ದುರಂಧರ್ 2 (ದಿರಿವೇಂಜ್): ಚುನಾವಣೆಯ ಮಧ್ಯೆ, ʼಪ್ರಚಾರ ಸಿನಿಮಾʼ ದ ಅಬ್ಬರ

ಬಲಪಂಥೀಯ ರಾಜಕೀಯ ಶಕ್ತಿಗಳು ತಮ್ಮ ಪ್ರಭಾವವನ್ನು ಹೆಚ್ಚಿಸಲು ಸಿನಿಮಾವನ್ನು ವಿಪರೀತವಾಗಿ ಬಳಸಿಕೊಳ್ಳುತ್ತವೆ. ದುರಂಧರ್ 2 (ದಿ ರಿವೆಂಜ್) ಇದಕ್ಕೆಇತ್ತೀಚಿನ ಉದಾಹರಣೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಈ ಸಿನಿಮಾ ಬಿಡುಗಡೆಯಾಗಿರುವುದು, ಇದರ ಪ್ರಚಾರದಲ್ಲಿ ಬಿಜೆಪಿ ನಾಯಕರು ಮತ್ತು ಅದರ ಸರ್ಕಾರಗಳು ಸಹಕರಿಸುವುದು, ವಿವಿಧ ಭಾಷೆಗಳ ಸಿನಿಮಾ ಮತ್ತು ಕ್ರಿಕೆಟ್‌ ಸೂಪರ್‌ ಸ್ಟಾರ್‌ಗಳು ದುರಂಧರ್ ಅನ್ನು ಹೊಗಳಲು ಸಂಘಟಿತ ಪ್ರಯತ್ನ ಮಾಡುವುದು, ಇವೆಲ್ಲವೂ ಸಿನಿಮಾದ ಉದ್ದೇಶ ಏನೆಂಬುದನ್ನು ಹೇಳುತ್ತವೆ. ಚಲನಚಿತ್ರೋದ್ಯಮದಲ್ಲಿ ಮತಾಂಧ ಶಕ್ತಿಗಳ ಪ್ರಭಾವ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ದುರಂಧರ್ ಸಿನಿಮಾ ಮತ್ತೊಂದು ಹೊಸ ಪ್ರವೃತ್ತಿಗೆ ಕಾರಣವಾಗುತ್ತದೆಯೇ ಎಂದು ಎಚ್ಚರಿಕೆಯಿಂದ ಪರಿಗಣಿಸುವುದು ಅವಶ್ಯಕ. ದುರಂಧರ್

– ಸಿ. ಸಿದ್ದಯ್ಯ

ಈ ಸಿನಿಮಾದವರೇ ಹೀಗೆ, ಸಂದರ್ಭ ಬಳಸಿಕೊಂಡು ಹಣ ಗಳಿಸುವಲ್ಲಿ ಚಾಣಾಕ್ಷರು ಎಂಬ ಮಾತುಗಳಿವೆ. ಮಾಧ್ಯಮಗಳಲ್ಲಿ ಒಂದು ಸಂಚಲನ ಸುದ್ದಿ ಬಂದರೆ ಸಾಕು, ಆ ಹೆಸರಿನಲ್ಲಿ ಸಿನಿಮಾ ಮಾಡಿ ಬಿಡುಗಡೆ ಮಾಡುತ್ತಾರೆ. ಸೋಷಿಯಲ್‌ ಮೀಡಿಯಾದ ಈ ಯುಗದಲ್ಲಿ ಇದು ಇನ್ನಷ್ಟು ವೇಗವಾಗಿ ನಡೆಯುತ್ತವೆ. ಯಾವುದಾದರೂ ಒಂದು ಸಿನಿಮಾ, ರಾಜಕೀಯ ಮತ್ತು ವ್ಯಾಪಾರದ ಅಂಶಗಳು ಒಟ್ಟಿಗೆ ಸೇರಿದಾಗ ಹೇಳುವುದೇನಿದೆ?

ಅಂದು ಜರ್ಮನಿಯಲ್ಲಿ, ಹಿಟ್ಲರನ ನಾಜಿ ಸರ್ಕಾರವು ಸಾರ್ವಜನಿಕರಲ್ಲಿ ಯೆಹೂದ್ಯ ವಿರೋಧಿ ಮನೋಭಾವವನ್ನು ಮೂಡಿಸಲು ಸಿನಿಮಾ ಬಳಸಿಕೊಂಡಿತು. ಸಿನಿಮಾವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಹಿಟ್ಲರ್ ತಮ್ಮಆತ್ಮಚರಿತ್ರೆ ʻಮೈನ್ ಕ್ಯಾಂಫ್ʼ (Mein Kampf) ನಲ್ಲಿಯೇ ಬರೆದಿದ್ದಾರೆ. ಗೋಬೆಲ್ಸ್ ಎಂಬಾತ ಪ್ರಚಾರ ಸಚಿವರಾದ ತಕ್ಷಣವೇ ಚಲನಚಿತ್ರ ವಿಭಾಗವನ್ನು ಪ್ರತ್ತೇಕವಾಗಿ ಸ್ಥಾಪಿಸಲಾಯಿತು. ಆ ರೀತಿಯ ಸಿನಿಮಾದಲ್ಲಿ, ಯೆಹೂದ್ಯ ವಿರೋಧಿ ಮತ್ತು ನಾಜಿ ಪ್ರಚಾರವು ಪ್ರಧಾನ ಅಂಶಗಳಾಗಿದ್ದವು.

ಇದನ್ನೂ ಓದಿ: ಕೇರಳ ವಿಧಾನಸಭಾ ಚುನಾವಣೆ: 33.28% ಮತದಾನ ದಾಖಲು

ಅವರು ಅಂತಹ ಪ್ರಚಾರಗಳಲ್ಲಿ ನಾಜಿ ಸರ್ಕಾರದ ಪರವಾಗಿ ಪ್ರಚಾರ ನಡೆಸಲು ನಿಜವಾದ ಸೈನ್ಯವನ್ನು, ಆಡಳಿತ ಯಂತ್ರವನ್ನು ಬಳಸಿಕೊಂಡರು. ಇಂದು ಭಾರತ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬೀಸುತ್ತಿರುವ ‘ನವ – ದೇಶಭಕ್ತಿ’ ಚಲನಚಿತ್ರಗಳ ಅಲೆಯನ್ನು ಗಮನಿಸಿದಾಗ ಇದು ನೆನಪಿಗೆ ಬರುತ್ತದೆ. ಆದಿತ್ಯ ಧರ್ ಬರೆದು ನಿರ್ದೇಶಿಸಿರುವ ದುರಂಧರ್ 2 (ದಿ ರಿವೆಂಜ್) – (Dhurandhar 2: The Revenge) ಇದಕ್ಕೆ ಮತ್ತಷ್ಟು ಬಲವಾದ ನಿರ್ಧೇಶನವಾಗಿ ನಿಲ್ಲುತ್ತದೆ. ಈ ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್ ಮಾಧವನ್, ಅಕ್ಷಯ್ ಖನ್ನಾ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಭಾಗ 2 ಬಿಡುಗಡೆಗೆ ಅವಸರವೇನೂ ಇರಲಿಲ್ಲ

ಡುರಂಧರ್ 1- 2025 ಡಿಸೆಂಬರ್‌ನಲ್ಲಿ ಬಿಡುಗಡೆಯಾಯಿತು. ಎರಡನೇ ಭಾಗವನ್ನು ತಕ್ಷಣ ಬಿಡುಗಡೆ ಮಾಡುವಂತಹ ಅವಸರವೇನೂ ಇರಲಿಲ್ಲ. ಆದರೂ ಸಿನಿಮಾ ತಣ್ಣಗಾಗಲು ಬಿಡಬಾರದು ಅಲ್ಲವೇ? ಈಗಲೇ ತೆರೆಗೆ ಬಂದರೆ, ಮೊದಲ ಚಿತ್ರದ ಪರಿಣಾಮವೂ ಅದಕ್ಕೆ ಸೇರುತ್ತದೆ. ಅದಕ್ಕಾಗಿಯೇ ಹೆಚ್ಚಿನ ಉತ್ಸಾಹದಿಂದ ಎರಡನೇ ಭಾಗವನ್ನೂ ಬಿಡುಗಡೆ ಮಾಡಿದರು. ಮೊದಲ ಭಾಗದ ರೀತಿಯಲ್ಲೇ ಬಲವಾದ ಪಾತ್ರವರ್ಗ. ವಿಶೇಷವಾಗಿ ರಣವೀರ್ ಸಿಂಗ್ ಅವರನ್ನು ಪ್ರಮುಖ ಪಾತ್ರದಲ್ಲಿ ತೋರಿಸುವ ಮೂಲಕ, ತಾವು ಹೇಳುತ್ತಿರುವ ವಿಷಯಕ್ಕೆ ಆಕರ್ಷಣೆಯನ್ನು ಹೆಚ್ಚಿಸಿದರು. ಚಿತ್ರದುದ್ದಕ್ಕೂ ಸಾಗುವ ಹಿಂಸಾಚಾರ ಮತ್ತು ಹತ್ಯೆಗಳಿಗೆ ಅಸಹ್ಯದ ಭಾವನೆಯಿಲ್ಲದೆ ಅದರಲ್ಲಿ ವೀರತ್ವವನ್ನು ತುಂಬುವಲ್ಲಿ ಯಶಸ್ವಿಯಾದರು.

ಜಸ್ಕಿರತ್ ಸಿಂಗ್ ರಂಗಿ (ರಣವೀರ್ ಸಿಂಗ್) ಎಂಬ ಸಿಖ್ ಹೀರೋ ಒಬ್ಬರು ಹಮ್ಜಾ ಅಲಿ ಮಜಾರಿಯಾಗಿ ಪಾಕಿಸ್ತಾನದ ಹಿಂದಿನ ರಾಜಧಾನಿ ಕರಾಚಿ ಪ್ರದೇಶದಲ್ಲಿರುವ ಸಮಾಜ ವಿರೋಧಿ ಶಕ್ತಿಗಳ ಭದ್ರಕೋಟೆಯಾದ ಲ್ಯಾರಿ ಎಂಬ ಸ್ಥಳಕ್ಕೆ ನುಗ್ಗಿ, ಅಲ್ಲಿದ್ದ ವಿರೋಧಿಗಳನ್ನು ನಿರ್ಮೂಲನೆ ಮಾಡುವುದೇ ಈ ಚಿತ್ರದಲ್ಲಿನ ಥೀಮ್. ಮೊದಲ ಭಾಗದಲ್ಲಿ ಅಕ್ಷಯ್ ಖನ್ನಾ ಪ್ರಧಾನವಾಗಿ ಪ್ರಾಬಲ್ಯ ಸಾಧಿಸಿದರೆ, ಎರಡನೇ ಭಾಗವು ರಣವೀರ್ ಸುತ್ತ ಸುತ್ತುತ್ತದೆ.

ʻನೋಟು ಅಮಾನ್ಯೀಕರಣʼ ಒಂದು ವಿಜಯವಂತೆ

ಈ ಸಿನಿಮಾದಲ್ಲಿ ಪಾಕಿಸ್ತಾನದ ಭೂಗತಲೋಕ, ಭಯೋತ್ಪಾದನೆ, ನಕಲಿ ನೋಟು ಜಾಲ, ಡ್ರಗ್ಸ್ ಸಮಸ್ಯೆ, ಖಲಿಸ್ತಾನಿ ಅಂಶಗಳು ಮತ್ತು ʻಸರ್ಜಿಕಲ್ ಸ್ಟ್ರೈಕ್ʼ ಸೇರಿದಂತೆ ಹಲವಾರು ವಿಷಯಗಳನ್ನು ಚಿತ್ರಕಥೆಯಲ್ಲಿ ಸೇರಿಸಲಾಗಿದೆ. 2014 ರ ಚುನಾವಣಾ ಪ್ರಚಾರ ʻಮೋದಿ ವಿಜಯʼ, ಮತ್ತೆ2019 ರಲ್ಲಿ ʻನೋಟು ಅಮಾನ್ಯೀಕರಣʼ ಇವುಗಳನ್ನುನೈಜ ಘಟನೆಗಳು ಎಂಬಂತೆ ತೋರಿಸಿದಂತೆ ಕಾಣಿಸುತ್ತದೆ. ಭಯೋತ್ಪಾದನೆಯನ್ನು ಕೊನೆಗೊಳಿಸುವುದಕ್ಕಾಗಿಯೇ ನೋಟು ರದ್ದು ಮಾಡಲಾಗಿದೆ ಎನ್ನುವುದು ಅಂದಿನ ರಾಜಕೀಯ ಪ್ರಚಾರವಾಗಿತ್ತು. ವಾಸ್ತವದಲ್ಲಿ, ಅದರ ಸಂಬಂಧವಿಲ್ಲದೆ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿರುವುದನ್ನು ನಾವು ನೋಡಿದ್ದೇವೆ. ಆದರೆ, ನಿರ್ದೇಶಕರು ನೋಟು ರದ್ದತಿಯು ದೊಡ್ಡ ಸಾಧನೆ ಮಾಡಿದೆ ಎಂದು ಹೇಳುವುದಕ್ಕೆ ವೀರೋಚಿತ ದೃಶ್ಯಗಳನ್ನು ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ. ನೋಟು ರದ್ಧತಿಯ ವೈಫಲ್ಯಗಳನ್ನು ವಿಜಯವೆಂಬತ್ತೆ, ಇದನ್ನು ಟೀಕಿಸುವವರೆಲ್ಲರೂ ದೇಶ ದ್ರೋಹಿಗಳಂತೆ ತೋರಿಸುವುದು ಇಂತಹ ಪ್ರಚಾರ ಸಿನಿಮಾದ ಪ್ರಮುಖ ಲಕ್ಷಣವಾಗಿದೆ.

ಈ ಸಿನಿಮಾದಲ್ಲಿ ಭಯೋತ್ಪಾದಕರಲ್ಲದೆ, ಸರ್ಕಾರವನ್ನು ಟೀಕಿಸುವವರು ಮತ್ತು ಭಿನ್ನಾಭಿಪ್ರಾಯದ ಧ್ವನಿ ಎತ್ತುವವರೂ ಇದ್ದಾರೆ.ಸೈದ್ಧಾಂತಿಕ ನೆಲೆಯಲ್ಲಿ ಧಾರ್ಮಿಕ ರಾಜಕೀಯವನ್ನು ವಿರೋಧಿಸುವ ಎಲ್ಲರನ್ನೂ ಒಟ್ಟುಸೇರಿಸಿ, ಇವರೆಲ್ಲರೂ ದೇಶಕ್ಕೆ ಹಾನಿ ಮಾಡುವವರು ಎಂಬಂತೆ ಚಿತ್ರಿಸಲಾಗಿದೆ. ದುರಂಧರ್‌ ಸಿನಿಮಾ ಪ್ರಭಾವದ ಬಗ್ಗೆ ಬಿಬಿಸಿ, ಅಲ್ ಜಜೀರಾದಿಂದ ಹಿಡಿದು ಪ್ರಮುಖ ಮಾಧ್ಯಮಗಳು ಒಟ್ಟು ರಾಜಕೀಯ ದೃಷ್ಟಿಕೋನದಿಂದಲೇ ಚರ್ಚಿಸುತ್ತಿರುವುದು ಕಾಕತಾಳೀಯವೇನಲ್ಲ. ಹೀರೋಗಳಲ್ಲಿ ಸೂಪರ್‌ ಹೀರೋ ಯಾರೆಂದರೆ ಮೋದಿಯೇ ಎನ್ನುವಂತೆ ಚಿತ್ರಿಸಲಾಗಿದೆ ಎಂದು ಒಂದು ಪತ್ರಿಕೆ ಬರೆದಿದೆ. ಸಿಕ್ಸ್ ಪ್ಯಾಕ್‌ಗಳೊಂದಿಗೆ ಸ್ನಾಯುಗಳ ಪರ್ವತಗಳಂತೆ ಕಾಣುವ ಎಲ್ಲಾ ವೀರರು ಅವರ ಮುಂದೆ ತಲೆಬಾಗುತ್ತಾರೆ ಎಂದು ಅವರು ತಮಾಷೆ ಮಾಡಿದ್ದಾರೆ.

ನಿಜವಾದ ಕಥೆ ಎಂಬ ಭ್ರಮೆಸೃಷ್ಟಿಸುವುದು

ಮೋದಿ ಮಾತ್ರವಲ್ಲ, ಅಜಿತ್ ದೋವಲ್ ಅವರಂತಹರು ಕೂಡಾ ಭದ್ರತಾ ವ್ಯವಸ್ಥೆಗಳನ್ನು ಅದ್ಭುತವಾಗಿ ನಡೆಸುತ್ತಿರುವ ಚಿತ್ರಣವನ್ನು ನೀಡುತ್ತದೆ. ಕರಾಚಿ ಮತ್ತು ಸುತ್ತಮುತ್ತಲಿನ ದರೋಡೆಕೋರರ ಬಗ್ಗೆ – ಭಾರತದಲ್ಲಿನ ಸಮಾಜವಿರೋಧಿ ಮತ್ತು ಭಯೋತ್ಪಾದಕ ಅಂಶಗಳೊಂದಿಗೆ (ವಿಶೇಷವಾಗಿ ಮುಂಬೈ) ಅವರ ಸಂಬಂಧಗಳು, ಬಲೂಚ್ ಮತ್ತು ಪಶ್ತೂನ್‌ಗಳ ನಡುವಿನ ಸಂಘರ್ಷಗಳು ಮತ್ತು ಭಾರತದಲ್ಲಿ ಗಲ್ಲಿಗೇರಿಸುವಿಕೆಯಂತಹ ಘಟನೆಗಳು ಸೇರಿದಂತೆ – ನಿರೂಪಣೆಗಳನ್ನು ಹೆಣೆಯುವ ಮೂಲಕ, ನೀವು ನೋಡುತ್ತಿರುವುದು ನಿಜವಾದ ಕಥೆ ಎಂಬ ಭ್ರಮೆಯನ್ನು ನಿರ್ದೇಶಕರು ಸೃಷ್ಟಿಸುತ್ತಾರೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ

ನಿಜ, ಈ ಕಲ್ಪನೆಯನ್ನು ಮಿಶ್ರಣಮಾಡಿ ಈ ರೀತಿಯಾಗಿ ಪ್ರತೀಕಾರದ ಹಿಂಸೆಯು ದೇಶ ಭಕ್ತಿ ಮಸಾಲೆ ರಾಜಕೀಯಕ್ಕೆ ಅನುಮೋದನೆಯ ಅಧಿಕೃತ ಮುದ್ರೆಗೆ ಸಮನಾಗಿರುತ್ತದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಈ ಚಿತ್ರ ಬಿಡುಗಡೆಯಾಗುವುದನ್ನು ನಾವು ನೋಡಿದ್ದೇವೆ, ಇದರ ಪ್ರಚಾರದಲ್ಲಿ ಬಿಜೆಪಿ ನಾಯಕರು ಮತ್ತು ಸರ್ಕಾರಗಳು ಸಹಕರಿಸುವುದನ್ನು ನಾವು ನೋಡಿದ್ದೇವೆ. ಇನ್ನೂ ಕುತೂಹಲಕಾರಿ ಸಂಗತಿಯೆಂದರೆ, ವಿವಿಧ ಭಾಷೆಗಳ ಸೂಪರ್‌ ಸ್ಟಾರ್‌ಗಳು ದುರಂಧರ್ ಅವರನ್ನು ಹೊಗಳಲು ಸಂಘಟಿತ ಪ್ರಯತ್ನ ಮಾಡಿದ್ದಾರೆ. ನಿರ್ದೇಶಕರ ಮೇಲೆ ಅಭಿನಂದನೆಗಳ ಸುರಿಮಳೆ ಸುರಿಸುತ್ತಿದ್ದಾರೆ.

ರಜನಿಕಾಂತ್, ಅಲ್ಲು ಅರ್ಜುನ್, ಎನ್‌ಟಿಆರ್, ರಾಮ್ ಚರಣ್, ಮಹೇಶ್ ಬಾಬು, ಪ್ರೀತಿ ಜಿಂಟಾ, ಅನುಪಮ್ ಖೇರ್, ಕರಣ್ ಜೋಹರ್, ರಾಜಮೌಳಿ, ಹೀಗೆ ಹೊಗಳಿಕೆಯ ಸುರಿಮಳೆ ಗೈದರು. ಐಪಿಎಲ್‌ ನಡೆಯುತ್ತಿದ್ದ ಸಮಯದಲ್ಲೇ ಕ್ರಿಕೆಟ್‌ ಸೂಪರ್‌ ಸ್ಟಾರ್‌ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕೂಡಾ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ರೀತಿಯಾಗಿ ಪ್ರಶಂಸೆಗಳು ಹರಿದು ಬರುತ್ತಿದ್ದಂತೆ, ನಿರ್ದೇಶಕರ ಪ್ರತಿಕ್ರಿಯೆ ಒಂದುಪ್ರ ಚಾರ ತಂತ್ರವಾಗಿತ್ತು. ತಮಾಷೆಯೆಂದರೆ ಇವರೆಲ್ಲರೂ ಕೇವಲ ಸಿನಿಮಾವನ್ನು ಹೊಗಳುವುದಕಷ್ಟೇ ನಿಲ್ಲದೆ, ಅದು ತೋರಿಸಿದ ದೇಶಭಕ್ತಿ ತಮ್ಮನ್ನು ಉದ್ವೇಗಕ್ಕೆ ಒಳಪಡಿಸಿತು ಎಂದು ಹೊಗಳಿದ್ದು ಗಮನಾರ್ಹ.

ಒಂದು ಪ್ರಚಾರ ಸಿನಿಮಾ

ಉದಾಹರಣೆಗೆ, ರಜನಿಕಾಂತ್ ಪ್ರತಿಯೊಬ್ಬ ಭಾರತೀಯನೂ ತಪ್ಪದೇ ನೋಡಬೇಕಾದ ಸಿನಿಮಾ ಎಂದು “ಬಾಸ್ ಆಫ್ ದಿ ಬಾಕ್ಸ್ ಆಫೀಸ್” ಎಂದು ʻಜೈ ಹಿಂದ್ʼ ನೊಂದಿಗೆ, ಹೊಗಳಿದರು. ಆ ತಕ್ಷಣವೇ ನಿರ್ದೇಶಕ ಆದಿತ್ಯ ಧರ್, “ನಿಮ್ಮ ಚಲನಚಿತ್ರಗಳ ಮೂಲಕವೇ ನಾವೆಲ್ಲರೂ ನಿಜವಾಗಿಯೂ ಮನರಂಜನೆ ಎಂದರೇನು, ಮತ್ತು ಪ್ರೇಕ್ಷಕರನ್ನು ಶಿಳ್ಳೆ ಹೊಡೆಯುವುದು ಹೇಗೆ ಎಂದು ಕಲಿತಿದ್ದೇವೆ.”ಎಂದು ಪ್ರತಿಕ್ರಿಯಿಸಿದರು.

ಇದನ್ನೂ ನೋಡಿ: ʼಮಿಥಿಲೆಯ ಮಾವಿನ ಮರʼದಿಂದ ಎರಡು ಕವಿತೆಗಳು Janashakthi Media

ಎಲ್ಲಾ ವಿಷಯಗಳನ್ನು ಪರಿಗಣಿಸಿದಾಗ, ಈ ಚಿತ್ರವು ಇಲ್ಲಿಯವರೆಗೆ ಬಿಡುಗಡೆಯಾದ ಎಲ್ಲಾ ಚಲನಚಿತ್ರಗಳಿಗಿಂತ ಉತ್ತಮವಾಗಿದೆ ಎಂದು ಅವರು ತೀರ್ಮಾನಿಸಿದ್ದಾರೆ. “ಒಂದು ಪ್ರಚಾರ ಸಿನಿಮಾಕ್ಕೆ ಇಷ್ಟೆಲ್ಲಾ ಗದ್ದಲವೇಕೆ?” ಎಂದು ಕೆಲವರು ವಿಮರ್ಶಾತ್ಮಕವಾಗಿ ಹೇಳಿದಾಗ ಅವರ ಮೇಲೆ ವಿವಿಧ ರೀತಿಯ ದಾಳಿಗಳು ನಡೆದವು.

ಶಾರುಖ್ ಖಾನ್ ಅವರ ದೇಶಭಕ್ತಿಯನ್ನು ಪ್ರಶ್ನಿಸಲು ಪ್ರಾರಂಭಿಸಿದರು

ಶಾರುಖ್ ಖಾನ್ ಅವರು ತಾನು ಇನ್ನೂ ನೋಡಿಲ್ಲ ಎಂದು, ತಾನು ಎಲ್ಲಾ ಸಿನಿಮಾಗಳನ್ನು ನೋಡುವುದಿಲ್ಲ ಎಂದು ಹೇಳಿದ ಕೂಡಲೇ ಟ್ರೋಲ್‌ಗಳು ಅವರ ದೇಶಭಕ್ತಿಯನ್ನು ಪ್ರಶ್ನಿಸಲು ಪ್ರಾರಂಭಿಸಿದರು; ಈ ಸಂದರ್ಭದಲ್ಲಿಯೇ, ಚಿತ್ರದ ಗಳಿಕೆ ರೂ. 1,300 ಕೋಟಿ ತಲುಪಿತು, ಇದು ದೇಶದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿತು.

ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಈ ಬಗ್ಗೆ ಪ್ರತಿಕ್ರಿಯಿಸಿ, ದುರಂಧರ್ 2 ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಚಿತ್ರಿಸಿರುವುದು ಎನು ಎಂಬುದು ಅಷ್ಟು ಮುಖ್ಯವಲ್ಲ, ನಮ್ಮ ದೇಶದ ಕುರಿತು ಏನನ್ನು ಹೇಳಿದೆ ಎಂಬುದು ಮುಖ್ಯ. ಚಿತ್ರದ ನಾಯಕನ ಶ್ರೇಷ್ಠತೆಯನ್ನು ಎತ್ತಿ ತೋರಿಸಿದರೂ ಪರವಾಗಿಲ್ಲ, ವಿರುದ್ಧವಾಗಿ ಮಾತನಾಡುವ ಯಾರನ್ನಾದರೂ ಖಳನಾಯಕರು ಅಥವಾ ದೇಶದ್ರೋಹಿಗಳು ಎಂದು ಬ್ರಾಂಡ್ ಮಾಡುವುದು ತಪ್ಪು ಎಂದು ಪರಿಸ್ಥಿತಿಯನ್ನು ವಿಶ್ಲೇಷಿಸಿದರು.

ಈ ಇಡೀ ದೇಶವೇ ವಿವಿಧ ವಿಧ್ವಂಸಕ ಶಕ್ತಿಗಳಿಂದ ತುಂಬಿದೆ ಎಂದು ಚಿತ್ರಿಸುವುದು ಹೇಗೆ ಸೂಕ್ತ ಎಂಬುದು ವಿಮರ್ಶಕರ ಪ್ರಮುಖ ಪ್ರಶ್ನೆ: ಚಲನಚಿತ್ರೋದ್ಯಮದಲ್ಲಿ ಮತಾಂಧ ಶಕ್ತಿಗಳ ಪ್ರಭಾವ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ದುರಂಧರ್ ಸಿನಿಮಾ ಮತ್ತೊಂದು ಹೊಸ ಪ್ರವೃತ್ತಿಗೆ ಕಾರಣವಾಗುತ್ತದೆಯೇ ಎಂದು ಎಚ್ಚರಿಕೆಯಿಂದ ಪರಿಗಣಿಸುವುದು ಅವಶ್ಯಕ.

ಮಾಹಿತಿಕೃಪೆ: ಪ್ರಜಾಶಕ್ತಿ

Donate Janashakthi Media

Leave a Reply

Your email address will not be published. Required fields are marked *