ಚಿತ್ರದ ಟೀಸರ್ ತೆಗೆಯಲು ಒಪ್ಪಿಕೊಂಡ ಚಿತ್ರತಂಡ
ಕೊಚ್ಚಿ: ‘ದಿ ಕೇರಳ ಸ್ಟೋರಿ – ಗೋಸ್ ಬಿಯಾಂಡ್’ ಚಿತ್ರವು ಕೇರಳದಂತದ ಜಾತ್ಯತೀತ ರಾಜ್ಯವನ್ನು ತಪ್ಪು ರೀತಿಯಲ್ಲಿ ಬಿಂಬಿಸುತ್ತದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೇರಳ
ಕೇರಳದಲ್ಲಿ ಜನರು ಕೋಮು ಸೌಹಾರ್ದದಲ್ಲಿ ಬದುಕುತ್ತಾರೆ. ಹಾಗಿರುವಾಗ ಕೇರಳದ ಹೆಸರನ್ನು ಬಳಕೆ ಮಾಡುವುದು ಮತ್ತು ಚಿತ್ರವು ನೈಜ ಸಂಗತಿಗಳನ್ನು ಆಧರಿಸಿದೆ ಎಂದು ಹೇಳಿಕೊಳ್ಳುವುದು ಕೋಮು ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದೆ
ಕೇರಳ ಸ್ಟೋರಿ 2 ಚಿತ್ರಕ್ಕೆ ನೀಡಲಾದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಮೂರು ಪ್ರತ್ಯೇಕ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಈ ಕುರಿತು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಧಾರವಾಡ | ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ಕಾಂಗ್ರೆಸ್–ಬಿಜೆಪಿಗೆ ಎಚ್ಚರಿಕೆಯ ಸಂಕೇತ
ಚಿತ್ರದ ಶೀರ್ಷಿಕೆಯಲ್ಲಿ ‘ಕೇರಳ’ ಎಂಬ ಹೆಸರಿನ ಬಳಕೆಯನ್ನು ಉಲ್ಲೇಖಿಸಿದ ಅವರು, “ಕೇರಳ ಎಂಬ ಹೆಸರನ್ನು ಬಳಸಿರುವುದರಿಂದ ಕೇರಳದ ಜನರ ಗ್ರಹಿಕೆಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಸಾಮಾನ್ಯವಾಗಿ ಕಲಾತ್ಮಕ ಸೃಷ್ಟಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ನೀವು ಅದನ್ನು ನಿಜವಾದ ಘಟನೆಗಳಿಂದ ಪ್ರೇರಿತವೆಂದು ಹೇಳುತ್ತಿದ್ದರೆ, ಅದು ಕೋಮು ಉದ್ವಿಗ್ನತೆಗೆ ಕಾರಣವಾಗಬಹುದೇ ಎಂಬುದನ್ನು ಪರಿಗಣಿಸಬೇಕು,” ಎಂದು ಅವರು ತಿಳಿಸಿದರು.
ಜನಾಂಗೀಯ, ಧಾರ್ಮಿಕ ಅಥವಾ ಇತರ ಗುಂಪುಗಳನ್ನು ಅವಹೇಳನ ಮಾಡುವ ದೃಶ್ಯಗಳು ಅಥವಾ ಪದಗಳನ್ನು ನಿಷೇಧಿಸುವ CBFC ಮಾರ್ಗಸೂಚಿಗಳನ್ನು ಈ ಚಿತ್ರ ಪಾಲಿಸಿಕೊಂಡಿದೆಯೇ ಎಂಬುದನ್ನೂ ನ್ಯಾಯಾಲಯ ಪ್ರಶ್ನಿಸಿತು.“ಸೃಜನಶೀಲತೆಯ ಸ್ವಾತಂತ್ರ್ಯವಿದೆ. ಆದರೆ CBFCಗೆ ಪಾಲಿಸಬೇಕಾದ ಷರತ್ತುಗಳೂ ಇವೆ. ‘ನಿಜವಾದ ಘಟನೆ’ ಎಂದು ಹೇಳಿದಾಗ ಅದರ ಪರಿಣಾಮ ಗಂಭೀರವಾಗಬಹುದು,” ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಚಿತ್ರದ ಟೀಸರ್ ತೆಗೆಯಲು ಸಿದ್ಧವಿರುವುದಾಗಿ ನಿರ್ಮಾಪಕ ನ್ಯಾಯಾಲಯಕ್ಕೆ ತಿಳಿಸಿದರು.
ಇದನ್ನೂ ನೋಡಿ : “ಭಾರತ ಭಾರತವಾಗಿರಲಿ – ಯಾವ ಧರ್ಮರಾಷ್ಟ್ರವಾಗಿಯೂ ಬೇಡ.” – ಬಿ.ಎಂ.ಹನೀಫ್ Janashakthi Media
