ಚಿಕ್ಕಮಗಳೂರು: ಫೆಬ್ರವರಿ 16ರ ರಾತ್ರಿ ಒಂದು ಸಮುದಾಯದವರ ಮನೆಗಳ ಮೇಲೆ ಇನ್ನೊಂದು ಸಮುದಾಯಕ್ಕೆ ಸೇರಿದ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನುವ ಆರೋಪ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಲ್ಲಿ ಆತಂಕಕ್ಕೆ ಎಡೆ ಮಾಡಿದ್ದೂ, ಇಲ್ಲಿನ ವಿಜಯಪುರ ಬಡಾವಣೆಯಲ್ಲಿ 5-6 ಯುವಕರಿಂದ ಮನೆಗಳ ಮೇಲೆ ಕಲ್ಲು-ತೂರಾಟ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರು
ಕಳೆದ ಮೂರು ದಿನಗಳಿಂದ ಕಲ್ಲು ಹೊಡೆಯೋದು ಈ ರೀತಿಯ ಕೃತ್ಯವನ್ನು ಯುವಕರ ಗುಂಪೊಂದು ಮಾಡುತ್ತಿತ್ತು ಎಂದು ಆರೋಪಿಸಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಇಬ್ಬರಿಗೆ ಹಿಂದುತ್ವ ಸಂಘಟನೆ ಕಾರ್ಯಕರ್ತರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಇದು ನೈತಿಕ ಪೊಲೀಸ್ ಗಿರಿ ಎನ್ನುವ ಆರೋಪವೂ ವ್ಯಕ್ತವಾಗಿದೆ.
ಇದನ್ನೂ ಓದಿ: ಪ್ರಯಾಣಿಕರನ್ನು ಮಧ್ಯ ದಾರಿಯಲ್ಲೇ ಇಳಿಸಿದ ನಿರ್ವಾಹಕ
ಬಸವನಹಳ್ಳಿ ಪೊಲೀಸ್ ಠಾಣೆ ಮುಂದೆ ಎರಡೂ ಎರಡು ಸಮುದಾಯದ ನೂರಾರು ಯುವಕರು ಜಮಾವಣೆ ಆಗಿದ್ದರು. ಕಲ್ಲು ಹೊಡೆದವರು ಅವರಲ್ಲ ಎಂದು ಒಂದು ಸಮುದಾಯದವರ ವಾದವಾದರೆ, ಕಲ್ಲು ತೂರಾಟ ನೆಡಸಿದವರ ಮೇಲೂ ಕ್ರಮವಾಗಬೇಕೆಂದು ಇನ್ನೊಂದು ಸಮುದಾಯದವರ ವಾದವಾಗಿತ್ತು.
ಹಲ್ಲೆಗೊಳಗಾಗದವರ ಪರ ಆಸ್ಪತ್ರೆ ಮುಂದೆ ನೂರಾರು ಯುವಕರು ಸೇರಿದ್ದರು. ಮಧ್ಯರಾತ್ರಿ ಬಸವನಹಳ್ಳಿ ಪೊಲೀಸ್ ಠಾಣೆ, ಆಸ್ಪತ್ರೆ ಬಳಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ತಕ್ಷಣ ಪೊಲೀಸ್ ಠಾಣೆ-ಆಸ್ಪತ್ರೆ ಬಳಿ ಗುಂಪು ಸೇರದಂತೆ ಪೊಲೀಸರು ಎಚ್ಚರವಹಿಸಿದ್ದರು.
ಹಲ್ಲೆಗೊಳಗಾದವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹಲ್ಲೆಗೊಳಗಾದವರು ಇಬ್ಬರೂ ಅಪ್ರಾಪ್ತರಾಗಿದ್ದು, ಅವರ ಹೇಳಿಕೆ ಆಧರಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ದೂರು-ಪ್ರತಿದೂರು ದಾಖಲಾಗಿದೆ.
ಇದನ್ನೂ ನೋಡಿ: ಕಾರ್ಮಿಕ–ರೈತ- ಕೂಲಿಕಾರರ ಮಹಾ ಹೋರಾಟ – ದೇಶವ್ಯಾಪಿ ಮುಷ್ಕರಕ್ಕೆ ಭಾರೀ ಸ್ಪಂದನೆ Janashakthi Media
