ನವ-ಫ್ಯಾಸಿಸಂನ ಉತ್ಕರ್ಷ ಮತ್ತು ಶಿಕ್ಷಣದ ನಾಶ

ಪ್ರೊ. ಪ್ರಭಾತ್ಪಟ್ನಾಯಕ್

ಅನು: ಕೆ.ಎಂ.ನಾಗರಾಜ್

ನವ-ಉದಾರವಾದವು ಸಮಾಜವನ್ನು ಅಂತಿಮವಾಗಿ ನವ-ಫ್ಯಾಸಿಸಂನತ್ತವೇ ಕೊಂಡೊಯ್ಯತ್ತದೆ. ನವ-ಉದಾರವಾದವು ತತ್ಪರತೆಯಿಂದ ಆರಂಭಿಸಿದ ಶಿಕ್ಷಣದ ವಿನಾಶವನ್ನು ನವ-ಫ್ಯಾಸಿಸಂ ಬಹಳಷ್ಟು ಮುಂದಕ್ಕೆ ಕೊಂಡೊಯ್ದಿದೆ. ನವ-ಉದಾರವಾದವು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಅವುಗಳಿಗೆ ದೊರಕುತ್ತಿದ್ದ ಹಣ ಸಹಾಯವನ್ನು ನಿಲ್ಲಿಸುವ ಮೂಲಕ ಹಾಳುಗೆಡವಲು ಪ್ರಯತ್ನಿಸಿತು. ವಿಮರ್ಶಾತ್ಮಕ ಚಿಂತನೆಯನ್ನೂ ಒಂದು ಕ್ರಿಮಿನಲ್ ಅಪರಾಧವನ್ನಾಗಿ ಮಾಡುವ ಮೂಲಕ ಮತ್ತು ವಿದ್ಯಾರ್ಥಿಗಳ ತಲೆಯಲ್ಲಿ ಹಿಂದುತ್ವದ ಸುಳ್ಳುಗಳನ್ನು ತುಂಬುವ ಮೂಲಕ ಈ ವಿನಾಶದ ಕೃತ್ಯವನ್ನು ನವ-ಫ್ಯಾಸಿಸಂ ಮತ್ತಷ್ಟು ಮುಂದೊಯ್ದಿದೆ. ವಿಮರ್ಶಾತ್ಮಕ ಚಿಂತನೆಯು, ಒಂದು ವೇಳೆ ಅದು ಅನಿರೀಕ್ಷಿತವಾಗಿ ತಲೆ ಎತ್ತಿದರೂ, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರವಲ್ಲದೆ ಖಾಸಗಿ ಸಂಸ್ಥೆಗಳಲ್ಲಿಯೂ ಸಹ ಅದನ್ನು ಒಂದು ಅಪರಾಧವನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ.

ವಸಾಹತುಶಾಹಿಯಿಂದ ಬಿಡುಗಡೆ ಹೊಂದಿದ ಬಹಳ ವರ್ಷಗಳ ನಂತರವೂ ಭಾರತದ ಸಾಮಾಜಿಕ ಮತ್ತು ಬೌದ್ಧಿಕ ಜೀವನದಲ್ಲಿ ಇಂಗ್ಲಿಷ್ ಮಾತನಾಡುವ ಒಂದು ಸಣ್ಣ ಸಂಖ್ಯೆಯ ಕುಲೀನರ ಪ್ರಾಬಲ್ಯವು ಬಹು ಕಾಲ ಮುಂದುವರೆದಿರುವುದು ದೇಶೀ ಮೂಲದಿಂದ ಕುಲೀನರೆನಿಸಿಕೊಳ್ಳುತ್ತಿರುವ ಒಂದು ವಿಭಾಗದಲ್ಲಿ ತಮ್ಮನ್ನು ಹೊರಗಿಡಲಾಗುತ್ತಿದೆ ಎಂದು ವೈಷಮ್ಯವನ್ನು ಹುಟ್ಟುಹಾಕಿತು ಎಂದು ಅನೇಕ ಚಿಂತನಶೀಲ ಜನರು ನಂಬುತ್ತಾರೆ. ಅವರ ಪ್ರಕಾರ, ಅದರಿಂದಾಗಿ ಈ ವಿಭಾಗ  ಭಾರತೀಯ ಜನತಾ ಪಕ್ಷದ ಕಡೆಗೆ ಆಕರ್ಷಿತಗೊಂಡಿತು. ಅಂದರೆ, ಬಿಜೆಪಿಯು, ಇತರ ಸಂಗತಿಗಳಲ್ಲದೆ, ದೇಶದ ವ್ಯವಹಾರಗಳಲ್ಲಿ ಇಂಗ್ಲಿಷ್ ಮಾತನಾಡುವ ಸಣ್ಣ ಕುಲೀನರ ಪ್ರಾಬಲ್ಯದ ವಿರುದ್ಧ ಒಂದು ದಂಗೆಯನ್ನು ಕೂಡ ಪ್ರತಿನಿಧಿಸುತ್ತದೆ. ಇದರಲ್ಲಿ ಸ್ವಲ್ಪ ಸತ್ಯಾಂಶ ಇರಬಹುದು ಮತ್ತು ವಾದಕ್ಕಾಗಿ ನಾವು ಈ ಅಭಿಪ್ರಾಯವನ್ನು ಸದ್ಯಕ್ಕೆ ಒಪ್ಪೋಣ.

ಈ ಇಂಗ್ಲಿಷ್ ಮಾತನಾಡುವ ಸಣ್ಣ ಸಂಖ್ಯೆಯ ಕುಲೀನರ ಪ್ರಾಬಲ್ಯವನ್ನು ಮುರಿಯುವ ಸಾಧನ ಸಹಜವಾಗಿಯೇ ಎಲ್ಲರಿಗೂ ಸುಲಭವಾಗಿ ಶಿಕ್ಷಣ, ವಿಶೇಷವಾಗಿ ಉನ್ನತ ಶಿಕ್ಷಣ ಲಭಿಸುವಂತೆ ಶಿಕ್ಷಣದ ಪ್ರಜಾಪ್ರಭುತ್ವೀಕರಣ, ಮತ್ತು ಹೀಗೆ ಬಹಳಷ್ಟು ಮಂದಿಗೆ ಕಾಲಕ್ರಮೇಣ ಗುಣಮಟ್ಟದ ಉನ್ನತ ಶಿಕ್ಷಣ ಲಭ್ಯವಾದಾಗ ಸಣ್ಣ ಸಂಖ್ಯೆಯ ಈ ಕುಲೀನರು ಅದುವರೆಗೆ ಅನುಭವಿಸುತ್ತಿದ್ದ ಸವಲತ್ತುಗಳು ಕಡಿಮೆಯಾಗುತ್ತಾ ಹೋಗುತ್ತವೆ.

ಇದನ್ನೂ ನೋಡಿ: ಅನಿಲ ಸೋರಿಕೆ ಪ್ರಕರಣ: ಹಾನಿಗೊಳಗಾದ ಗ್ರಾಹಕರಿಗೆ 29 ಲಕ್ಷ ರೂ. ಪರಿಹಾರ ಘೋಷಣೆ

ತಮ್ಮನ್ನು ಹೊರಗಿಡಲಾಗಿದೆ ಎಂದು ಅನೇಕರು ಹೊಂದಿರುವ ಭಾವನೆಯ ಲಾಭ ಪಡೆಯುತ್ತಿರುವ ಬಿಜೆಪಿಯು, ಗುಣಮಟ್ಟದ ಉನ್ನತ ಶಿಕ್ಷಣವನ್ನು ಜನರಿಗೆ ಎಟುಕುವಂತೆ ಮಾಡಬೇಕು; ಇದುವರೆಗೆ ಶಿಕ್ಷಣದಿಂದ ಹೊರಗುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣವು ಸುಲಭವಾಗಿ ಲಭಿಸುವಂತೆ ಮಾಡಬೇಕು ಮತ್ತು ಇಂತಹ ವಿದ್ಯಾರ್ಥಿಗಳ ಸಂಖ್ಯೆಯು ವಿಸ್ತಾರಗೊಳ್ಳುತ್ತಲೇ ಹೋಗಬೇಕು. ಈ ಸಣ್ಣ ಸಂಖ್ಯೆಯ ಕುಲೀನರು ಕೆಲವೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶದ ಅವಕಾಶವನ್ನು ತಮ್ಮ ಸಂತತಿಗಷ್ಟೇ ಲಭ್ಯಗೊಳಿಸುವ ಮೂಲಕ ತಮ್ಮನ್ನು ಚಿರಸ್ಥಾಯಿಗೊಳಿಸಲು ಯತ್ನಿಸುತ್ತಾರೆ. ಬಿಜೆಪಿ  ಈ ಪ್ರತಿಷ್ಠಿತ ಸಂಸ್ಥೆಗಳ ಏಕಸ್ವಾಮ್ಯವನ್ನು ಮುರಿಯಲು ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ಆರಂಭಿಸಬೇಕಾಗಿತ್ತು.

ಶಿಕ್ಷಣದ ಪ್ರಜಾಪ್ರಭುತ್ವೀಕರಣದ ಬದಲು…… 

ಆದರೆ, ಬಿಜೆಪಿ ನೇತೃತ್ವದ ಸರ್ಕಾರವು ಮಾಡದೇ ಇರುವುದು ಇದನ್ನೇ. ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭಿಸುವಂತೆ ಮಾಡಬೇಕು ಎಂಬ ವಿಷಯದ ಬಗ್ಗೆ ಅದು ಗಮನವೇ ಹರಿಸುತ್ತಿಲ್ಲ, ಬದಲಿಗೆ, ಗುಣಮಟ್ಟದ ಶಿಕ್ಷಣವನ್ನು ನಾಶಪಡಿಸುವತ್ತ ಗಮನಹರಿಸುತ್ತದೆ. ಎಲ್ಲರನ್ನೂ ಒಳಗೊಳ್ಳುವ ಪ್ರವೇಶ ನೀತಿಯ ಮೂಲಕ ಕುಲೀನರ ಮಕ್ಕಳಿಗಿಂತ ಹೆಚ್ಚಾಗಿ ಜನಸಮುದಾಯದ ಒಂದು ವಿಶಾಲ ವಿಭಾಗದ ಜನರ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಂತಹ ಗುಣಮಟ್ಟದ ಉನ್ನತ ಶಿಕ್ಷಣದ ಸಾರ್ವಜನಿಕ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಹಾಳುಗೆಡವುವ ಪ್ರಯತ್ನಗಳು ನಡೆಯುತ್ತಿವೆ. ಗುಣಮಟ್ಟದ ಶಿಕ್ಷಣವನ್ನು ಜನರಿಗೆ ಎಟುಕುವಂತೆ ಮಾಡುವ ಉದ್ದೇಶಕ್ಕಾಗಿ ಅಗತ್ಯವಾಗುವಷ್ಟು ಮೊತ್ತವನ್ನು ಶಿಕ್ಷಣದ ಮೇಲೆ ಖರ್ಚು ಮಾಡುವುದರ ಬದಲು, ಸರ್ಕಾರವು ತನ್ನ ಶಿಕ್ಷಣದ ಬಜೆಟನ್ನು ವರ್ಷ ವರ್ಷವೂ ಕಡಿತಗೊಳಿಸುತ್ತಿದೆ.

ಉನ್ನತ ಶಿಕ್ಷಣವನ್ನು ಖಾಸಗೀಕರಣಗೊಳಿಸುವುದೇ ಅದರ ಉದ್ದೇಶ. ಈ ಖಾಸಗೀ ಶಿಕ್ಷಣವು ಎಷ್ಟು ದುಬಾರಿಯಾಗಿರುತ್ತದೆ ಎಂದರೆ,ಕುಲೀನರಲ್ಲದ ಹಿನ್ನೆಲೆಯ ಮಕ್ಕಳು ಈ ಹೊಸ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಪ್ರವೇಶಿಸಲು ಬೇಕಾಗುವಷ್ಟು ಹಣವನ್ನು ಹೊಂದಿರುವುದೇ ಇಲ್ಲ. ಕುಲೀನರನ್ನು ಈ ಹಿಂದೆ ಉತ್ಪಾದಿಸುತ್ತಿದ್ದ ಕೆಲವೇ ಕೆಲವು ಪ್ರತಿಷ್ಠಿತ ಸಂಸ್ಥೆಗಳ ಬದಲಿಗೆ, ಈಗ ಹೆಚ್ಚು ಹೆಚ್ಚು ಪ್ರತಿಷ್ಠಿತ ಸಂಸ್ಥೆಗಳು ಒಂದು ವಿಭಿನ್ನ ರೀತಿಯ ಕುಲೀನರನ್ನು ಉತ್ಪಾದಿಸುವಲ್ಲಿ ತೊಡಗಿಕೊಂಡಿವೆ ಮತ್ತು ಅದನ್ನು ಪ್ರಜ್ಞಾಪೂರ್ವಕವಾಗಿ ಮಾಡುವ ಗುರಿಯನ್ನು ಹೊಂದಿವೆ. ಯಾವ ಹೊರಗಿಡುವ ಪ್ರಕ್ರಿಯೆಗೆ ಬಿಜೆಪಿಯ ವಿರೋಧವು ಅನೇಕರಿಗೆ ಬಿಜೆಪಿಯನ್ನು ಆಕರ್ಷಕವಾಗಿ ಮಾಡಿತು ಎಂದು ಹೇಳಲಾಗುತ್ತಿದೆಯೋ, ಅದೇ  ಹೊರಗಿಡುವ ಪ್ರಕ್ರಿಯೆ, ಈಗಲೂ ಮುಂದುವರೆಯುತ್ತಲೇ ಇದೆ, ಅದೂ ಸ್ವಾತಂತ್ರ್ಯಾನಂತರದ  ಆರಂಭಿಕ ವರ್ಷಗಳಲ್ಲಿ ಇದ್ದುದಕ್ಕಿಂತಲೂ ಹೆಚ್ಚಿನ ಬಲದೊಂದಿಗೆ ಈಗ ಮುಂದುವರಿಯುತ್ತಿದೆ.

ಕುಲೀನರನ್ನು ಈ ಹಿಂದೆ ಉತ್ಪಾದಿಸುತ್ತಿದ್ದ ಕೆಲವೇ ಕೆಲವು ಪ್ರತಿಷ್ಠಿತ ಸಂಸ್ಥೆಗಳ ಬದಲಿಗೆ, ಈಗ ಹೆಚ್ಚು ಹೆಚ್ಚು ಪ್ರತಿಷ್ಠಿತ ಸಂಸ್ಥೆಗಳು ಒಂದು ವಿಭಿನ್ನ ರೀತಿಯ ಕುಲೀನರನ್ನು ಉತ್ಪಾದಿಸುವಲ್ಲಿ ತೊಡಗಿಕೊಂಡಿವೆ ಮತ್ತು ಅದನ್ನು ಪ್ರಜ್ಞಾಪೂರ್ವಕವಾಗಿ ಮಾಡುವ ಗುರಿಯನ್ನು ಹೊಂದಿವೆ. ಯಾವ ಹೊರಗಿಡುವ ಪ್ರಕ್ರಿಯೆಗೆ ಬಿಜೆಪಿಯ ವಿರೋಧವು ಅನೇಕರಿಗೆ ಬಿಜೆಪಿಯನ್ನು ಆಕರ್ಷಕವಾಗಿ ಮಾಡಿತು ಎಂದು ಹೇಳಲಾಗುತ್ತಿದೆಯೋ, ಅದೇ  ಹೊರಗಿಡುವ ಪ್ರಕ್ರಿಯೆ, ಈಗಲೂ ಮುಂದುವರೆಯುತ್ತಲೇ ಇದೆ, ಅದೂ ಸ್ವಾತಂತ್ರ್ಯಾನಂತರದ  ಆರಂಭಿಕ ವರ್ಷಗಳಲ್ಲಿ ಇದ್ದುದಕ್ಕಿಂತಲೂ ಹೆಚ್ಚಿನ ಬಲದೊಂದಿಗೆ ಈಗ ಮುಂದುವರಿಯುತ್ತಿದೆ.

ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುವ ಪ್ರಜಾಪ್ರಭುತ್ವೀಕರಣದ ಕಾರ್ಯಸೂಚಿಯನ್ನು ಈ ರೀತಿಯಲ್ಲಿ ಕೈಬಿಡುತ್ತಿರುವಾಗ, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಿಗೆ ಹಣ ಒದಗಿಸದೆ ಅವುಗಳನ್ನು ಸೊರಗಿಸುವ (ಇದರಿಂದಾಗಿ ವರ್ಷಗಟ್ಟಲೆ ಸಿಬ್ಬಂದಿ ಕೊರತೆ ಉಂಟಾಗಿರುವುದರಿಂದ ಈ ಸಂಸ್ಥೆಗಳಲ್ಲಿ ಬೋಧನೆಯೇ ಇರುವುದಿಲ್ಲ), ಶಿಕ್ಷಕರನ್ನು ತಮ್ಮ ವಿಷಯಗಳಲ್ಲಿ ಅವರು ಹೊಂದಿದ ಸಾಮರ್ಥ್ಯದ ಆಧಾರದ ಮೇಲೆ ಅಲ್ಲ, ಬದಲಾಗಿ, ಹಿಂದುತ್ವ ಕಾರ್ಯಸೂಚಿಗೆ ಅವರು ತಮಗೆ ಇದೆಯೆಂದು ವ್ಯಕ್ತಪಡಿಸುವ ನಿಷ್ಠೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವ, ಮತ್ತು ಊಹಿಸಬಹುದಾದ ಯಾವುದೇ ಶೈಕ್ಷಣಿಕ ಕಾರಣಗಳಿಲ್ಲದೆ, ಪಠ್ಯಕ್ರಮದಿಂದ ಬಹಳಷ್ಟು ವಿಷಯಗಳನ್ನು (ಇತಿಹಾಸ ಪಠ್ಯದಲ್ಲಿ ಮೊಘಲ್ ಅವಧಿಯಂತಹ ವಿಷಯಗಳನ್ನು ಹಲವಾರು ಶಾಲೆಗಳಲ್ಲಿ ಬೋಧನೆಯಿಂದ) ಕೈಬಿಡುವ ಕ್ರಮವು, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಮಟ್ಟವು ತೀರಾ ಕೆಳಮಟ್ಟಕ್ಕೆ ಇಳಿದಿರುವುದನ್ನು ಖಚಿತಪಡಿಸುತ್ತದೆ.

ಖಾಸಗಿ ಸಂಸ್ಥೆಗಳು, ಖ್ಯಾತಿವೆತ್ತ ಮತ್ತು ಅತಿ ದುಬಾರಿ ಶುಲ್ಕ ವಿಧಿಸುವ ಸಂಸ್ಥೆಗಳೂ ಸಹ, ಮೂಲಭೂತವಾಗಿ ಉದ್ಯೋಗ ಮಾರುಕಟ್ಟೆಯ ಬೇಕು-ಬೇಡಗಳನ್ನು ಪೂರೈಸುವ ಬಗ್ಗೆ ಕಾಳಜಿ ವಹಿಸುತ್ತವೆಯೇ ವಿನಃ, ವಿಮರ್ಶಾತ್ಮಕ ದೃಷ್ಟಿಕೋನದಿಂದ ಕೂಡಿದ ಜ್ಞಾನವನ್ನು ನೀಡುವ ಬಗ್ಗೆ ಅಲ್ಲ. ಈ ಎಲ್ಲವುಗಳ ಪರಿಣಾಮವೆಂದರೆ ವಿಮರ್ಶಾತ್ಮಕ ಚಿಂತನೆಯನ್ನು ನಾಶಪಡಿಸಲಾಗುತ್ತಿದೆ, ಅಂದರೆ, ಮೂಲಭೂತವಾಗಿ ಶಿಕ್ಷಣದ ಉದ್ದೇಶವನ್ನೇ  ನಾಶಪಡಿಸಲಾಗುತ್ತಿದೆ.

ಮೂಲಭೂತ ಅಪ್ರಾಮಾಣಿಕತೆಯೇ ಆಧಾರ

ಇಂಗ್ಲಿಷ್ ಮಾತನಾಡುವ ಸಣ್ಣ ಸಂಖ್ಯೆಯ ಕುಲೀನರ ಮೇಲೆ ತನಗೆ ವಿರೋಧವಿದೆ ಎಂದು ತೋರ್ಪಡಿಸಿಕೊಳ್ಳುವ ಮತ್ತು ಅಂತಹ ವಿರೋಧದ ಆಧಾರದ ಮೇಲೆ ಸಹಾನುಭೂತಿ ಗಿಟ್ಟಿಸುವ ಸರ್ಕಾರವು  ಶಿಕ್ಷಣವನ್ನು ಎಲ್ಲರಿಗೂ ಲಭಿಸುವಂತೆ ಪ್ರಜಾಪ್ರಭುತ್ವೀಕರಿಸುವ ಬದಲು ಶಿಕ್ಷಣವನ್ನೇ ಸಂಪೂರ್ಣವಾಗಿ ನಾಶಪಡಿಸುತ್ತದೆ, ಏಕೆ? ಈ ಪ್ರಶ್ನೆಗೆ ಉತ್ತರವು ನವ-ಫ್ಯಾಸಿಸಂನ ಮೂಲಭೂತ ಲಕ್ಷಣದಲ್ಲಿ ಸಿಗುತ್ತದೆ, ಅಂದರೆ, ಅದು ಸವಲತ್ತುಗಳನ್ನು ವಿರೋಧಿಸುವ ನೆಪದಲ್ಲಿ ಸಾಮಾನ್ಯ ಜನರನ್ನು ಓಲೈಸುತ್ತದೆ. ಆದರೆ, ಅದು ಸಮಾಜದ ಅತಿ ಹೆಚ್ಚು ಸವಲತ್ತುಗಳನ್ನು ಅನುಭವಿಸುತ್ತಿರುವ ಗುಂಪಿನ ಕಾರ್ಯಸೂಚಿಯನ್ನು, ಅಂದರೆ, ಏಕಸ್ವಾಮ್ಯ ಬಂಡವಾಳಶಾಹಿಗಳ ಕಾರ್ಯಸೂಚಿಯನ್ನು ಕಾರ್ಯರೂಪಕ್ಕೆ ತರುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಫ್ಯಾಸಿಸಂ ಮತ್ತು ನವ-ಫ್ಯಾಸಿಸಂ ನಿಂತಿರುವುದು ಒಂದು ಮೂಲಭೂತ ಅಪ್ರಾಮಾಣಿಕತೆಯ ಮೇಲೆಯೇ.

ಉದಾಹರಣೆಗೆ, 1930ರ ದಶಕದ ಜರ್ಮನ್ ಫ್ಯಾಸಿಸಂ ತನ್ನನ್ನು ತಾನು “ರಾಷ್ಟ್ರೀಯ ಸಮಾಜವಾದ” ಎಂದು ಕರೆದುಕೊಂಡಿತು. ದೊಡ್ಡ ಬಂಡವಾಳದೊಂದಿಗೆ ಅದು ಗುಟ್ಟಾಗಿ ಸಂಬಂಧ ಹೊಂದಿದ್ದರೂ ಸಹ ಅದರ ವಿರುದ್ಧ ಸಾರ್ವಜನಿಕವಾಗಿ ಅಬ್ಬರಿಸಿ ಬೊಬ್ಬಿರಿಯುತ್ತಿತ್ತು. ಅಧಿಕಾರಕ್ಕೆ ಬಂದ ನಂತರ ಅದು ದೊಡ್ಡ ಬಂಡವಾಳದೊಂದಿಗೆ ತನ್ನ ಸಂಪರ್ಕಗಳನ್ನು ಮುಕ್ತವಾಗಿ ಏರ್ಪಡಿಸಿಕೊಂಡಾಗ, ಫ್ಯಾಸಿಸಂನ ಹಿಂದಿನ ಅಬ್ಬರಗಳಿಗೆ ಮರುಳಾಗಿದ್ದ ಮತ್ತು ಫ್ಯಾಸಿಸಂಗೆ ನಿಷ್ಠರಾಗಿಯೇ ಉಳಿದಿದ್ದ ಅನುಯಾಯಿಗಳು ದೊಡ್ಡ ಬಂಡವಾಳದೊಂದಿಗೆ ಅದು ಹೊಂದಿರುವ ಸಂಬಂಧದ ಬಗ್ಗೆ ಪ್ರಶ್ನೆ ಎತ್ತಿದಾಗ, ಅವರನ್ನು ಕೊಲೆಗೈದ ಘಟನೆಯು ಇತಿಹಾಸದಲ್ಲಿ “ಉದ್ದನೆಯ ಚಾಕುಗಳ ಕರಾಳ ರಾತ್ರಿ” ಎಂದು ದಾಖಲಾಗಿದೆ.

ಇದೇ ಈ ಅಪ್ರಾಮಾಣಿಕತೆ ಶಿಕ್ಷಣ ವಲಯದಲ್ಲಿಯೂ ಕೆಲಸ ಮಾಡುತ್ತಿದೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯಸೂಚಿಯನ್ನು ಅನುಸರಿಸುತ್ತೇವೆ ಎಂಬ ನವ-ಫ್ಯಾಸಿಸ್ಟ್‌ರ ಸೂಚ್ಯ ಭರವಸೆಯ ಮೇಲೆ ಒಂದು ರೀತಿಯ ಆಕರ್ಷಣೆ ಉಂಟಾಗಿದೆ. ಆದರೆ, ಏಕಸ್ವಾಮ್ಯ ಬಂಡವಾಳವು ಬಯಸುವುದು ಶಿಕ್ಷಣದ ವಿನಾಶವನ್ನು. ಆದ್ದರಿಂದ, ಶಿಕ್ಷಣದ ವಿನಾಶವೇ ಅವರ ನಿಜ ಉದ್ದೇಶ. ಈಗ ಒಂದು ಪ್ರಶ್ನೆ ಉದ್ಭವಿಸುತ್ತದೆ: ಏಕಸ್ವಾಮ್ಯ ಬಂಡವಾಳವು ಶಿಕ್ಷಣದ ವಿನಾಶವನ್ನು ಬಯಸುತ್ತದೆ, ಏಕೆ? ಮತ್ತು ಯಾವ ಅರ್ಥದಲ್ಲಿ ಶಿಕ್ಷಣವನ್ನು ವಿನಾಶಗೊಳಿಸಲಾಗುತ್ತಿದೆ?

ಈ ವಿನಾಶದ ಅರ್ಥವನ್ನು ಹೀಗೆ ಹೇಳಬಹುದು: ತಾಂತ್ರಿಕ ಜ್ಞಾನ ಮತ್ತು ಕೌಶಲ್ಯಗಳನ್ನು ಶಿಕ್ಷಣ ಸಂಸ್ಥೆಗಳು ಹುಮ್ಮಸ್ಸಿನಿಂದಲೇ ಹೇಳಿಕೊಡುತ್ತವೆ. ಆದರೆ, ಸಮಾಜದ ಬಗ್ಗೆ ಯಾವುದೇ ಜ್ಞಾನ ಅಥವಾ ಸಮಾಜದ ಬೆಳವಣಿಗೆಯ ಇತಿಹಾಸದ ಬಗ್ಗೆ ಯಾವುದೇ ಆಕ್ಷೇಪವನ್ನು, ಯಥಾಸ್ಥಿತಿಯ ಬಗ್ಗೆ ಹೊಗಳಿಕೆಯ ರೂಪದಲ್ಲಿರುವುದನ್ನು ಹೊರತುಪಡಿಸಿದರೆ, ಸಂಪೂರ್ಣವಾಗಿ ತೊರೆಯಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ವರ್ತಮಾನದ ಬಗ್ಗೆ ವಿಮರ್ಶಾತ್ಮಕವಾಗಿ ಟೀಕೆ ಮಾಡುವುದನ್ನು ಅಡಗಿಸಲಾಗುತ್ತದೆ.

ಬುದ್ಧಿಜೀವಿಗಳು” ಮತ್ತು “ಬುದ್ಧಿ ಕೆಲಸಗಾರರು 

ಏಕಸ್ವಾಮ್ಯ ಬಂಡವಾಳಕ್ಕೆ ಕುಶಲ ಕೆಲಸಗಾರರು ಬೇಕು ಬಯಸುತ್ತದೆ. ಹೊಸದಾಗಿ ಮೂಡಿಬರುತ್ತಿರುವ ಖಾಸಗಿ ಸಂಸ್ಥೆಗಳು ಈ ಕುಶಲ ಕೆಲಸಗಾರರನ್ನು ಉತ್ಪಾದಿಸಬೇಕಾಗುತ್ತದೆ ಮತ್ತು ಅವು ಉತ್ಪಾದಿಸುತ್ತವೆ ಕೂಡ. ಆದರೆ, ಸಮಾಜದ ಅಧ್ಯಯನವನ್ನು ಒಂದು ವಿಮರ್ಶಾತ್ಮಕ ಕಣ್ಣೋಟದೊಳಗೇ ನಡೆಸಬೇಕಾಗುತ್ತದೆ. ಏಕಸ್ವಾಮ್ಯ ಬಂಡವಾಳವು ಇದನ್ನು ಅಪಾಯಕಾರಿ ಎಂದು ಪರಿಗಣಿಸುತ್ತದೆ ಮತ್ತು ಅದನ್ನು ಸಂಪೂರ್ಣವಾಗಿ ಬದಿಗೆ ಸರಿಸುತ್ತದೆ. ಪ್ರಖ್ಯಾತ ಮಾರ್ಕ್ಸ್‌ವಾದೀ ಅರ್ಥಶಾಸ್ತ್ರಜ್ಞ ಪಾಲ್ ಬರನ್ ಅವರು ಒಂದೊಮ್ಮೆ, “ಬುದ್ಧಿಜೀವಿಗಳು” ಮತ್ತು “ಬುದ್ಧಿ ಕೆಲಸಗಾರರು” ಎಂದು ಇವರ ನಡುವೆ ಇರುವ ಒಂದು ವ್ಯತ್ಯಾಸವನ್ನು ತೋರಿಸಿಕೊಟ್ಟಿದ್ದರು.

ಈ ವ್ಯತ್ಯಾಸದ ಪರಿಭಾಷೆಯಲ್ಲಿ ನಮ್ಮ ವಾದವನ್ನು ನಾವು ಪುನಃ ಹೀಗೆ ಮಂಡಿಸಬಹುದು: ಏಕಸ್ವಾಮ್ಯ ಬಂಡವಾಳದ ಪ್ರಾಬಲ್ಯದ ಯುಗದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು, ಜನರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಅವರ ಸ್ವಾತಂತ್ರ್ಯವನ್ನು ಸಾಧಿಸುವುದಕ್ಕಾಗಿ ಮುಂದಿನ ದಾರಿ ತೋರಿಸುವ “ಬುದ್ಧಿಜೀವಿ”ಗಳನ್ನು ಉತ್ಪಾದಿಸಲು ಪ್ರಯತ್ನಿಸುವುದರ ಬದಲು, ಏಕಸ್ವಾಮ್ಯ ಬಂಡವಾಳದ (ಮತ್ತು ದೇಶೀಯ ಏಕಸ್ವಾಮ್ಯ ಬಂಡವಾಳವು ಕೈಜೋಡಿಸಿರುವ ಬಹುರಾಷ್ಟ್ರೀಯ ಕಂಪನಿಗಳ) ಸೇವೆ ಸಲ್ಲಿಸುವ “ಬುದ್ಧಿ ಕೆಲಸಗಾರರನ್ನು” ಮಾತ್ರ ಉತ್ಪಾದಿಸುತ್ತವೆ.

ವಿಮರ್ಶಾತ್ಮಕ ಚಿಂತನೆಯ ಅಳವಡಿಕೆಯೇ ಈ ವ್ಯತ್ಯಾಸದಲ್ಲಿರುವ ಪ್ರಧಾನ ಅಂಶ. ಆದರೆ, ಏಕಸ್ವಾಮ್ಯ ಬಂಡವಾಳದ ಯುಗದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಗುರಿ ಈ ವಿಮರ್ಶಾತ್ಮಕ ಚಿಂತನೆಯ ವಿನಾಶವೇ. ವಿಮರ್ಶಾತ್ಮಕ ಚಿಂತನೆಯು ಶಿಕ್ಷಣದ ಸಾರವಾಗಿರುವುದರಿಂದ, ಅದರ ವಿನಾಶವು ಶಿಕ್ಷಣದ ವಿನಾಶಕ್ಕೆ ಸಮನಾಗಿರುತ್ತದೆ.

ಏಕಸ್ವಾಮ್ಯ ಬಂಡವಾಳದ ಪ್ರಾಬಲ್ಯದ ಯುಗದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು, ಜನರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಅವರ ಸ್ವಾತಂತ್ರ್ಯವನ್ನು ಸಾಧಿಸುವುದಕ್ಕಾಗಿ ಮುಂದಿನ ದಾರಿ ತೋರಿಸುವ “ಬುದ್ಧಿಜೀವಿ”ಗಳನ್ನು ಉತ್ಪಾದಿಸಲು ಪ್ರಯತ್ನಿಸುವುದರ ಬದಲು, ಏಕಸ್ವಾಮ್ಯ ಬಂಡವಾಳದ (ಮತ್ತು ದೇಶೀಯ ಏಕಸ್ವಾಮ್ಯ ಬಂಡವಾಳವು ಕೈಜೋಡಿಸಿರುವ ಬಹುರಾಷ್ಟ್ರೀಯ ಕಂಪನಿಗಳ) ಸೇವೆ ಸಲ್ಲಿಸುವ “ಬುದ್ಧಿ ಕೆಲಸಗಾರರನ್ನು” ಮಾತ್ರ ಉತ್ಪಾದಿಸುತ್ತವೆ.

ಭಾರತದಲ್ಲಿ ಶಿಕ್ಷಣವನ್ನು ವಿನಾಶಗೊಳಿಸುವ ಪ್ರಕ್ರಿಯೆಯು ನವ-ಉದಾರವಾದಿ ನೀತಿಗಳನ್ನು ಶ್ರದ್ಧಾಪೂರ್ವಕವಾಗಿ ಅಳವಡಿಸಿಕೊಳ್ಳುವುದರೊಂದಿಗೆ ಆರಂಭವಾಯಿತು. ವಾಸ್ತವವಾಗಿ ಶಿಕ್ಷಣದ ವಿನಾಶವು ನವ-ಉದಾರವಾದಿ ಕಾರ್ಯಸೂಚಿಯ ಪ್ರಧಾನ ಅಂಶವಾಗಿರುವುದರಿಂದ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದಂತಹ ಅಗತ್ಯ ಸೇವೆಗಳನ್ನು ಖಾಸಗೀಕರಣಗೊಳಿಸುವ ಕಾರ್ಯಭಾರವನ್ನು ದೇಶದ ಮೇಲೆ ಹೊರಿಸಲಾಗಿದೆ. ಶಿಕ್ಷಣವನ್ನು ಖಾಸಗೀಕರಣಗೊಳಿಸುವುದು ಎಂದರೆ, ಸರ್ಕಾರವು ಹಿಂದೆ ಒದಗಿಸುತ್ತಿದ್ದ ಒಂದು ನಿರ್ದಿಷ್ಟ “ವಸ್ತು”ವನ್ನು ಈಗ ಖಾಸಗಿ ವಲಯವು ಒದಗಿಸುತ್ತಿದೆ ಎಂದರ್ಥವಲ್ಲ. ಅದರ ಅರ್ಥವೆಂದರೆ, ಏನನ್ನು ಒದಗಿಸಲಾಗುತ್ತದೆಯೋ ಅದರ ಸ್ವರೂಪದಲ್ಲಿಯೇ ಆಗುವ ಬದಲಾವಣೆ. ಶಿಕ್ಷಣದ ಖಾಸಗೀಕರಣ (ಭಾರತದಲ್ಲಿ ಉಚಿತ ಶಿಕ್ಷಣ ನೀಡುವ ಇತಿಹಾಸ ಹೊಂದಿರುವ ದತ್ತಿ ಖಾಸಗಿ ಸಂಸ್ಥೆಗಳನ್ನು ಹೊರತುಪಡಿಸಿ) ಎಂದರೆ, ಮೂಲಭೂತವಾಗಿ ಲಾಭ ಗಳಿಸುವುದಕ್ಕಾಗಿ  ಶಿಕ್ಷಣವನ್ನು ಒಂದು “ಸರಕು” ಎಂಬಂತೆ ಉತ್ಪಾದಿಸುವುದು ಎಂದರ್ಥ.

ಈ ಲಾಭವನ್ನು ಅದೇ ಶಿಕ್ಷಣ ಸಂಸ್ಥೆಯಲ್ಲಿಯೇ ಮರುಹೂಡಿಕೆ ಮಾಡಬಹುದು. ಆದರೆ ಅದೇನೂ ಒಂದು ಸರಕನ್ನು ಮಾರಾಟ ಮಾಡಿ ಲಾಭ ಗಳಿಸುವ ಒಂದು ಸಂಸ್ಥೆಯೆಂಬ ಅವುಗಳ ಗುಣ-ಲಕ್ಷಣವನ್ನು  ಮಾರ್ಪಡಿಸುವುದಿಲ್ಲ. ಶಿಕ್ಷಣದ ಸರಕೀಕರಣವು ಶಿಕ್ಷಣ ವ್ಯವಸ್ಥೆಯ ಉತ್ಪನ್ನದ (ಅಂದರೆ, ವಿದ್ಯಾರ್ಥಿಗಳ) ಸರಕೀಕರಣವನ್ನೂ ಒಳಗೊಂಡಿರುತ್ತದೆ. ಆದ್ದರಿಂದ, ಈ ವ್ಯವಸ್ಥೆಯು ಉತ್ಪಾದಿಸುವ ಉತ್ಪನ್ನವೂ ಒಂದು ಸರಕು. ಹಾಗಾಗಿ, ಈ ಶಿಕ್ಷಣ ವ್ಯವಸ್ಥೆಯಿಂದ ಹೊರಬರುವ ವಿದ್ಯಾರ್ಥಿಗಳು ತಾವು ಪಡೆಯುವ ಜ್ಞಾನದಿಂದ ಜನರಿಗೆ ಸೇವೆ ಸಲ್ಲಿಸಲು ಪ್ರಯತ್ನಿಸುವ ಬದಲು, ಅವರು ಸ್ವಾರ್ಥಿಗಳೂ, ಸ್ವಹಿತದಲ್ಲೇ ಮುಳುಗಿರುವ ವ್ಯಕ್ತಿಗಳೂ ಆಗುತ್ತಾರೆ. ಅವರು ತಮ್ಮ ಕೌಶಲ್ಯಗಳನ್ನು ಅತ್ಯಧಿಕ ಬೆಲೆ ಕೂಗುವವರಿಗೆ ಮಾರಾಟವಾಗುತ್ತಾರೆ. ಈ ರೀತಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಮರ್ಶಾತ್ಮಕ ಚಿಂತನೆಗಳೇ ಇರದಂತೆ ನೋಡಿಕೊಳ್ಳುವ ಸಲುವಾಗಿ ಮಾಡುವ ಪ್ರಜ್ಞಾಪೂರ್ವಕ ಪ್ರಯತ್ನಗಳೊಂದಿಗೆ ಶಿಕ್ಷಣದ ಸ್ವರೂಪವೇ ಒಂದು ಮೂಲಭೂತ ಬದಲಾವಣೆಗೆ ಒಳಗಾಗುತ್ತದೆ.

ನವ-ಉದಾರವಾದವು ಶ್ರದ್ಧಾಪೂರ್ವಕವಾಗಿ ಆರಂಭಿಸಿದ ಶಿಕ್ಷಣದ ವಿನಾಶವನ್ನು ನವ-ಫ್ಯಾಸಿಸಂ ಬಹಳಷ್ಟು ಮುಂದಕ್ಕೆ ಕೊಂಡೊಯ್ದಿದೆ. ನವ-ಉದಾರವಾದವು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಅವುಗಳಿಗೆ ದೊರಕುತ್ತಿದ್ದ ಹಣ ಸಹಾಯವನ್ನು ನಿಲ್ಲಿಸುವ ಮೂಲಕ ಹಾಳುಗೆಡವಲು ಪ್ರಯತ್ನಿಸಿತು. ವಿಮರ್ಶಾತ್ಮಕ ಚಿಂತನೆಯನ್ನೂ ಒಂದು ಕ್ರಿಮಿನಲ್ ಅಪರಾಧವನ್ನಾಗಿ ಮಾಡುವ ಮೂಲಕ ಮತ್ತು ವಿದ್ಯಾರ್ಥಿಗಳ ತಲೆಯಲ್ಲಿ ಹಿಂದುತ್ವದ ಸುಳ್ಳುಗಳನ್ನು ತುಂಬುವ ಮೂಲಕ ಈ ವಿನಾಶದ ಕೃತ್ಯವನ್ನು ನವ-ಫ್ಯಾಸಿಸಂ ಮತ್ತಷ್ಟು ಮುಂದೊಯ್ದಿದೆ. 

ನವ-ಫ್ಯಾಸಿಸಂನತ್ತ

ಈ ವಿದ್ಯಮಾನವನ್ನು ನವ-ಫ್ಯಾಸಿಸಂ ಮುಂದೊಯ್ಯುತ್ತದೆ. ನವ-ಉದಾರವಾದವು ಸಮಾಜವನ್ನು ಅಂತಿಮವಾಗಿ ನವ-ಫ್ಯಾಸಿಸಂನತ್ತವೇ ಕೊಂಡೊಯ್ಯತ್ತದೆ. ವರಮಾನಗಳ ಮತ್ತು ಸಂಪತ್ತಿನ ಅಸಮಾನತೆಗಳ ಅಗಾಧ ಹೆಚ್ಚಳ ನವ-ಉದಾರವಾದೀ ಆಳ್ವಿಕೆಯ ಲಕ್ಷಣವೇ ಆಗಿರುವುದರಿಂದ ಮತ್ತು ಶ್ರೀಮಂತರು ದುಡಿಯುವ ಜನರಿಗೆ ಹೋಲಿಸಿದರೆ ತಮ್ಮ ವರಮಾನದಲ್ಲಿ ಒಂದು ಸಣ್ಣ ಅನುಪಾತವನ್ನು ಮಾತ್ರ ಬಳಕೆ ಮಾಡುವುದರಿಂದ, ನವ-ಉದಾರವಾದೀ ಬಂಡವಾಳಶಾಹಿಯು ಅನಿವಾರ್ಯವಾಗಿ ಅತಿ-ಉತ್ಪಾದನೆಯ ಒಂದು ಪ್ರವೃತ್ತಿಯನ್ನು ಉಂಟುಮಾಡುತ್ತದೆ. ಇದು ಆರ್ಥಿಕ ಸ್ಥಗಿತತೆಯ ರೂಪದಲ್ಲಿ ಮತ್ತು ಹೆಚ್ಚಿನ ಮಟ್ಟದ ನಿರುದ್ಯೋಗದ ರೂಪದಲ್ಲಿ ಪ್ರಕಟಗೊಳ್ಳುತ್ತದೆ. ಈ ಸನ್ನಿವೇಶದಲ್ಲಿ ಏಕಸ್ವಾಮ್ಯ ಬಂಡವಾಳವು ತನ್ನ ಪ್ರಾಬಲ್ಯವನ್ನು ನೆಲೆಗೊಳಿಸುವ ಸಲುವಾಗಿ ನವ-ಫ್ಯಾಸಿಸಂನೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ ಮತ್ತು ಅದರಿಂದಾಗಿ ನವ-ಫ್ಯಾಸಿಸಂ ಉತ್ಕರ್ಷವನ್ನು ಪಡೆಯುತ್ತದೆ.

ನವ-ಉದಾರವಾದವು ಶ್ರದ್ಧಾಪೂರ್ವಕವಾಗಿ ಆರಂಭಿಸಿದ ಶಿಕ್ಷಣದ ವಿನಾಶವನ್ನು ನವ-ಫ್ಯಾಸಿಸಂ ಬಹಳಷ್ಟು ಮುಂದಕ್ಕೆ ಕೊಂಡೊಯ್ದಿದೆ. ನವ-ಉದಾರವಾದವು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಅವುಗಳಿಗೆ ದೊರಕುತ್ತಿದ್ದ ಹಣ ಸಹಾಯವನ್ನು ನಿಲ್ಲಿಸುವ ಮೂಲಕ ಹಾಳುಗೆಡವಲು ಪ್ರಯತ್ನಿಸಿತು. ವಿಮರ್ಶಾತ್ಮಕ ಚಿಂತನೆಯನ್ನೂ ಒಂದು ಕ್ರಿಮಿನಲ್ ಅಪರಾಧವನ್ನಾಗಿ ಮಾಡುವ ಮೂಲಕ ಮತ್ತು ವಿದ್ಯಾರ್ಥಿಗಳ ತಲೆಯಲ್ಲಿ ಹಿಂದುತ್ವದ ಸುಳ್ಳುಗಳನ್ನು ತುಂಬುವ ಮೂಲಕ ಈ ವಿನಾಶದ ಕೃತ್ಯವನ್ನು ನವ-ಫ್ಯಾಸಿಸಂ ಮತ್ತಷ್ಟು ಮುಂದೊಯ್ದಿದೆ. ವಿಮರ್ಶಾತ್ಮಕ ಚಿಂತನೆಯು, ಒಂದು ವೇಳೆ ಅದು ಅನಿರೀಕ್ಷಿತವಾಗಿ ತಲೆ ಎತ್ತಿದರೂ, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರವಲ್ಲದೆ ಖಾಸಗಿ ಸಂಸ್ಥೆಗಳಲ್ಲಿಯೂ ಸಹ ಅದನ್ನು ಒಂದು ಅಪರಾಧವನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ.

ಹಿಂದಿನ ಇಂಗ್ಲಿಷ್ ಮಾತನಾಡುವ ಸಣ್ಣ ಸಂಖ್ಯೆಯ ಕುಲೀನರ ವಿರುದ್ಧ ಅಬ್ಬರಿಸಿ ಬೊಬ್ಬಿರಿದರೂ ಅವರ ಪ್ರಾಬಲ್ಯವನ್ನು ರದ್ದುಗೊಳಿಸಲು ನವ-ಫ್ಯಾಸಿಸಂ ಪ್ರಯತ್ನಿಸುವುದಿಲ್ಲ, ಬದಲಿಗೆ, ಅಂತಹ ಪ್ರಾಬಲ್ಯದ ಜಾಗದಲ್ಲಿ  ಇಂಗ್ಲಿಷ್ ಮಾತನಾಡುವ ಒಂದು ಪರ್ಯಾಯ ವಿಮರ್ಶಾಹೀನ ಮತ್ತು ಕುಲೀನರ ಪ್ರಾಬಲ್ಯವನ್ನು ನೆಲೆಗೊಳಿಸಲು ಪ್ರಯತ್ನಿಸುತ್ತದೆ. ಈ ಇಬ್ಬಂದಿತನವು ನವ-ಫ್ಯಾಸಿಸಂನ ಲಕ್ಷಣವೇ ಸರಿ.

ಇದನ್ನೂ ನೋಡಿ: ಪಕ್ಷಾಂತರನಿಷೇಧ ಕಾಯ್ದೆ: ಪ್ರಜಾಪ್ರಭುತ್ವದ ರಕ್ಷಕವೇ, ಪಕ್ಷಾಂತರದ ದ್ವಾರವೇ? Janashakthi Media

Donate Janashakthi Media

Leave a Reply

Your email address will not be published. Required fields are marked *