ಕೊಪ್ಪಳ: ನಗರದಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ವಿರೋಧಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಜಿಲ್ಲಾ ಸಮಿತಿಯು ಪ್ರತಿಭಟನೆ ನಡೆಸಿತು.
ಸರ್ಕಾರ ಕಾರ್ಮಿಕ ಸಂಹಿತೆಗಳ ರಚನೆಯ ಹಂತದಿಂದಲೂ ಕಾರ್ಮಿಕ ಸಂಘಟನೆಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಭಾರತದ ಕಾರ್ಮಿಕರ ಜೀವನಕ್ಕೆ ಸಂಬಂಧಿಸಿದಂತಹ ಮಹತ್ವದ ವಿಷಯದ ಬಗ್ಗೆ ಚರ್ಚಿಸಲು ಭಾರತೀಯ ಕಾರ್ಮಿಕ ಸಮ್ಮೇಳನವನ್ನೂ ಕರೆದಿಲ್ಲ. ಇದು ಭಾರತವು ಬದ್ಧವಾಗಿರುವ ಅಂತರರಾಷ್ಟ್ರೀಯ ಕಾರ್ಮಿಕ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ಸಿಐಟಿಯು ಪ್ರಮುಖರು ಹೇಳಿದರು.
ಇದನ್ನೂ ಓದಿ: ಮಹಿಳಾ ಮೀಸಲಾತಿಗೆ ಕೇಂದ್ರ ಹಸಿರು ನಿಶಾನೆ; ಲೋಕಸಭೆ 816ಕ್ಕೆ ವಿಸ್ತರಣೆ
ಕಾಯ್ದೆಯು ಸಂಘಟನೆಗೆ ಕಠಿಣ ನಿಯಮಗಳನ್ನು ವಿಧಿಸಿದೆ. ಉದ್ಯೋಗದಾತರ ಕಾನೂನುಗಳ ಉಲ್ಲಂಘನೆಗಳನ್ನು ಅಪರಾಧವಲ್ಲದಂತೆ ಮಾಡುವುದಾಗಿದೆ, ಕಾಯ್ದೆ ಒಂದು ವೇಳೆ ಜಾರಿಗೆ ಬಂದರೆ ಮುಷ್ಕರದ ಹಕ್ಕು ಅಸಾಧ್ಯವಾಗುತ್ತದೆ. ಕಾಯಂ ಅವಧಿಯ ಉದ್ಯೋಗ ಇಲ್ಲವಾಗುತ್ತದೆ. ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ದುರ್ಬಲಗೊಳಿಸುವುದು ಆಗುತ್ತದೆ ಎಂದು ಪ್ರತಿಭಟನಾ ನಿರತರು ಹೇಳಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ, ಪದಾಧಿಕಾರಿಗಳಾದ ಅಮರೇಶ ಡಾಣಿ, ಕಂಠಿ ಬಸವರಾಜ, ಶರಣಪ್ಪ, ರವಿ ಜೋಶಿ, ರಾಮಕೃಷ್ಣ, ಕಟ್ಟಡ ಕಾರ್ಮಿಕರ ಸಂಘದ ಕಾಸಿಂ ಸರ್ದಾರ್, ಗ್ರಾಮ ಪಂಚಾಯಿತಿ ಸಂಘಟನೆಯ ಕಳಕೇಶ, ವೀರಯ್ಯ ಹಿರೇಮಠ, ಉಮರ್, ಸಣ್ಣಮ್ಮ ಗುಂಡಣ್ಣವರ, ಪಾರ್ವತಮ್ಮ, ಲಕ್ಷ್ಮಮ್ಮ ಎನ್. ಇತರರು ಇದ್ದರು.
ಇದನ್ನೂ ನೋಡಿ: ಗಾಳಿ ದುರಗಪ್ಪ ಫ್ಯೂಷನ್ ಮ್ಯೂಸಿಕ್ – ತಲೆದೂಗದೆ ಇರೋದು ಅಸಾಧ್ಯ! Janashakthi Media
