ಚೆನ್ನೈ: ನಟ ರಜನಿಕಾಂತ್ ಕೊನೆಯ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಚಿತ್ರವನ್ನು ರಜನಿ ಮಗಳೇ ನಿರ್ಮಾಣ ಮಾಡುವ ಸಾಧ್ಯತೆ ಇದೆ ಎಂದು ವರದಿ ಆಗಿದೆ. ಈ ಆಸೆಯನ್ನು ಈಡೇರಿಸಲು ರಜನಿ ಕೂಡ ಒಪ್ಪಿದ್ದಾರೆ ಎಂದು ತಳಿದುಬಂದಿದೆ.
ಹಲವು ವರ್ಷ ಚಿತ್ರರಂಗದಲ್ಲಿ ಶ್ರಮಿಸಿ ನಂತರ ವೃತ್ತಿ ಜೀವನಕ್ಕೆ ಗುಡ್ಬೈ ಹೇಳಬೇಕು ಎಂದರೆ ಭಾವನಾತ್ಮಕವಾಗಿ ಅದು ನಿಜಕ್ಕೂ ಚಾಲೆಂಜಿಂಗ್ ಅನ್ನಿಸೋ ವಿಷಯ. ಕೊನೆಯ ಸಿನಿಮಾ ಮೆಮೊರೆಬಲ್ ಆಗಿರಬೇಕು ಎಂದು ಅನೇಕರು ಬಯಸುತ್ತಾರೆ. ಈ ಎಲ್ಲಾ ಕಾರಣದಿಂದ ಸೌಂದರ್ಯಾ ರಜನಿಕಾಂತ್ ಅವರು ಸಿನಿಮಾನ ನಿರ್ಮಾಣ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಜಾತಿ, ದಬ್ಬಾಳಿಕೆ ಮತ್ತು ಪ್ರತಿರೋಧ: ಮನಮುಟ್ಟುವ ‘ಸಂಬಳಿಗೋಲು’
ಸಾಮಾನ್ಯವಾಗಿ ಕೊನೆಯ ಸಿನಿಮಾ ಎಂದಾಗ ಬಿಸ್ನೆಸ್ ದೃಷ್ಟಿಯಲ್ಲೂ ಹೆಚ್ಚು ಲಾಭ ತಂದುಕೊಡುತ್ತದೆ. ರಜನಿ ಅವರನ್ನು ಇನ್ನೆಂದೂ ದೊಡ್ಡ ಪರದೆ ಮೇಲೆ ನೋಡಲು ಸಾಧ್ಯವಿಲ್ಲ ಎಂಬ ಭಾವಾನಾತ್ಮಕ ನೆಲೆಗಟ್ಟಿನ ಮೇಲೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾನ ವೀಕ್ಷಿಸಲು ತೆರೆಳುತ್ತಾರೆ. ಇನ್ನು, ಟಿವಿ ಹಾಗೂ ಒಟಿಟಿ ಹಕ್ಕುಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ಬಿಕರಿ ಆಗುವ ಸಾಧ್ಯತೆ ಇರುತ್ತದೆ.
ರಜನಿಕಾಂತ್ ಇನ್ನೂ ಕೆಲವು ಸಿನಿಮಾಗಳನ್ನು ಮಾಡುತ್ತಾರೆ ಎಂಬ ವರದಿ ಕೂಡ ಇದೆ. ಅವರು ಕಮಲ್ ಹಾಸನ್ ಜೊತೆ ಸಿನಿಮಾ ಒಂದನ್ನು ಮಾಡಬೇಕಿದೆ. ಇದಾದ ಬಳಿಕ ಅವರ ಕೊನೆಯ ಸಿನಿಮಾ ಸೆಟ್ಟೇರುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಅಷ್ಟೇ ಅಲ್ಲ, ಕೊನೆಯ ಸಿನಿಮಾಗೆ ನಿರ್ದೇಶನ ಮಾಡುವವರು ಯಾರು ಎಂಬ ಕುತೂಹಲವೂ ಮೂಡಿದೆ.
ಇದನ್ನೂ ನೋಡಿ: “ಮ್ಯಾಗ್ನೆಟ್ ಯೋಜನೆಗೆ ವಿರೋಧ – ಆಂದೋಲನವಾಗುತ್ತಿರುವ ಸರ್ಕಾರಿ ಶಾಲೆ ಉಳಿಸಿ ಹೋರಾಟ” Janashakthi Media
