ಮಂಗಳೂರು : ಮಿಲಿಟರಿ ಕಾರ್ಯಾಚರಣೆ, ಹಸ್ತಕ್ಷೇಪ, ಆರ್ಥಿಕ ನೀತಿಗಳ ಮೂಲಕ ಜಗತ್ತಿನಲ್ಲಿ ವ್ಯಾಪಕವಾದ ಹಿಂಸೆ, ಹಸಿವಿಗೆ ಕಾರಣವಾಗಿದೆ. ಅಮೆರಿಕ ಮತ್ತದರ ಕೂಟವು ಜಗತ್ತನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ. ತನ್ನ ತಾಳಕ್ಕೆ ಕುಣಿಯದ ದೇಶಗಳ ಚುನಾಯಿತ ಸರಕಾರಗಳನ್ನು ಅಮೆರಿಕಾ ಕೆಡವಿದೆ. ಆಂತರಿಕ ದಂಗೆಗೆ ಪ್ರಚೋದಿಸಿ, ತನ್ನ ಕೈಗೊಂಬೆ ಸರಕಾರಗಳನ್ನು ಸ್ಥಾಪಿಸಿದೆ ಎಂದು ಚಿಂತಕ, ಪ್ರೊ. ರಾಜೇಂದ್ರ ಉಡುಪ ಹೇಳಿದರು.
ಸಿಪಿಎಂ ಮಂಗಳೂರು ನಗರ ಸಮಿತಿಯು ನಗರದಲ್ಲಿ ಹಮ್ಮಿಕೊಂಡಿದ್ದ ಕೆಂಪು ಪುಸ್ತಕ ದಿನದಲ್ಲಿ ಯುಎಸ್ ಸಾಮ್ರಾಜ್ಯಶಾಹಿ, ಭಾರತದ ಜನತೆಯ ಶತ್ರು ಎಂಬ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತಾಡುತ್ತಿದ್ದರು.
ಇದನ್ನೂ ಓದಿ : ಆರೋಗ್ಯ ಹಕ್ಕಿನ ಕಾಯ್ದೆ ಜಾರಿಯಾಗಲಿ – ಆರೋಗ್ಯ ಹಕ್ಕು ಜಾಥಾ ಯಶಸ್ವಿ
ಸೋವಿಯತ್ ಯೂನಿಯನ್‌ನ ಕುಸಿತದ ನಂತರ ಅಮೆರಿಕಾ ವರ್ತನೆ ಅತಿಯಾಗಿದೆ. ಭಾರತದ ವರ್ತಮಾನದ ಬಿಕ್ಕಟ್ಟುಗಳಲ್ಲಿ ಅಮೆರಿಕಾದ ಪಾತ್ರವನ್ನು ನಿರಾಕರಿಸಲು ಸಾಧ್ಯವಿಲ್ಲ. ಅಮೆರಿಕನ್ ಸಾಮ್ರಾಜ್ಯಶಾಹಿ ಕೂಟವನ್ನು ಅರ್ಥ ಮಾಡಿಕೊಳ್ಳುವಲ್ಲಿ ಮೂರನೆ ಜಗತ್ತಿನ ದೇಶಗಳ ಜನತೆ ಸೋತಿವೆ. ಎರಡನೇ ಮಹಾಯುದ್ಧದ ಬಳಿಕ ಬ್ರಿಟಿಷ್ ವಸಾಹತುಶಾಹಿಯ ಬದಲಿಗೆ ಅಮೆರಿಕಾ ದೊಡ್ಡಣ್ಣನಾಗಿ ವರ್ತಿಸುತ್ತಿದೆ. ಭಾರತದ ಜನತೆಯ ನೈಜ ಶತ್ರುವಾದ ಅಮೆರಿಕನ್ ಸಾಮ್ರಾಜ್ಯಶಾಹಿಯನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗಬೇಕು ಎಂದು ಪ್ರೊ. ರಾಜೇಂದ್ರ ಉಡುಪ ಅಭಿಪ್ರಾಯಪಟ್ಟರು.
ಸಮುದಾಯ ರಂಗ ಚಳವಳಿಯ ಹಿರಿಯ ನಾಯಕ ವಾಸುದೇವ ಉಚ್ಚಿಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರು. ಮಂಗಳೂರು ನಗರ ಉತ್ತರ ಸಮಿತಿಯ ಕಾರ್ಯದರ್ಶಿ ಪ್ರಮೀಳಾ ಕೆ. ವಂದಿಸಿದರು
ಇದನ್ನೂ ನೋಡಿ : ಸರ್ಕಾರಿ ಶಾಲೆ ಉಳಿಸಿ’ ಬೀದಿ ನಾಟಕ | “ಸಂಯೋಜನೆನಾ? ಶಾಲೆ ಮುಚ್ಚುವ ಯೋಜನೆನಾ? Janashakthi Media
