ಬದುಕು ಕಳೆಯುವ ಮುನ್ನ ಎಚ್ಚೆತ್ತುಕೊಳ್ಳೋಣ

– ಯು. ಬಸವರಾಜ

ಹೊತ್ತು ಜಾರುವ ಮುನ್ನ
ಬದುಕು ಕಳೆಯುವ ಮುನ್ನ
ಎಚ್ಚೆತ್ತು ಕೊಳ್ಳೋಣ ಬನ್ನಿರೋ !
ಎಚ್ಚೆತ್ತುಕೊಂಡೂ ನಡೆಯಿರೋ ! ಬದುಕು

ಗಂಧ ಗಾಳಿಗೆ ತೂರಿ
ಚಂದದ ಬದುಕನು ತೋರಿ
ಮಳ್ಳ ಮಾತುಗಳಾಡಿ ! ಕದ್ದರೋ
ಅವರು ನಮ್ಮ ಓಟುಗಳನ್ನೇ ಕದ್ದಾರೋ !! ಹೊತ್ತು !!

ಕುರ್ಚಿಯ ಪಡಕೊಂಡು
ಜೇಬನ್ನು ಹೊಡಕೊಂಡು
ಉಳ್ಳವರ ಮನೆಗಳ ತುಂಬ್ಯಾರೋ ! ಅವರು, ಇಲ್ಲದವರಿಗೆ ನಾಮ ಹಾಕ್ಯಾರೋ !! ಹೊತ್ತು !!

ಇದನ್ನೂ ಓದಿ: ಹಿಟ್ನಾಳ್‌ ಸಹೋದರರ ಹೋಳಿ ಸಂಭ್ರಮ | ಪರೀಕ್ಷೆಯಿಂದ ಹೊರಗುಳಿದ ಮುಸ್ಲಿಂ ವಿದ್ಯಾರ್ಥಿನಿ

ಉಳುವ ರೈತನಿಗೆ, ಉಳುವುದು ಬೇಡೆಂದು,
ಕಂಪನಿ ಬೇಸಾಯವ ಹೇರಿದರೋ ,
ಕಂಪನಿ ಬೇಸಾಯ ಹೇರಿದರೋ…! ಅವರು, ಅನ್ನದಾತಗೆ ಮಣ್ಣ ಹಾಕಿದರೋ !! ಹೊತ್ತು !!

ಸತ್ತರೂ ಭಯವಿಲ್ಲ
ಈ ಭೂಮಿ ಬಿಡನೆಂದ !
ರೈತರ ತಲೆ ಸಾಲ ಬೆಳೆಸಿದರೋ !
ವೆಚ್ಚವಾ ಹೆಚ್ಚಿಸಿ, ಬೆಲೆಗಳ ಕುಗ್ಗಿಸಿ
ಸಾಲದ ಬಾಧೆಗೆ ಅವನ ದುಡ್ಯಾರೋ ! ಅವರು ಸಾಲದ ಬಾಧೆಗೆ ಅವನ ದೂಡ್ಯಾರೋ ?
!! ಹೊತ್ತು !!

ಹಳೆ ಸಾಲ ಕೊಡಲಿಲ್ಲ,
ಹೊಸ ರೇಷನ್ನು ಕೊಡಲೆಂಗೇ ?
ಅಂಗಡಿಯವ ಬರಿಗೈಲೆ ಕಳುಹಿದನೋ !
ಅಂಗಡಿಯವ ಬರಿಗೈಲೇ ಕಳುಹಿದನೋ ! ಅಣ್ಣಯ್ಯ ಹಸಿದ ಮಕ್ಕಳಿಗೇನು ಉಣಲಿಡಲೋ
!! ಹೊತ್ತು !!

ಮುಂಗೋಳಿಗೂ ಮುನ್ನ
ಮನೆಯನ್ನು ತೊರೆದಾತ,
ಸಾಲಿಗನಿಲ್ಲದ ಕಂಡು ಬಂದನೋ ! ಸರಿರಾತ್ರಿ ! ಸಾಲಿಗನಿಲ್ಲದ ಕಂಡು ಬಂದಾನೋ ?
ಅನ್ನ ಕೊಡುವಾ ರೈತ, ಕಳ್ಳನ ತೆರದಿ ಒಳಗೆ ಬಂದಾನೋ !,
ಬತ್ತಿದ ಕಂಗಳು, ಹಸಿದಿರುವ ಒಡಲುಗಳು,
ಇವನಾ ಒಡಲಿಗೆ ಇರಿದಾವೋ ! ಅಣ್ಣಯ್ಯ
ರೈತನ ಗೋಳು ಏನೇಳಲೋ !
!! ಹೊತ್ತು !!

ಕುಸಿದ ರೈತನ ಕಂಡು
ತಾನೇ ನೋವನು ಉಂಡು
ಖಾಲಿ ಗಂಗಾಳಗಳು ಸುರಿಸಿದವೋ!
ಖಾಲಿ ಗಂಗಾಳಗಳು ಸುರಿಸಿದ—!ವೋ ! ಕಣ್ಣೀರ ! ಥೂ ಎಂದು ರೈತ ದ್ರೋಹಿಗೆ ಅವು ಹುಗಿದಾವೋ”?”?!
!!ಹೊತ್ತು!!

ಸಾವಿಗೋಗುವ ಮುನ್ನ ಯೋಚಿಸಿ ನೋಡಣ್ಣ.
, ಸಾವೇ ಪರಿಹಾರ ಅಲ್ಲವಣ್ಣ !
ಸಾವ ತರುವಂತ ನೀತಿ ನಿಲುಮೆಗೆ ಗೋರಿಯ ಕಟ್ಟೋಣ ಬಾರಣ್ಣ !
ನೀ ಗೋರಿಯ ಕಟ್ಟೋಣ ಬಾರಣ್ಣ !! ಹೊತ್ತು !!

ಇದನ್ನೂ ನೋಡಿ: ಮುಟ್ಟಿನ ರಜೆ ದಯೆಯಲ್ಲ, ಅದು ಹಕ್ಕು — ವಿಶೇಷ ಸೌಲಭ್ಯವಲ್ಲ, ನ್ಯಾಯಯುತ ಸೌಕರ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *