ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೇಲೆ ಇರಾನ್ – ಅಮೆರಿಕ ನಡುವಿನ ಕದನ ವಿರಾಮ ಅಸ್ಥಿರವಾಗಿರುವ ಬೆನ್ನಲ್ಲೇ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆದಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ಮೇ 8ರಂದು ತಿಳಿಸಿದೆ.
ದೇಶದ ವಾಯು ರಕ್ಷಣಾ ಪಡೆಗಳು ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ತಡೆಯುವ ಕಾರ್ಯದಲ್ಲಿ ‘ಸಕ್ರಿಯವಾಗಿ ತೊಡಗಿಕೊಂಡಿವೆ’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ತಮಿಳುನಾಡು | ವಿಜಯ್ ಅವರನ್ನು ತಕ್ಷಣ ಸರ್ಕಾರ ರಚಿಸಲು ಆಹ್ವಾನಿಸಿ: ಸಿಪಿಐ(ಎಂ) ಆಗ್ರಹ
ಭದ್ರತಾ ಪರಿಸ್ಥಿತಿಯನ್ನು ನಿಗಾದಲ್ಲಿಟ್ಟುಕೊಂಡು ಅಗತ್ಯ ಪ್ರತಿರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ದೇಶದ ಭದ್ರತಾ ವ್ಯವಸ್ಥೆಯನ್ನು ಎಚ್ಚರಿಕೆಯಲ್ಲಿ ಇರಿಸಲಾಗಿದೆ ಎಂದು ತಿಳಿಸಲಾಗಿದೆ. ನಾಗರಿಕರು ಸುರಕ್ಷತಾ ಮುನ್ನೆಚ್ಚರಿಕೆ ಪಾಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಇದನ್ನೂ ನೋಡಿ: ಕರಾವಳಿ ಪ್ರವಾಸೋದ್ಯಮ : ಸ್ಥಳೀಯರ ಬದುಕು ಉಳಿಯಬೇಕೇ ಹೊರತು ಕಾರ್ಪೊರೇಟ್ ಲಾಭಕ್ಕಲ್ಲ – ಮುನೀರ್ ಕಾಟಿಪಳ್ಳ
