಲಾಯಿತು.
‘ಮಧುಗಿರಿ- ಪಾವಗಡ ರಸ್ತೆಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ವಿದ್ಯುತ್ ದೀಪ, ಸೂಚನಾ ಫಲಕ ಅಳವಡಿಸಿಲ್ಲ. ರಸ್ತೆ ಗುಂಡಿಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಉಮೇಶ್ ಹೇಳಿದರು.
ಇದನ್ನೂ ಓದಿ: ವೇತನ ಪರಿಷ್ಕರಣೆ ವಿವಾದ: ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ
ಮುಖಂಡ ಯಲ್ಲಪ್ಪ, ‘ರಸ್ತೆ ದೀಪಗಳ ಕೊರತೆಯಿಂದ ರಾತ್ರಿ ಸಮಯದಲ್ಲಿ ಕತ್ತಲು ಆವರಿಸುತ್ತಿದೆ. ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.
ಮಹಾನಗರ ಪಾಲಿಕೆ ಅಧಿಕಾರಿ ಹರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ರಂಗಧಾಮಯ್ಯ, ಶಿವಕುಮಾರ್, ರಾಮಕೃಷ್ಣ, ಖಲೀಲ್, ನಾಗಭೂಷಣ, ತಿಪ್ಪೇಸ್ವಾಮಿ, ಆನಂದ್, ಶಶಿಕಿರಣ್, ರಾಮಣ್ಣ, ನಾಗರಾಜು, ಶ್ರೀನಿವಾಸ ಇತರರು ಭಾಗವಹಿಸಿದ್ದರು.
ಇದನ್ನೂ ನೋಡಿ: ಎಲ್ಲವೂ ಸರಿಯಿದೆ ಎಂದು ಹೇಳುತ್ತಲೇ ಈಗ ಸಂಕಷ್ಟ ತಂದಿಟ್ಟರೇ ಮೋದಿಜೀ? ! ಬಿ.ಶ್ರೀಪಾದ ಭಟ್ Janashakthi Media
