ಟಿವಿಕೆಗೆ ಕಾಂಗ್ರೆಸ್‌ ಷರತ್ತು ಬದ್ಧ ಬೆಂಬಲ!

ಬೆಂಗಳೂರು: ತಮಿಳುನಾಡು ರಾಜಕೀಯದಲ್ಲಿ ಡಿಎಂಕೆ ನೇತೃತ್ವದ ಮೈತ್ರಿಗೆ ಕಾಂಗ್ರೆಸ್‌ ತೀವ್ರ ಆಘಾತ ನೀಡಿದೆ. ಕಾಂಗ್ರೆಸ್ ಪಕ್ಷವು ತನ್ನ ಹಳೆಯ ಮೈತ್ರಿಯನ್ನು ತೊರೆದು ಸದ್ಯ ತಮಿಳುನಾಡಿನಲ್ಲಿ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಜೊತೆ ಕೈ ಜೋಡಿಸಲು ಮುಂದಾಗಿದೆ.

ಈ ಮೂಲಕ ಹಳೆಯ ದೋಸ್ತಿ ಕಡಿದು ಹೊಸ ಮೈತ್ರಿ ಸರ್ಕಾರ ರಚನೆಗೆ ಒಲವು ತೋರಿದೆ.

ತಮಿಳುನಾಡಿನ ವಿಧಾನಸಭೆಗೆ ನಡೆದಿದ್ದ 234 ಸ್ಥಾನಗಳಲ್ಲಿ ಟಿವಿಕೆ ಭರ್ಜರಿ ಗೆಲುವು ಸಾಧಿಸಿದೆ 108 ಸ್ಥಾನಗಳನ್ನು ಗೆದ್ದು ಬೀಗಿದೆ. ಇದರಿಂದ ಈ ಹಿಂದೆ ಆಡಳಿತದಲ್ಲಿದ್ದ ಎಂ.ಕೆ. ಸ್ಟಾಲಿನ್‌ಗೆ ಮರ್ಮಾಘಾತ ನೀಡಿದಂತಾಗಿದೆ. ಚುನಾವಣಾ ಫಲಿತಾಂಶಗಳ ಬಳಿಕ ಸ್ಪಷ್ಟ ಬಹುಮತ ಯಾವುದೇ ಪಕ್ಷಕ್ಕೂ ಸಿಗದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಬೆಳವಣಿಗೆಗಳ ನಡುವೆಯೇ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆಗೆ ಮುಂದಾಗಿದೆ.

ಇದನ್ನೂ ಓದಿ: ಹೂಡಿಕೆ ತಾಣದಲ್ಲಿ ಗುತ್ತಿಗೆ ಕಾರ್ಮಿಕರ ಮುಷ್ಕರ: ಆರ್ಸೆಲರ್‌ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ, ಹಜೀರಾ

ಮೈತ್ರಿ ಸರ್ಕಾರದ ರಚನೆಯೊಂದಿಗೆ ಬೇರೆ ಬೇರೆ ಪಕ್ಷಗಳ ಬೆಂಬಲಕ್ಕೆ ಯತ್ನಿಸುತ್ತಿದೆ. ಹೀಗಾಗಿ ಟಿವಿಕೆ ಮಾಡಿಕೊಂಡಿದ್ದ ಬೆಂಬಲದ ಮನವಿಗೆ ಸ್ಪಂದಿಸಿರುವ ಕಾಂಗ್ರೆಸ್, ಷರತ್ತು ಬದ್ಧ ಬೆಂಬಲ ನೀಡಲು ಮುಂದೆ ಬಂದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ನ ಷರತ್ತುಗಳೇನು..?

ಭಾರತದ ಸಂವಿಧಾನದಲ್ಲಿ ನಂಬಿಕೆಯಿಲ್ಲದ ಯಾವುದೇ ಕೋಮುವಾದಿ ಶಕ್ತಿಗಳನ್ನು ಟಿವಿಕೆ ಈ ಮೈತ್ರಿಕೂಟದಿಂದ ದೂರವಿಡುವುದರ ಮೇಲೆ ನಮ್ಮ ಬೆಂಬಲವಿರುತ್ತದೆ. ಟಿವಿಕೆ ಮತ್ತು ತಮಿಳುನಾಡು ಕಾಂಗ್ರೆಸ್ ನಡುವಿನ ಈ ಮೈತ್ರಿಕೂಟವು ಪೆರುಂತಲೈವರ್ ಕಾಮರಾಜ್ ಅವರ ತಮಿಳುನಾಡಿನ ವೈಭವದ ದಿನಗಳನ್ನು ಮರಳಿ ತರಲು ಶ್ರಮಿಸುತ್ತದೆ, ತಂತೈ ಪೆರಿಯಾರ್ ಅವರ ಸಾಮಾಜಿಕ ನ್ಯಾಯದ ಆದರ್ಶಗಳು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಂವಿಧಾನಿಕ ಆದರ್ಶಗಳಿಗೆ ಮುಂದಿನ ವರ್ಷಗಳು ಮತ್ತು ದಶಕಗಳಲ್ಲಿ ಬಲವಾದ ಬದ್ಧತೆಯೊಂದಿಗೆ ಮುನ್ನಡೆಯುತ್ತದೆ ಎಂದು ಹೇಳಿದೆ.

ಪರಸ್ಪರ ಗೌರವ, ಸೂಕ್ತ ಹಂಚಿಕೆ ಮತ್ತು ಎರಡೂ ಪಕ್ಷಗಳ ನಡುವಿನ ಹಂಚಿಕೆಯ ಜವಾಬ್ದಾರಿಯ ಮೇಲೆ ಸ್ಥಾಪಿತವಾದ ಈ ಮೈತ್ರಿಕೂಟವು ಈ ಸರ್ಕಾರ ರಚನೆಗೆ ಮಾತ್ರವಲ್ಲದೆ, ಸ್ಥಳೀಯ ಸಂಸ್ಥೆ ಸಂಸ್ಥೆಗಳು, ಲೋಕಸಭೆ ಮತ್ತು ರಾಜ್ಯಸಭೆಗೆ ಭವಿಷ್ಯದ ಚುನಾವಣೆಗಳಿಗೂ ಸಹ ಆಗಿದೆ. ವಿಜಯ್ ಮತ್ತು ರಾಹುಲ್ ಗಾಂಧಿ ಜಂಟಿಯಾಗಿ ಜಾತ್ಯತೀತ ಮತ್ತು ಪ್ರಗತಿಪರ ಸರ್ಕಾರಕ್ಕಾಗಿ ತಮಿಳುನಾಡಿನ ಜನರ ಈ ಐತಿಹಾಸಿಕ ತೀರ್ಪನ್ನು ಗೌರವಿಸುವುದಾಗಿ ಮತ್ತು ಜನರ ಕನಸುಗಳು ಮತ್ತು ಭರವಸೆಗಳನ್ನು ವಿಶೇಷವಾಗಿ ತಮಿಳುನಾಡಿನ ಯುವಕರನ್ನು ಈಡೇರಿಸುವುದಾಗಿ ಪ್ರತಿಜ್ಞೆ ಮಾಡುತ್ತಾರೆ ಎಂದು ಕಾಂಗ್ರೆಸ್‌ ತನ್ನ ಬೆಂಬಲವನ್ನು ಘೋಷಿಸಿದೆ.

ಆದರೆ ಸದ್ಯ ಇದರ ಹೊರತಾಗಿಯೂ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಮುಂದುವರೆದಿದ್ದು, ವಿಜಯ್‌ ಯಾರೊಂದಿಗೆ ಕೈ ಜೋಡಿಸಿ ಸರ್ಕಾರ ರಚಿಸುತ್ತಾರೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

ಇದನ್ನೂ ನೋಡಿ: ಮಳೆ | ಬೌರಿಂಗ್‌ ಆಸ್ಪತ್ರೆ ದುರಂತ – ಎಚ್ಚೆತ್ತುಕೊಳ್ಳಬೇಕಿದೆ ಸರಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *