ಸಾಂವಿಧಾನಿಕ –ವಿ ಎನ್ ಲಕ್ಷ್ಮೀನಾರಾಯಣ.
ಸಾಲಿಸಿಟರ್ ಜನರಲ್ ತುಷಾರ್ ಮೆಹತಾ, ಅಂಬೇಡ್ಕರ್ ಎತ್ತಿ ಹಿಡಿಯುವ ಸಾಂವಿಧಾನಿಕ ನೈತಿಕತೆ (constitutional morality)ಯನ್ನು ಅದು ಕಾನೂನಲ್ಲ ಒಂದು ಭಾವನಾತ್ಮಕ ತತ್ವ ಅಷ್ಟೆ ಎಂದು ವ್ಯಕ್ತಿಯ ಲಿಂಗತ್ವದ ಸ್ವ ನಿರ್ಣಯದ ಸ್ವಾತಂತ್ರ ಕುರಿತಾದ ವಾದ ವಿವಾದದ ಸಂದರ್ಭದಲ್ಲಿ ಅತ್ಯುನ್ನತ ನ್ಯಾಯಾಲಯದ ಎದುರು ಪ್ರತಿಪಾದಿಸಿದ್ದಾರೆ. ಒಟ್ಟಾರೆಯಾಗಿ ಅವರ ದೃಷ್ಟಿಯಲ್ಲಿ ಬಹುಸಂಖ್ಯಾತರು ಅನುಮೋದಿಸಿ ಜಾರಿಗೆ ತರುವ ನೀತಿ ನಿಯಮಾವಳಿ ಮಾತ್ರ ಎಲ್ಲರೂ ಒಪ್ಪುವ ಕಾನೂನು. ನೈತಿಕತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗುತ್ತದೆ, ಆದ್ದರಿಂದ ಸಾಂವಿಧಾನಿಕ ನೈತಿಕತೆ ಎಂಬುದು ಹೂಳಲು ಯೋಗ್ಯವಾದದ್ದು ಎನ್ನುತ್ತಾರೆ.
ನೈತಿಕತೆಯೇ ಕಾನೂನು ಅಲ್ಲ ಎಂಬುದು ನಿಜ. ಆದರೆ ಎಲ್ಲಾ ದೇಶದ,ಕಾಲದ ಕಾನೂನು ಆಯಾ ಕಾಲದ ದೇಶದ ನೈತಿಕತೆಯನ್ನು ಆಧರಿಸಿಯೇ ರೂಪುಗೊಂಡಿದೆ ಎಂಬುದನ್ನು ಮರೆಯಬಾರದು. ಅಂದರೆ ಕಾನೂನಿಗೆ ಮನುಷ್ಯತ್ವದ ಗುಣವನ್ನು ಕೊಡುವುದೇ ನೈತಿಕತೆ. ಕಾನೂನಿನಿಂದ ಅದನ್ನು ಕಿತ್ತೆಸೆದರೆ ಯಾಂತ್ರಿಕ ನಿಯಮಾವಳಿ ಉಳಿಯುತ್ತದೆ. ಆಗ ಬಹುಮತ ಎಂಬುದು ಮನುಷ್ಯತ್ವವನ್ನು ಕಳೆದುಕೊಂಡ ರಾಕ್ಷಸ ಶಕ್ತಿಯಾಗಿ ಮನುಷ್ಯರನ್ನು ಆಳುತ್ತದೆ. ವಿಶಾಲ ಮನುಷ್ಯತ್ವದ ನೈತಿಕ ತಳಹದಿಯ ಸರಿ -ತಪ್ಪು ಗಳ ಸ್ಥಾನದಲ್ಲಿ, ರಾಕ್ಷಸ ಬಹುಮತವು ನಿರ್ಣಯಿಸುವ ಕಾನೂನಿನ ಮುದ್ರೆಯನ್ನು ಒತ್ತಿದ ಸರಿ – ತಪ್ಪುಗಳು ಇವನ್ನು ನೈತಿಕವಾಗಿ ಒಪ್ಪದ, ಅಥವಾ ವಿರೋಧಿಸುವ ಅಲ್ಪಮತವನ್ನು ಕಾನೂನಿನ ಪ್ರಕಾರವೇ ಹತ್ತಿಕ್ಕುತ್ತವೆ, ಶಿಕ್ಷಿಸುತ್ತವೆ. ಸಾಂವಿಧಾನಿಕ
ಬಂಡ ವಾಳವಾದವಾದಿ ಬಹುಮತದ ಆಳ್ವಿಕೆಯು ಕಾನೂನನ್ನು ಅದರ ಅಡಿ ಪಾಯವಾದ ನೈತಿಕತೆಯನ್ನು ತನ್ನ ಹಿತಾಸಕ್ತಿಗೆ ಅಡ್ಡಿಯಾದಾಗಲೆಲ್ಲಾ ಪ್ರತ್ಯೇಕಿಸಿ ಮರೆಮಾಚಲು ಯತ್ನಿಸುತ್ತದೆ. ಅದರ ತೀವ್ರರೂಪವಾದ ಫ್ಯಾಸೀ-ಬಂಡವಾಳದ ಆಳ್ವಿಕೆಯು ರಾಕ್ಷಸ ಬಹುಮತದ ಕಾನೂನಿನಲ್ಲಿ ನೈತಿಕತೆಗೆ ಸ್ಥಾನವಿರಲೇ ಬಾರದು ಎಂದು ವಾದಿಸುತ್ತದೆ. ಒಂದುಕಡೆ ಅಲ್ಪಮತದ ವಿರೋಧವೂ ಇರಬಾರದೆಂದು ಮತದಾರರ ಪಟ್ಟಿಯಿಂದ ಅಲ್ಪಮತದ ಸ್ಥಾನವನ್ನು ನಗಣ್ಯಗೊಳಿಸಿ ರಾಕ್ಷಸ ಬಹುಮತವನ್ನು ನೆಲೆಗೊಳಿಸಲು ನಾನಾ ವಿಧವಾಗಿ ಸಂಘಪರಿವಾರದ ಆಳ್ವಿಕೆಯು ಯತ್ನಿಸುತ್ತಿರುವ ಈ ಸಂದರ್ಭದಲ್ಲಿ, ಸಾಂವಿಧಾನಿಕ ನೈತಿಕತೆಯನ್ನು ಕಾನೂನಿನ ಆಚೆ ಇಡಬೇಕೆಂದು ಭಾರತದ ಸಾಲಿಸಿಟರ್ ವಾದಿಸುತ್ತಿರುವುದು ಆಕಸ್ಮಿಕವಲ್ಲ. ಅದು ಬರೀ ಕಾನೂನಿನ ಚರ್ಚೆಯೂ ಅಲ್ಲ. ಅದೊಂದು ಘಾತಕವಾದ, ಅಪಾಯಕಾರಿ ನಿಲುವಿನ ಫ್ಯಾಸೀ-ಬಂಡವಾಳದ ವಿಸ್ತಾರಕ್ಕಾಗಿ ನಡೆಸುತ್ತಿರುವ ರಾಜಕೀಯ ಹುನ್ನಾರ.
ಇದನ್ನೂ ನೋಡಿ : ಬಗೆದಷ್ಟೂ..ಮುಗಿಯದ SIR ಬಗ್ಗಡ : ದೇಶದ ಜನರನ್ನೇ ಪರದೇಶಿಗಳನ್ನಾಗಿಸುತ್ತಿದೆ Janashakthi Media
