ಟಿಪ್ಪು ಸುಲ್ತಾನ ಕುರಿತು ತಪ್ಪು ನಿರೂಪಣೆ: ಪ್ರಿಯಾಂಕ್ ಖರ್ಗೆ ಕಳವಳ

ಬೆಂಗಳೂರು: ನೂರು ವರ್ಷಗಳಲ್ಲಿ ನಿಮ್ಮ ಹತ್ತು ಸಾಧನೆಗಳನ್ನು ಹೇಳಿ ಎಂದು ಕೇಳಿದರೆ ಹೇಳುವ ಧೈರ್ಯ ಆರ್‌ಎಸ್‌ಎಸ್‌ಗೆ ಇಲ್ಲ. ನಿಜವಾದ ಇತಿಹಾಸ ಇಂದು ಎರಡು ದೊಡ್ಡ ಆತಂಕಗಳನ್ನು ಎದುರಿಸುತ್ತಿದೆ—‘ವಾಟ್ಸಪ್ ವಿಶ್ವವಿದ್ಯಾಲಯ’ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿರುವ ತಿರುಚುವ ಪ್ರಯತ್ನಗಳು. ಬಿಜೆಪಿ ನಾಯಕರು ಇತಿಹಾಸವನ್ನು ಅಧ್ಯಯನ ಮಾಡದೆ ಮಾತನಾಡುತ್ತಿರುವುದು ಖೇದಕರ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಳವಳ ವ್ಯಕ್ತಪಡಿಸಿದರು. ತಪ್ಪು

ಪತ್ರಕರ್ತ ನವೀನ್ ಸೂರಿಂಜೆ ಅವರ ‘ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ದಾಖಲೆಗಳ ಪ್ರಕಾರ ಟಿಪ್ಪು ಸುಲ್ತಾನರನ್ನು ಸ್ವಾತಂತ್ರ್ಯ ಹೋರಾಟಗಾರರಾಗಿ ದಾಖಲಿಸಲಾಗಿದೆ ಎಂದು ಹೇಳಿದರು. ತಪ್ಪು

ಈಗಿನ ಎಸ್.ಪಿ. ರಸ್ತೆ ಒಂದು ಕಾಲದಲ್ಲಿ ತಾರಾಮಂಡಲ ರಸ್ತೆ ಆಗಿತ್ತು. ರಾಕೆಟ್‌ಗಳ ಬಿಡಿಭಾಗಗಳು ಅಲ್ಲಿ ಸಿಗುತ್ತಿದ್ವು. ರಾಕೆಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಬಲಪಡಿಸಿದ ಕೀರ್ತಿ ಟಿಪ್ಪು ಸುಲ್ತಾನರಿಗೆ ಸಲ್ಲುತ್ತದೆ. ತೋಟಗಾರಿಕೆಯ ಪಿತಾಮಹರಾಗಿದ್ದ ಅವರು ರಾಜ್ಯದಲ್ಲಿ ಅನೇಕ ಉದ್ಯಾನಗಳನ್ನು ನಿರ್ಮಿಸಿದರು ಎಂದು ವಿವರಿಸಿದರು. ತಪ್ಪು

ಇದನ್ನೂ ಓದಿ: ವಿ.ವಿಗಳಲ್ಲಿ ಮಾನವಿಕ ವಿಷಯಗಳ ಕಡ್ಡಾಯ ಓದುವಿಕೆ ಅಗತ್ಯ: ಬರಗೂರು ರಾಮಚಂದ್ರಪ್ಪ

ಸತ್ಯದ ಆಧಾರದ ಮೇಲೆ ಸೌಹಾರ್ದತೆಯನ್ನು ಬೆಳೆಸುವ ಪುಸ್ತಕಗಳು ಹೆಚ್ಚಾಗಬೇಕು. ಇತಿಹಾಸವನ್ನು ತಿರುಚುವ ಪಠ್ಯಗಳು ಮತ್ತು ಪುಸ್ತಕಗಳ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು ಎಂದು ಕರೆ ನೀಡಿದರು. ತಪ್ಪು

ಇತಿಹಾಸದಲ್ಲಿರುವ ಮೂಲ ಬಣ್ಣವನ್ನು ಬದಲಿಸಿ ಬೇರೆ ಬಣ್ಣ ಹಚ್ಚುವುದು ಆರ್‌ಎಸ್‌ಎಸ್‌ನ ಚಾಳಿ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ವಾಗ್ದಾಳಿ ನಡೆಸಿದರು. ಕೊಡಗು ಮತ್ತು ಬ್ರಿಟಿಷರೊಂದಿಗೆ ಹೊಂದಿದ್ದ ನಂಟನ್ನು ವಿರೋಧಿಸಿದ್ದಕ್ಕಾಗಿ ಟಿಪ್ಪು ಸುಲ್ತಾನರನ್ನು ಕೆಟ್ಟ ವ್ಯಕ್ತಿಯಾಗಿ ಬಿಂಬಿಸಲಾಗಿದೆ ಎಂದರು.

ಟಿಪ್ಪು ಸುಲ್ತಾನರು ಬ್ರಾಹ್ಮಣ, ಒಕ್ಕಲಿಗ, ಬಂಟ, ಜೈನ ಸಮುದಾಯಗಳೊಂದಿಗೆ ವ್ಯವಹಾರಿಕ ಸಂಬಂಧಗಳನ್ನು ಹೊಂದಿದ್ದರು. ಹಾಗಿದ್ದರೂ ಅವರು ಹಿಂದೂ ವಿರೋಧಿ ಎಂಬ ಪಟ್ಟಕ್ಕೆ ಗುರಿಯಾದದ್ದು ಏಕೆ ಎಂಬುದನ್ನು ಆರ್‌ಎಸ್‌ಎಸ್‌ನ ನಡೆಗಳಿಂದಲೇ ಅರ್ಥಮಾಡಿಕೊಳ್ಳಬಹುದು ಎಂದು ಹೇಳಿದರು.

ಟಿಪ್ಪು ಸುಲ್ತಾನರ ಆಡಳಿತದಲ್ಲಿ ರೈತರ ಮೇಲೆ ಹೆಚ್ಚಿನ ತೆರಿಗೆ ಅಥವಾ ಶೋಷಣೆ ಇರಲಿಲ್ಲ. ಸಾಮ್ರಾಜ್ಯ ವಿಸ್ತರಣೆಯ ಆಸೆ ಹೊಂದಿದ್ದ ಅನೇಕ ರಾಜರು ರೈತರನ್ನು ಶೋಷಿಸಿದ್ದರೂ, ಟಿಪ್ಪು ಸುಲ್ತಾನರು ಆ ರೀತಿಯ ಆಡಳಿತ ನಡೆಸಲಿಲ್ಲ ಎಂದು ಅಭಿಪ್ರಾಯಪಟ್ಟರು.

ಟಿಪ್ಪು ಸುಲ್ತಾನರನ್ನು ಆಗ ಖಳನಾಯಕನನ್ನಾಗಿ ಬಿಂಬಿಸಿದವರು ಬ್ರಿಟಿಷರು; ಈಗ ಟಿಪ್ಪು ಸುಲ್ತಾನರನ್ನು ವಿರೋಧಿಸುತ್ತಿರುವವರು ಬ್ರಿಟಿಷರ ಮನೋಭಾವದವರಂತೆ ಕಾಣುತ್ತಾರೆ ಎಂದು ಹೇಳಿದರು. ಟಿಪ್ಪು ಸುಲ್ತಾನರ ಸೇನೆಯಲ್ಲಿ ಕುರುಬರು ಮತ್ತು ಒಕ್ಕಲಿಗರು ದೊಡ್ಡ ಸಂಖ್ಯೆಯಲ್ಲಿ ಇದ್ದರು ಎಂಬುದನ್ನು ಈ ಪುಸ್ತಕ ಬೆಳಗಿಸುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಸಿದ್ದನಗೌಡ ಪಾಟೀಲ್ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಇಸ್ಲಾಂ ಭಯವನ್ನು ಆರ್‌ಎಸ್‌ಎಸ್ ಸೃಷ್ಟಿಸಿದೆ. ವಿವಾದಗಳನ್ನು ಹುಟ್ಟುಹಾಕುವುದು ಆರ್‌ಎಸ್‌ಎಸ್‌ನ ಸ್ವಭಾವವಾಗಿದೆ ಎಂದು ಆರೋಪಿಸಿದರು. ಪ್ಲಾಸಿ ಕದನದಿಂದ ಹಿಡಿದು ಇಂದಿನವರೆಗೂ ಟಿಪ್ಪು ಸುಲ್ತಾನರನ್ನು ಕೇವಲ ಮುಸ್ಲಿಂ ನಾಯಕನಾಗಿ ಮಾತ್ರ ಕಾಣಲಾಗಿದೆ. ಆದರೆ ಅವರು ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಎಂಬ ದೃಷ್ಟಿಕೋನ ಕಾಣದಿರುವುದು ಇತಿಹಾಸದ ದೋಷ ಎಂದು ಹೇಳಿದರು.

ಮುನೀರ್ ಕಾಟಿಪಳ್ಳ ಮಾತನಾಡಿ, ಟಿಪ್ಪು ಸುಲ್ತಾನರು ಮುಸ್ಲಿಂ ಆಗಿರದೆ ಒಕ್ಕಲಿಗ ಅಥವಾ ಬ್ರಾಹ್ಮಣರಾಗಿದ್ದರೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಗೌರವ ಪಡೆದಿರುತ್ತಿದ್ದರು. ಎಲ್ಲೆಡೆ ಟಿಪ್ಪು ವೃತ್ತಗಳು ನಿರ್ಮಾಣವಾಗುತ್ತಿವೆ. ಧರ್ಮದ ಕಾರಣದಿಂದಲೇ ಟಿಪ್ಪು ಸುಲ್ತಾನರು ವಿರೋಧಕ್ಕೆ ಗುರಿಯಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಸುದೀಪ್ತೊ ಮಂಡಲ್, ಇತಿಹಾಸಕಾರ್ತಿ ಡಾ. ರುಚಿತಾ ಶರ್ಮಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪತ್ರಕರ್ತೆ ಧನಲಕ್ಷ್ಮಿ ದೇವರಾಜ್ ನಿರ್ವಹಿಸಿದರು.

ಇದನ್ನೂ ನೋಡಿ: ಇರಾನ್ ಮೇಲೆ ಯು.ಎಸ್.-ಇಸ್ರೇಲ್ ದಾಳಿ: ಜಾಗತಿಕ ಪರಿಣಾಮಗಳು – ಎನ್.ಕೆ. ವಸಂತರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *