2 ವರ್ಷಗಳಲ್ಲಿ 59 ರಹಸ್ಯ ವರದಿ: ಕೋಮು ಸಂಘರ್ಷ ತಡೆಗೆ ಗುಪ್ತಚರ ಕ್ರಮ

ಬೆಂಗಳೂರು: ಗುಪ್ತಚರ ಇಲಾಖೆಯು ಹುಬ್ಬಳ್ಳಿ- ಧಾರವಾಡದಲ್ಲಿ ಕೋಮು ಸಂಘರ್ಷಕ್ಕೆ ಪ್ರೇರೇಪಣೆ ನೀಡುವ ವಿಚಾರವಾಗಿ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕಳೆದ 2 ವರ್ಷಗಳಲ್ಲಿ ಈ ಸಂಬಂಧಿಸಿದಂತೆ 59 ರಹಸ್ಯ ವರದಿಗಳನ್ನು ನೀಡಲಾಗಿದೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ. ರಹಸ್ಯ 

ಹುಬ್ಬಳ್ಳಿ- ಧಾರವಾಡ ಕೂಡಾ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಈ ಹಿಂದೆ ಸಾಕಷ್ಟು ಅಹಿತಕರ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಕೋಮು ಸಂಘರ್ಷ ಕ್ಕೆ ಪ್ರೇರೇಪಿಸುವ ಘಟನೆಗಳ ಬಗ್ಗೆ ಪ್ರತಿಯೊಂದು ಪೊಲೀಸ್ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿ ಮುಖಾಂತರ ಮುಂಚಿತವಾಗಿ ಮಾಹಿತಿಯನ್ನು ಸಂಗ್ರಹಿಸಿ ಯಾವುದೇ ರೀತಿಯ ಕೋಮು ಸಂಘರ್ಷ ನಡೆಯದಂತೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ ಎಮದು ಗೃಹ ಇಲಾಖೆ ಮಾಹಿತಿ ನೀಡಿದೆ. ರಹಸ್ಯ 

ಇವುಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪೋಸ್ಟ್‌ಗಳ ಬಗ್ಗೆ ನಿಗಾವಹಿಸುವುದರೊಂದಿಗೆ ಮಾಡಲಾಗಿರುತ್ತದೆ. ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೋಮು ಸಂಘರ್ಷಕ್ಕೆ ಪ್ರೇರೇಪಿಸುವಂತಹ ವಿಚಾರವಾಗಿ 2025 ರಲ್ಲಿ 39 ರಹಸ್ಯ ವರದಿಗಳು ಹಾಗು 2026 ರಲ್ಲಿ 20 ವರದಿಗಳನ್ನು ಗುಪ್ತಚರ ಇಲಾಖೆ ನೀಡಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆ- ಎಡ ಮತ್ತು ಬಲಪಂಥೀಯರ ನಡುವೆ ನೇರ ಹಣಾಹಣಿ-ಮೊಹಮ್ಮದ್‌ ಸಲೀಂ

ಮುಂಜಾಗ್ರತಾ ಕ್ರಮಗಳೇನು?

ಪ್ರತಿದಿನ ಬಾಂಬ್ ನಿಷ್ಕ್ರಿಯ ದಳದಿಂದ ನಗರದ ಪ್ರಮುಖ ಸ್ಥಳಗಳು, ಸ್ಥಾವರಗಳು, ರೈಲು ನಿಲ್ದಾಣ, ಬಸ್ ನಿಲ್ದಾಣ ಇತ್ಯಾದಿಗಳಲ್ಲಿ ಪರಿಶೀಲಿಸಲಾಗುತ್ತಿದೆ. ನಗರದಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಹಾಗೂ ಹೊರ ರಾಜ್ಯದಿಂದ ವ್ಯಾಪಾರಕ್ಕೆ ಬರುವ ಜನರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಅಲ್ಲದೇ ಹೊಟೆಲ್, ಲಾಡ್ಜ್‌ ಗಳನ್ನು ಪರಿಶೀಲಿಸಿ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಲಾಗಿದೆ.

ಕೆಲವು ಆಯ್ದ ಸಿಬ್ಬಂದಿಗಳಿಗೆ ಸ್ವೀಪರ್ ಸೆಲ್‌ಗಳನ್ನು ಪತ್ತೆ ಹಚ್ಚಲು ನಿರ್ದೇಶನ ನೀಡಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಭಾರತ ದೇಶದ ವಿರೋಧ ಸಂಘಟನಗಳಾದ ಎಲ್.ಎ.ಟಿ, ದೀನದಾರ್ ಚನ್ನಬಸವೇಶ್ವರ ಸಿದ್ದಕಿ, ಐ.ಎಮ್, ಪಿಎಫ್‌ಐ, ಸಿಮಿ ಸಂಘಟನೆ ಹಾಗೂ ಇತರೇ ಸಂಘಟನೆಗಳ ಕಾರ್ಯಕರ್ತರ ಚಟುವಟಿಕೆ ಮತ್ತು ಅವರ ಹಣಕಾಸಿನ ವ್ಯವಹಾರದ ಬಗ್ಗೆ ಈಗ ಇರುವ ತಾಂತ್ರಿಕ ವಿದ್ಯಮಾನವನ್ನು ಅಳವಡಿಸಿಕೊಂಡು ಸ್ವೀಪ‌ರ್ ಸೆಲ್‌ಗಳು ಇರುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ. ಮತ್ತು ಅದರ ಮೇಲೆ ನಿಗಾ ವಹಿಸಲಾಗಿದೆ.

ರಾಜ್ಯ ಗುಪ್ತ ವಾರ್ತೆ, ಐ.ಎಸ್.ಡಿ, ಕೇಂದ್ರ ಗುಪ್ತ ದಳ, ಐಬಿ, ಅಧಿಕಾರಿಗಳ ಜೊತೆ ನಿರಂತರವಾರಿ ಸ್ವೀಪರ್ ಸೆಲ್‌ಗಳ ಬಗ್ಗೆ ಸಂವಾದವನ್ನು ನಡೆಸಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಧಾರವಾಡ ನಗರದಲ್ಲಿ ಶಂಕಿತ ಜನರು ಇರುವ ಬಗ್ಗೆ ಪರಿಶೀಲಿಸಿದ್ದು, ಯಾವುದೇ ಶಂಕಿತ ಜನರು ಕಂಡುಬಂದಿರುವುದಿಲ್ಲ ಎಂದು ಗೃಹ ಇಲಾಖೆ ತಿಳಿಸಿದೆ.

ಕಳೆದ ಎರಡು ವರ್ಷಗಳಲ್ಲಿ ಧಾರವಾಡ ನಗರದಲ್ಲಿ ಶಂಕಿತ ಜನರು ಇರುವ ಬಗ್ಗೆ ಪರಿಶೀಲಿಸಿದ್ದು, ಯಾವುದೇ ಶಂಕಿತ ಜನರು ಕಂಡುಬಂದಿರುವುದಿಲ್ಲ. 2025 ರಲ್ಲಿ ಧಾರವಾಡ ನಗರದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಸ್ಲಿಂ ಸಮಾಜದಲ್ಲಿ ಒಂದು ವರ್ಷ ಅವಧಿಯಲ್ಲಿ ಒಂದು ತಿಂಗಳ ಮಟ್ಟಿಗೆ ವಿವಿಧ ಮಸೀದಿಗಳಿಗೆ ತೆರಳಿ ಮಸೀದಿಗಳಲ್ಲಿ ಇದ್ದು ಧರ್ಮದ ವಿಧಿ ವಿಧಾನಗಳ ತರಬೇತಿ ಪಡೆಯುವ ವಾಡಿಕೆ ಇರುವ ಕಾರಣ, ಧಾರವಾಡ ಜನ್ನತ್‌ ನಗರದ ಬಿಲಾಲ್ ಮಸೀದಿಯಲ್ಲಿ 10 ಜನರು ಹಾಗೂ ಆರೋಗ್ಯ ನಗರದ ಯೂಸೂಫೀಯಾ ಮಸೀದಿಗೆ 10 ಜನರು ಗುಜರಾತ್ ರಾಜ್ಯದ ಸೂರತನವರು ಆಗಮಿಸಿದ್ದು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದಿದೆ.

ಇದನ್ನೂ ನೋಡಿ: ಬಸವ ಜಯಂತಿ ವಿಶೇಷ | ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ Janashakthi Media

Donate Janashakthi Media

Leave a Reply

Your email address will not be published. Required fields are marked *