ದಲಿತ ಮಹಿಳೆ ಅವಮಾನ ಆರೋಪ; ಎಂಎಸ್‌ಐಎಲ್ ಅಧಿಕಾರಿಗಳ ವಿರುದ್ಧ ದೂರು

ಬೆಂಗಳೂರು: ಎಂಎಸ್‌ಐಎಲ್ ಅಧಿಕಾರಿಗಳು ದಲಿತ ಮಹಿಳೆಯನ್ನು ಅವಮಾನ ಮಾಡಿದ್ದಾರೆ. ಎಂಎಸ್‌ಐಎಲ್ ನಲ್ಲಿ ಕೆಲಸ ಮಾಡುತ್ತಿರುವ ದಲಿತ ಮಹಿಳೆಯ ವಿರುದ್ಧ ಕಳ್ಳತನ ಆರೋಪ ಮಾಡಿದ್ದಾರೆ. ಎಂಎಸ್‌ಐಎಲ್ ಚಿಟ್ ಫಂಡ್ ಚೆಕ್ ಬುಕ್ ಕಳ್ಳತನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ತಪಾಸನೆ ನೆಪದಲ್ಲಿ ಕೊಠಡಿಗೆ ಕರೆದೋಯ್ದು ಮಹಿಳೆಗೆ ಜಾತಿನಿಂದನೆ ಮಾಡಿದ್ದಾರೆ.

ಅಲ್ಲದೆ ಲೈಂಗಿಕ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆರೋಪ ಕೇಳಿ ಬಂದಿದೆ. ಎಂಎಸ್‌ಐ ಜನರಲ್ ಮ್ಯಾನೇಜರ್ ಚಂದ್ರಶೇಖರ್ ಡೆಪ್ಯೂಟಿ ಮ್ಯಾನೇಜರ್ ನಳಿನಿ ಮತ್ತು ಎಜಿಎಂ ವೀಣಾ ವಿರುದ್ಧ ಈ ಒಂದು ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಲೋಕಸಭಾ ಸ್ಥಾನ 816ಕ್ಕೆ ಹೆಚ್ಚಳ; ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರ ಸಿದ್ಧತೆ

ಈ ಹಿನ್ನೆಲೆ ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. ಅತ್ತ ಮಹಿಳೆಯ ವಿರುದ್ಧ ಅಧಿಕಾರಿಗಳು ಸಹ ಪ್ರತಿದೂರು ನೀಡಿದ್ದಾರೆ.

ವಿಧಾನಸೌಧ ಪೊಲೀಸ್ ಠಾಣೆಗೆ ಅಧಿಕಾರಿಗಳಿಂದಲೂ ದೂರು ಸಲ್ಲಿಕೆಯಾಗಿದೆ. ಎಂ ಎಸ್ ಐ ಎಲ್ ಚಿಟ್ ಫಂಡ್ ಚೆಕ್ ಬುಕ್ ದುರುಪಯೋಗ ಆರೋಪದ ಅಡಿ ದೂರು ಸಲ್ಲಿಸಿದ್ದಾರೆ.

ಚಿಟ್ ಫಂಡ್ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡ ಆರೋಪ ಕೇಳಿ ಬಂದಿದೆ.ಹಾಗಾಗಿ ಮಹಿಳೆಯ ವಿರುದ್ಧ ಅಧಿಕಾರಿಗಳು ದೂರು ದಾಖಲಿಸಿದ್ದಾರೆ ಸದ್ಯ ಪ್ರಕರಣ ದಾಖಲಿಸಿಕೊಂಡು ವಿಧಾನಸೌಧ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ನೋಡಿ: ಇರಾನ್ ಪ್ರತಿರೋಧ – ಯು.ಎಸ್ (ಅಮೆರಿಕ) ಪತನದ ಆರಂಭವೆ? ಡಾ. ಬಿ.ಆರ್. ಮಂಜುನಾಥ್ , ಗುರುರಾಜ ದೇಸಾಯಿ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *