ತಣ್ಣೀರುಬಾವಿ ಬಡವರ ಭೂಮಿಯ ಹಕ್ಕು ನಿರಾಕರಣೆ ಸಂವಿಧಾನ ಬಾಹಿರ – ಬಿಕೆ ಇಮ್ತಿಯಾಜ್

ಮಂಗಳೂರು: ತಣ್ಣೀರುಬಾವಿ ಕಡಲು ಮತ್ತು ನದಿ ದಂಡೆಗಳ ನಡುವೆ ಅನೇಕ ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ವಾಸವಿರುವ ಬಡವರು ಹಕ್ಕು ಪತ್ರ ನೀಡಿ ಬಡವರಿಗೆ ಭೂಮಿಯ ಹಕ್ಕನ್ನು ಖಾತರಿಗೊಳಿಸುವ ಬದಲು ಬಡವರ ಕಾಲನಿಯನ್ನೇ ಬಲಾಡ್ಯರಿಗೆ ಪರಭಾರೆ ಮಾಡಿ ಕೆ.ಐ.ಎ.ಡಿ.ಬಿ ಅಧಿಕಾರಿಗಳು ಬೇಲಿ ಹಾಕಲು ಹೊರಟಿರುವುದು ಬಡವರನ್ನು ಒಕ್ಕಲೆಬ್ಬಿಸುವ ಹುನ್ನಾರವಾಗಿದ್ದು ಇದು ಸಂವಿಧಾನ ಬಾಹಿರ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಹೇಳಿದರು. ಭೂಮಿ

ಅವರು ಏಪ್ರಿಲ್‌ 1ರಂದು ಬೈಕಂಪಾಡಿಯಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಎದುರು ತಣ್ಣೀರುಬಾವಿ ಜನ ವಸತಿ ಪ್ರದೇಶದಲ್ಲಿ ಕೆಐಎಡಿಬಿ ಅಧಿಕಾರಿಗಳು ಮನೆ ಮತ್ತು ಸಮುದ್ರಕ್ಕೆ ತಡೆಬೇಲಿ ಹಾಕಿರುವ ನೀತಿಯನ್ನು ಖಂಡಿಸಿ ಡಿವೈಎಫ್ಐ ಮಂಗಳೂರು ನಗರ ಸಮಿತಿ, ತಣ್ಣೀರುಬಾವಿ ಹೋರಾಟ ಸಮಿತಿ, ದಲಿತ ಹಕ್ಕುಗಳ ಸಮನ್ವಯ ಸಮಿತಿ ತಣ್ಣೀರುಬಾವಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಉದ್ಘಾಟಿಸಿ ಮಾತನಾಡುತ್ತಿದ್ದರು.

ಬೇಲಿಗಳನ್ನು ಕಟ್ಟಿ ಸಮುದ್ರವನ್ನೇ ನಂಬಿ ಬದುಕುವ ಬಡವರ ಕಡಲ ಸಂಭಂದವನ್ನು ತಡೆಯಲಾಗುತ್ತಿದೆ. ತಣ್ಣೀರುಬಾವಿ ಯಲ್ಲಿ ಹಾಕಿರುವ ಬೇಲಿಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದ ಅವರು ಬಡವರಿಗೆ ಕಿರುಕುಳ ಮುಂದುವರಿದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಚೆನ್ನೈ| ಲೈಂಗಿಕ ಕಿರುಕುಳ; ಕೊಲೆ ಬೆದರಿಕೆ ಆರೋಪ: ಬಿಜೆಪಿ ನಾಯಕ ವಿರುದ್ಧ ದೂರು ದಾಖಲು

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಸ್ಥಳೀಯ ಜನಪ್ರತಿನಿದಿನಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ತಣ್ಣೀರುಬಾವಿಯ ನಾಗರಿಕರಿಗೆ ಇನ್ನೂ ಹಕ್ಕು ಪತ್ರ ಸಿಕ್ಕಿಲ್ಲ, ಇವರಿಗೆ ಚುನಾವಣೆ ಬಂದಾಗ ಮಾತ್ರ ಬಡವರು ನೆನಪಾಗ್ತಾರೆ ಎಂದು ಅವರು ಆಪಾದಿಸಿದರು.

ಮಾಜಿ ಕಾಪೋರೇಟರ್ ದಯಾನಂದ ಶೆಟ್ಟಿ, ಹೋರಾಟ ಸಮಿತಿ ಕಾರ್ಯದರ್ಶಿ ಯೋಗೀಶ್ ಅಮೀನ್,ತಣ್ಣೀರುಬಾವಿ,ಡಿವೈಎಫ್ಐ ನಗರ ಕಾರ್ಯದರ್ಶಿ ತಯ್ಯುಬ್ ಬೆಂಗ್ರೆ ಮಾತನಾಡಿದರು. ತಣ್ಣೀರುಬಾವಿ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಾಝಿಕ್, ಹೋರಾಟ ಸಮಿತಿಯ ಪ್ರಮುಖರಾದ ಅಜೀಜ್ ತಣ್ಣೀರುಬಾವಿ, ರಿಯಾಜ್ ಬಿ. ಎಚ್, ಜೋಹರ, ಫ್ಲೋರಿನ್, ದೀಪಾ, ಜಯಂತಿ, ರೇಖಾ, ನೌಫಲ್, ರಶೀದ್ ಖಾನ್,ಸಿಮ್ರಾನ್, ಸುಪ್ರಿತಾ ಕವಿತಾ, ಫೌಝಿಯ, ಯೂತ್ ಕ್ಲಬ್ ತಣ್ಣೀರುಬಾವಿ ಅಧ್ಯಕ್ಷರಾದ ನವೀನ್ ಸುವರ್ಣ, ಡಿವೈಎಫ್ಐ ಮುಖಂಡರಾದ ಹನೀಫ್ ಬೆಂಗ್ರೆ, ನಾಸಿರ್ ಬಾಸ್, ತೌಸೀಫ್ ಬೈಕಂಪಾಡಿ, ಫರಾನ್ಯಾಸೀರ್ ಅಂಗರಗುಂಡಿ ಮುಂತಾದವರು ಉಪಸ್ಥಿತರಿದ್ದರು.

ದಲಿತ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷರಾದ ಕೃಷ್ಣ ತಣ್ಣೀರುಬಾವಿ ಸ್ವಾಗತಿಸಿ, ಹೋರಾಟ ಸಮಿತಿ ಅಧ್ಯಕ್ಷೆ ಶಮೀಮಾ ಬಾನು ವಂದಿಸಿದರು. ಈ ಸಂದರ್ಭದಲ್ಲಿ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ತಡೆ ಬೇಲಿ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಲಾಯಿತು.

ಕಾಲಂ ನ್ಯೂಸ್ :

ರಸ್ತೆ ದುರಸ್ತಿಗೆ ಇಲ್ಲದ ಹಣ ತಡೆಬೇಲಿ ಹಾಕಲು ಎಲ್ಲಿಂದ ಬಂತು?

ಹೊಂಡ ಗುಂಡಿಗಳಿಂದ ತುಂಬಿ ಹೋಗಿರುವ ಕೈಗಾರಿಕಾ ಪ್ರದೇಶದ ರಸ್ತೆ ದುರಸ್ತಿ ಮಾಡಿ ಎಂದು ಪ್ರತಿಭಟನೆ ಮಾಡಿದರೆ ಇಲಾಖೆಯಲ್ಲಿ ದುಡ್ಡಿಲ್ಲ ಎಂದು ಉತ್ತರ ನೀಡುವ ಕೆಐಎಡಿಬಿ ಅಧಿಕಾರಿಗಳಿಗೆ ಬಡವರ ಕಾಲನಿಗೆ ಬೇಲಿ ಹಾಕಲು ಹಣ ಮಂಜೂರು ಎಲ್ಲಿಂದ ಆಯಿತು ಎಂದು ಮನವಿ ಸ್ವೀಕರಿಸಲು ಬಂದ ಅಧಿಕಾರಿಯನ್ನು ಬಿ.ಕೆ ಇಮ್ತಿಯಾಜ್ ಪ್ರಶ್ನಿಸಿದಾಗ ಯಾವುದೇ ಉತ್ತರ ನೀಡದೆ ನುಣುಚಿ ಕೊಂಡರು.

ಇದನ್ನೂ ನೋಡಿ: ಐವತ್ತೈದು ವಯಸ್ಸು, ಯುವಕನ ಉತ್ಸಾಹ: ಒಂಟಿ ಕಣ್ಣಿನ ಕೃಷ್ಣಮೂರ್ತಿ ಸಾಧನೆಯ ಪಯಣ Janashakthi Media

Donate Janashakthi Media

Leave a Reply

Your email address will not be published. Required fields are marked *