ಯುಎಸ್.–ಇಸ್ರೇಲ್ ಜಂಟಿ ವೈಮಾನಿಕ ದಾಳಿ: 200ಕ್ಕೂ ಹೆಚ್ಚು ಬಲಿ, ಸರ್ವೋಚ್ಚ ನಾಯಕ ಖಮೇನಿ ಹತ್ಯೆ

ಇರಾನ್ :ಯುಎಸ್ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದ ಇರಾನ್ ಸರ್ಕಾರ ದೃಢಪಡಿಸಿದೆ. ಇದರ ಬೆನ್ನಲ್ಲೆ ಖಮೇನಿ ಅವರ ಪುತ್ರಿ, ಅಳಿಯ ಮತ್ತು ಮೊಮ್ಮಗಳೂ ಕೂಡ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಕ್ಷಿಪಣಿ ದಾಳಿಗೆ ಬಲಿಯಾದ ಇರಾನ್‌ ರಕ್ಷಣಾ ಸಚಿವ ಅಮೀರ್‌ ನಾಸಿರ್ಜಾದೆ ಅವರ ಮೃತದೇಹ ಪತ್ತೆಯಾಗಿದೆ ಎಂದೂ ಇಸ್ರೇಲ್‌ ಮಾಧ್ಯಮಗಳು ವರದಿ ಮಾಡಿವೆ.

ಈಗಲೂ ಇರಾನ್‌ ಮೇಲೆ ಯು.ಎಸ್ ಮತ್ತು ಇಸ್ರೇಲ್‌ ಜಂಟಿ ವೈಮಾನಿಕ ದಾಳಿಯನ್ನು ಮುಂದುವರೆಸಿದ್ದು, ಕ್ಷಿಪಣಿ ದಾಳಿಯನ್ನು ತೀವ್ರಗೊಳಿಸಿವೆ. ಇರಾನ್‌ ಮೇಲಿನ ದಾಳಿಯನ್ನು ಮುಂದುವರೆಸುವುದಾಗಿ ಉಭಯ ರಾಷ್ಟ್ರಗಳು ಹೇಳಿಕೊಂಡಿವೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಕೂಡ ಪ್ರತಿಕ್ರಿಯಿಸಿದೆ.

 

ಖಮೇನಿಯವರ ಮನೆಯ ಮೇಲೆ ನಡೆದ ದಾಳಿಯ ದೃಶ್ಯ
ಖಮೇನಿಯವರ ಮನೆಯ ಮೇಲೆ ನಡೆದ ದಾಳಿಯ ದೃಶ್ಯ

ವೈಮಾನಿಕ ದಾಳಿಯಲ್ಲಿ 200ಕ್ಕೂ ಹೆಚ್ಚುಜನ ಮೃತ ಪಟ್ಟಿದ್ದು ಅದರಲ್ಲಿ 70 ಕಂದಮ್ಮಗಳು ಸಾಮ್ರಾಜ್ಯಶಾಹಿಗೆ ಬಲಿಯಾಗಿವೆ. ಎಂಟು ತಿಂಗಳಲ್ಲಿ ಟ್ರಂಪ್ ಆಡಳಿತವು ಇರಾನ್ ಮೇಲೆ ನಡೆಸಿದ ಎರಡನೇ ದಾಳಿ ಇದಾಗಿದೆ. ಅಧಿಕಾರಿಗಳು ಹೇಳುವ ಪ್ರಕಾರ, ಯು.ಎಸ್-ಇಸ್ರೇಲ್ ಜಂಟಿ ಕಾರ್ಯಾಚರಣೆಯನ್ನು ತಿಂಗಳುಗಟ್ಟಲೆ ಯೋಜಿಸಲಾಗಿತ್ತು, ಇದು ಶನಿವಾರ ಮುಸ್ಲಿಂ ಪವಿತ್ರ ರಂಜಾನ್ ತಿಂಗಳಿನಲ್ಲಿ ಮತ್ತು ಇರಾನಿನ ಕೆಲಸದ ವಾರದ ಆರಂಭದಲ್ಲಿ ನಡೆದಿರುವುದನ್ನು ಗಮನಿಸಿದರೆ ದಾಳಿಯ ಉದ್ದೇಶ ಗೊತ್ತಾಗುತ್ತದೆ ಎಂದಿದ್ದಾರೆ.

ದಕ್ಷಿಣ ಇರಾನ್‌ನಲ್ಲಿ ಬಾಲಕಿಯರ ಶಾಲೆಯ ಮೇಲೆ ದಾಳಿ ನಡೆದಾಗ ಕನಿಷ್ಠ 115 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಗವರ್ನರ್ ಇರಾನಿನ ರಾಜ್ಯ ಟಿವಿಗೆ ತಿಳಿಸಿದ್ದಾರೆ. ಬಾಲಕಿಯರ ಶಾಲೆಯ ಮೇಲೆ ದಾಳಿ ನಡೆದಿರುವ “ವರದಿಗಳ ಬಗ್ಗೆ ತನಗೆ ತಿಳಿದಿದೆ” ಮತ್ತು ಅಧಿಕಾರಿಗಳು ಅವುಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಹೇಳಿದ್ದಾರೆ.

ನೈಋತ್ಯದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ರಾಜ್ಯ ಸುದ್ದಿ ಸಂಸ್ಥೆ ಐಆರ್‌ಎನ್‌ಎ ತಿಳಿಸಿದೆ, ಲ್ಯಾಮರ್ಡ್ ಪ್ರದೇಶದ ಗವರ್ನರ್ ಅಲಿ ಅಲಿಜಾದೆ ಅವರನ್ನು ಉಲ್ಲೇಖಿಸಿ, ಒಂದು ಕ್ರೀಡಾ ಸಭಾಂಗಣ, ಎರಡು ವಸತಿ ಪ್ರದೇಶಗಳು ಮತ್ತು ಶಾಲೆಯ ಬಳಿಯ ಒಂದು ಸಭಾಂಗಣವು ಹಾನಿಗೊಳಗಾಗಿದೆ ಎಂದು ಹೇಳಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ವಾಣಿಜ್ಯ ರಾಜಧಾನಿ ದುಬೈ ಮೇಲೆ ವಾಯು ರಕ್ಷಣಾ ಗುಂಡಿನ ದಾಳಿ ನಡೆಯಿತು. ಯುಎಇ ರಾಜಧಾನಿಯ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯ ಶ್ರಾಪ್ನೆಲ್ ಒಬ್ಬ ವ್ಯಕ್ತಿಯನ್ನು ಕೊಂದಿದೆ ಎಂದು ರಾಜ್ಯ ಮಾಧ್ಯಮ ತಿಳಿಸಿದೆ.

ಮಧ್ಯಪ್ರಾಚ್ಯದಾದ್ಯಂತ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಭಾರತೀಯರು ಸಾಕಷ್ಟು ಜನ ವಿಮಾನಗಳ ವ್ಯತ್ಯಯದಿಂದ ಭಯಭೀತರಾಗಿದ್ದಾರೆ. ಕರ್ನಾಟಕದ ಹಲವರು ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *