ರಾಣೇಬೆನ್ನೂರ: ಹಾವೇರಿ ವಿಶ್ವ ವಿದ್ಯಾಲಯದ ಅಭಿವೃದ್ಧಿ ದೃಷ್ಟಿಯಿಂದ ಪ್ರಥಮ ಘಟಿಕೋತ್ಸವ ಕಾರ್ಯಕ್ರಮವನ್ನು ಹಾವೇರಿ ವಿಶ್ವವಿದ್ಯಾಲಯದ ಆವರಣದಲ್ಲಿಯೇ ನಡೆಸುವಂತೆ, ಖಾಸಗಿ ಕಾಲೇಜ್ ನಲ್ಲಿ ಕಾರ್ಯಕ್ರಮ ನಡೆಸುತ್ತಿರುವ ಉಪಕುಲಪತಿ ಸರ್ವಾಧಿಕಾರಿ ಧೋರಣೆ ಖಂಡಿಸಿ ಹಾಗೂ ರಾಜ್ಯಪಾಲರು ವಿವಿ ಭೇಟಿ ನೀಡಿ ವಿವಿ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿ ಒತ್ತಾಯಿಸಿ ರಾಣೆಬೆನ್ನೂರಿನ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಮೆಣಸಿನಹಾಳ ತಿಮ್ಮನಗೌಡರ ಪ್ರತಿಮೆ ಎದುರು “ಪ್ರತಿರೋಧ ಸಭೆ” ನಡೆಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಹಾವೇರಿಯ ಸರ್ಕಾರಿ ವಿಶ್ವವಿದ್ಯಾಲಯದ ಆವರಣದಲ್ಲಿಯೇ ನಡೆಸಬೇಕೆಂದು ವಿದ್ಯಾರ್ಥಿಗಳು, ಉಪನ್ಯಾಸಕರು, ವಿವಿಧ ಸಂಘಟನೆಗಳ ಮನವಿಗೆ ಸ್ಪಂದಿಸದ ಮೊಂಡುತನ್ನ ಉಪ ಕುಲಪತಿ ಸುರೇಶ ಜಂಗಮಶೆಟ್ಟಿ ಹಾಗೂ ಕುಲಸಚಿವರಿಗೆ ಧಿಕ್ಕಾರವಿದೆ. ಈ ಏಕಚಕ್ರಾಧಿಪತ್ಯ ನೀತಿಯು ಖಂಡನೀಯವಾದದ್ದು ಕೂಡಲೇ ರಾಜ್ಯಪಾಲರು ಈ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ವಕೀಲರರಾದ ಮೃತ್ಯುಂಜಯ ಗುದಿಗೇರ ಮಾತನಾಡಿ, ಕ್ಯಾಂಪಸ್ ಪ್ರಜಾಪ್ರಭುತ್ವಗೆ ಮನ್ನಣೆ ನೀಡದೆ ತಮ್ಮ ಸರ್ಕಾರಿ ಸ್ವಾಮ್ಯದ ಜಾಗವನ್ನು ಬಿಟ್ಟು ಖಾಸಗಿ ಕಾಲೇಜಿನಲ್ಲಿ ನಡೆಸುತ್ತಿರುವ ಖಂಡನೀಯವಾಗಿದೆ. ರಾಜ್ಯ ಸರ್ಕಾರ ಕೂಡಲೇ ಈ ದ್ರೋಹವನ್ನು ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು. ಏನೆ ಆದರೂ ಸರ್ಕಾರಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವವು ತನ್ನ ಕ್ಯಾಂಪಸ್ ನಲ್ಲಿಯೇ ನಢಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಜ್ಯಗಳಿಗೆ ಸಮಾನ ಗೌರವ ಅಗತ್ಯ: ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ಬಿ. ವಿ ನಾಗರತ್ನ
ಸಾಹಿತಿ ಬರಹಗಾರ ದೇವರಾಜ ಹುಣಸಿಕಟ್ಟಿ ಮಾತನಾಡಿ, ವಿವಿ ಘಟಿಕೋತ್ಸವ ಕ್ಯಾಂಪಸ್ ವಿದ್ಯಾರ್ಥಿಗಳ ಅಸ್ಮಿತೆ ಅವರಿಗೆ ಉಪನ್ಯಾಸಕರಿಗೆ, ವಿಶೇಷವಾಗಿ ಮಾದ್ಯಮ ವರದಿಗಾರರಿಗೆ ನಿರಾಕರಣೆ ಮಾಡಿದ್ದು ಅತ್ಯಂತ ಖಂಡನೀಯವಾಗಿದೆ. ನಮ್ಮೆಲ್ಲರ ಪ್ರತಿರೋಧ ಉಪಕುಲಪತಿ ಹಾಗೂ ಸರ್ಕಾರಕ್ಕೆ ತಲುಪಲಿ ಎಂದು ಅವ್ಯವಸ್ಥೆಗೆ ಧಿಕ್ಕರಿಸಿ ಮಾತನಾಡಿದರು.
ಸಾಹಿತಿ ಚಂಸು ಪಾಟೀಲ ಮಾತನಾಡಿ, ಜಿಲ್ಲೆಯ ಜನರ ಶಿಕ್ಷಣ ಪ್ರೇಮಿಗಳ, ವಿದ್ಯಾರ್ಥಿಗಳ ಅಭಿಪ್ರಾಯ ಕೇಳದೆ ಏಕಾಏಕಿ ವಿವಿ ಘಟಿಕೋತ್ಸವ ರೂಪಿಸಿದ್ದು ಸರಿಯಲ್ಲ. ಮನೆಯ ಹಬ್ಬವನ್ನು ಮನೆಯಲ್ಲಿ ಮಾಡಬೇಕು ಬೇರೆಡೆಗೆ ಅಲ್ಲ. ವಿದ್ಯಾರ್ಥಿಗಳ ಹಕ್ಕುಗಳನ್ನು ಕಸಿದ ಆಡಳಿತ ಮಂಡಳಿ ಪುನರಾವಲೋಕನ ಮಾಡಿಕೊಳ್ಳಬೇಕು ಎಂದು ಪ್ರತಿರೋಧ ವ್ಯಕ್ತಪಡಿಸಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಹಾವೇರಿ ವಿಶ್ವ ವಿದ್ಯಾಲಯದ ಕ್ಯಾಂಪಸ್ ನಲ್ಲಿಯೇ ಪ್ರಥಮ ಘಟಿಕೋತ್ಸವ ನಡೆಯಬೇಕು ಎಂಬ ವಿಶ್ವವಿದ್ಯಾಲಯ ಹೋರಾಟ ಸಮಿತಿಯ ನಿಲುವು ಅಚಲವಾದುದು. ಇದರಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ.

ವಿಶ್ವವಿದ್ಯಾಲಯದ ಬೆಳವಣಿಗೆ ಹಾಗೂ ಅಭಿವೃದ್ಧಿಗಾಗಿ ಅಗತ್ಯವಿರುವ ಅನುದಾನ, ನೇಮಕಾತಿ, ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು, ಸೂಕ್ತ ಆಡಳಿತಾತ್ಮಕ ನಿರ್ದೇಶನಗಳು ಸೇರಿದಂತೆ ಹಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳಲು ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಮನವಿ ಸಲ್ಲಿಸಲು ಹೋರಾಟ ಸಮಿತಿಗೆ ಅವಕಾಶ ಕಲ್ಪಿಸಬೇಕು. ವಿಶ್ವ ವಿದ್ಯಾಲಯದ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಕಲ್ಪಿಸಲೇಬೇಕು. ಮಾಧ್ಯಮದವರನ್ನು ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರೇ ವರದಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಪಾಲ್ಗೊಳಿಸಬೇಕು.
ಈ ಸಂದರ್ಭದಲ್ಲಿ ಕಸಾಪ ಗ್ರಾಮ ಘಟಕ ಅಧ್ಯಕ್ಷ ಮಾರುತಿ ತಳವಾರ, ಎಸ್ಎಫ್ಐ ಮುಖಂಡ ಅರುಣ್ ನಾಗವತ್, ಸಾಮಾಜಿಕ ಮುಖಂಡರಾದ ಚಂದ್ರಪ್ಪ ಬೇಡರ, ಚಂದ್ರಶೇಖರ್ ಪಾಟೀಲ್ , ಕಾರ್ಮಿಕ ಸಂಘಟನೆ ಮುಖಂಡರಾದ ಶೋಭಾ ಮುದೇನೂರು, ಮರಡೇಪ್ಪ ಚಳಗೆರೆ, ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣೆಯ ಪರಶುರಾಮ್ ಕುರವತ್ತಿ, ಹನುಮಂತ ಹರಿಜನ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೊಟ್ರೇಶಪ್ಪ ಚ ಯಮ್ಮಿ, ಶಂಕರ್ ಹಳಪ್ಪನವರ್, ಶರಣ್ ಸಪ್ಪಾಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ʼಮಿಥಿಲೆಯ ಮಾವಿನ ಮರʼದಿಂದ ಎರಡು ಕವಿತೆಗಳು Janashakthi Media
