ಪುದುಚೇರಿ: ಚುನಾವಣ ರ್ಯಾಲಿಯಲ್ಲಿ ಬಿಜೆಪಿ ವಿರುದ್ಧ ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿವಾಗ್ಧಾಳಿ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪುದುಚೇರಿಯು ನಕಲಿ ಔಷಧಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಆರೋಪಿಸಿದ್ದಾರೆ
ಈ ನಕಲಿ ಔಷಧ ತಯಾರಿಕೆ ಕೇವಲ ಭ್ರಷ್ಟಾಚಾರವಲ್ಲ, ಇದೊಂದು ಕೊಲೆಗಡುಕತನ. ಈ ನಕಲಿ ಔಷಧಗಳು ದೇಶಾದ್ಯಂತ ಹಂಚಿಕೆಯಾಗುತ್ತಿದ್ದು, ಜನರ ಜೀವದ ಜತೆ ಆಟವಾಡಲಾಗುತ್ತಿದೆ ಎಂದು ಕಿಡಿಕಾರಿದರು. ಕೇರಳದಲ್ಲಿ ಮಾತನಾಡಿ ರಾಹುಲ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಬ್ಬರನ್ನೂ ಅಹಂಕಾರಿ ಎಂದು ಕರೆದಿದ್ದಾರೆ.
ಇದನ್ನೂ ಓದಿ: ಪತ್ನಿ, ಮಕ್ಕಳಿಗೆ ಕಿರುಕುಳ; ಪತಿ ಬಂಧನ, ಅಕ್ಕಾಪಡೆಯಿಂದ ರಕ್ಷಣೆ
ಬಂಗಾಲ ಮೇಲೆ ಪಾಕ್ ದಾಳಿ ಬೆದರಿಕೆ ವಿಷಯದಲ್ಲಿ ಪ್ರಧಾನಿ ಮೌನ: ದೀದಿ
ಕೋಲ್ಕತಾ: ಪಶ್ಚಿಮ ಬಂಗಾಳದ ಮೇಲೆ ಪಾಕಿ ಸ್ಥಾನ ದಾಳಿ ಮಾಡುತ್ತದೆ ಎಂದು ಬೆದರಿಕೆಗಳು ಬಂದಾಗ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದು ಏಕೆ ಎಂದು ಪಶ್ಚಿಮ ಬಂಗಾ ಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದರು.
ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ ದೀದಿ, ಪಾಕಿಸ್ಥಾನದ ರಕ್ಷಣ ಸಚಿವರು ಕೋಲ್ಕತಾದ ಮೇಲೆ ದಾಳಿ ಮಾಡುತ್ತೇವೆ ಎಂದು ಹೇಳಿದಾಗ, “ನಾವು ಕಠಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಏಕೆ ಹೇಳಲಿಲ್ಲ?. ರವಿವಾರ ಚುನಾವಣ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಈ ವಿಷಯದ ಬಗ್ಗೆ ನೀವು ಒಂದು ಮಾತನ್ನೂ ಎತ್ತಲಿಲ್ಲ. ನೀವು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇಂದು ಬಹಿರಂಗ ಪ್ರಚಾರ ಅಂತ್ಯ:
5 ರಾಜ್ಯಗಳಲ್ಲೂ ರಾಜಕೀಯ ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಗಳ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ಏ.9 ರಂದು ಚುನಾವಣೆ ನಡೆಯಲಿರುವ ಕೇರಳ, ಪುದುಚೆರಿ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಎ.7ರಂದು ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಎ.8 ಮನೆ ಮನೆ ಪ್ರಚಾರಕ್ಕೆ ಅವಕಾಶವಿದೆ. ಇನ್ನು ತಮಿಳುನಾಡು ಹಾಗೂ ಪಶ್ಚಿಮ ಬಂಗಾ ಲ ಬಹಿರಂಗ ಪ್ರಚಾರಕ್ಕೆ ಇನ್ನೂ ಅವಕಾಶವಿದೆ.
ಇದನ್ನೂ ನೋಡಿ: ಜನಾರೋಗ್ಯದಲ್ಲಿ ಕೇರಳ ಮಾದರಿ – ಪ್ರಸನ್ನ ಸಾಲಿಗ್ರಾಮ, ಕೆ.ಎಸ್. ವಿಮಲಾ ಮಾತುಕತೆ Janashakthi Media
