ಬೆಂಗಳೂರು: ನಗರದ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಫೋನ್ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಜೈಲು ಸಿಬ್ಬಂದಿ ಕಣ್ಣು ತಪ್ಪಿಸಲು ಕೈದಿಗಳು ರೂಪಿಸಿದ ಈ ಪ್ಲಾನ್ ಅಧಿಕಾರಿಗಳನ್ನೇ ಬೆಚ್ಚಿಬೀಳುವಂತೆ ಮಾಡಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಡಿಯೋ ಮಾಡಿ ಹರಿಬಿಟ್ಟ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಲ್ಲಿ ಮೊಬೈಲ್ ಪತ್ತೆಗಾಗಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕೈದಿ
ಇದನ್ನೂ ಓದಿ: ಆಂಧ್ರಪ್ರದೇಶ ರಾಜಧಾನಿಯಾಗಿ ಅಮರಾವತಿ: ವಿಧಾನಸಭೆಯ ಸರ್ವಾನುಮತ ನಿರ್ಣಯ
ನಟ ದರ್ಶನ್, ಅಭಿಷೇಕ್ ಇರುವ ಬ್ಯಾರಕ್ನಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕೇಂದ್ರ ಕಾರಾಗೃಹದ 9ನೇ ಬ್ಯಾರಕ್ ನಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ.
ಈ ವೇಳೆ ಡ್ರೈನೇಜ್ ನೀರು ಹೋಗುವ ಜಾಗದಲ್ಲಿ ಮೊಬೈಲ್ ಪತ್ತೆಯಾಗಿದೆ. ಬಳಸಿದ ಹಾಲಿನ ಪ್ಯಾಕೆಟ್ ಗಳಲ್ಲಿ ಸುತ್ತಿ ಮೊಬೈಲ್ ಬಚ್ಚಿಡಲಾಗಿತ್ತು. ಆರೋಪಿಗಳ ಕೈಯಲ್ಲಿಯೆ ಅಧಿಕಾರಿಗಳು ಮೊಬೈಲ್ ಗಳನ್ನು ಹೊರಗಡೆ ತೆಗೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದ್ದು, ಪೊಲೀಸರು ಜೈಲಿನಲ್ಲಿ ಮತ್ತಷ್ಟು ತಪಾಸಣೆ ಮುಂದುವರೆಸಿದ್ದಾರೆ.
ಇದನ್ನೂ ನೋಡಿ: ಉನ್ನತ ಶಿಕ್ಷಣ ‘ಉದ್ಯಮ’ವಾಗುತ್ತಿದೆ: ಬರಗೂರು ರಾಮಚಂದ್ರಪ್ಪ ಟೀಕೆ Janashakthi Media
