ಮುಂಬಯಿ: ಹತ್ತನೇ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಹವಾ ಜೋರಾಗಿಯೇ ಬೀಸಲಾರಂಭಿಸಿದೆ. ಫೆಬ್ರವರಿ 7ರಿಂದ ಮುಂದಿನೊಂದು ತಿಂಗಳ ಕಾಲ, ಭಾರತ -ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುವ ಈ ಪಂದ್ಯಾವಳಿದೇ ಮಾತು, ಕತೆ, ಚರ್ಚೆ. ವಿಶ್ವಕಪ್
ಟಿ ಟ್ವೆಂಟಿಯೇ ನಿಜವಾದ ಕ್ರಿಕೆಟ್ ಎನಿಸಿಕೊಂಡಿರುವ ಈ ಕಾಲಘಟ್ಟದಲ್ಲಿ ಈ ಚುಟುಕು ಕ್ರಿಕೆಟ್ ಪಂದ್ಯಾವಳಿ ಬೆಟ್ಟದಷ್ಟು ನಿರೀಕ್ಷೆ, ಮೇರೆ ಮೀರುವಷ್ಟು ಕುತೂಹಲ ಹಾಗೂ ಅಪರಿಮಿತ ರೋಮಾಂಚನದೊಂದಿಗೆ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸುವುದರಲ್ಲಿ ಅನುಮಾನವಿಲ್ಲ. ವಿಶ್ವಕಪ್
ದಿನಕ್ಕೆ ಮೂರರಂತೆ ಪಂದ್ಯಗಳು ನಡೆಯಲಿದ್ದು, ಶನಿವಾರ ರಾತ್ರಿಯ ಮುಖಾಮುಖಿಯಲ್ಲಿ ಭಾರತ ಮತ್ತು ಯುಎಸ್ಎ ಎದುರಾಗಲಿವೆ. ಸೂರ್ಯ ಪಡೆಯ ಮೊದಲ ಎದುರಾಳಿಯಾಗಿರುವ ಈ ತಂಡ ಹೆಸರಿಗೆ ಮಾತ್ರ ‘ಅಮೆರಿಕ ಟೀಮ್’. ಇಲ್ಲಿನ ಬಹುತೇಕ ಆಟಗಾರರು ಏಷ್ಯಾ ಮೂಲದವರೇ ಆಗಿದ್ದಾರೆ. ಅದರಲ್ಲೂ ಭಾರತೀಯರದ್ದು ಸಿಂಹಪಾಲು. ಹೀಗಾಗಿ ಅಮೆರಿಕವನ್ನು ‘ಭಾರತ ಎ ತಂಡ’ ಎಂದು ಕರೆಯಲಡ್ಡಿಯಿಲ್ಲ! ವಿಶ್ವಕಪ್
ಇದನ್ನೂ ಓದಿ: ಬೆಂಗಳೂರು ಚಿತ್ರೋತ್ಸವ – ಇಂದು ನಾ ನೋಡಿದ ಚಿತ್ರಗಳು
ಅಭ್ಯಾಸ ಪಂದ್ಯದಲ್ಲಿ ಭಾರತ ‘ಎ’ ತಂಡ ಅಮೆರಿಕವನ್ನು ಮಣಿಸಿತ್ತು. ಹಾಗೆಯೇ ಸೂರ್ಯ ಪಡೆ ದಕ್ಷಿಣ ಆಫ್ರಿಕಾವನ್ನು ಕೆಡವಿತ್ತು.
ರೋಹಿತ್, ಕೊಹ್ಲಿ ಇಲ್ಲದ ವಿಶ್ವಕಪ್
ಕಳೆದ ಸಲ ರೋಹಿತ್ ಶರ್ಮ ನಾಯಕತ್ವದಲ್ಲಿ ಕಣಕ್ಕಿಳಿದ ಭಾರತ, 2ನೇ ಸಲ ಚಾಂಪಿಯನ್ ಆಗಿತ್ತು. ಅಂದಿನ ವಿಜೇತ ತಂಡದ ಪ್ರಮುಖ ಸದ್ಯಸರಾದ ಕೊಹ್ಲಿ, ಜೈಸ್ವಾಲ್, ಪಂತ್, ಜಡೇಜ, ಚಹಲ್ ಮತ್ತು ಸಿರಾಜ್ ಈ ಸಲ ಇಲ್ಲ. ಇವರ ಸ್ಥಾನಕ್ಕೆ ಅಭಿಷೇಕ್ ಶರ್ಮ, ತಿಲಕ್ ವರ್ಮ, ರಿಂಕು ಸಿಂಗ್, ವರುಣ್ ಚಕ್ರವರ್ತಿ ಮೊದಲಾದ ಹೊಸಬರು ಬಂದಿದ್ದಾರೆ. ಈಗಾಗಲೇ ಸಾಕಷ್ಟು ಭರವಸೆ ಮೂಡಿಸಿರುವ ಇವರು ಭಾರತದ ಪ್ರಶಸ್ತಿ ಉಳಿಸುವಿಕೆಯ ಅಭಿಯಾನದಲ್ಲಿ ಮಹತ್ವದ ಪಾತ್ರ ವಹಿಸುವ ನಂಬಿಕೆ ಇದೆ.
ಉಳಿದಂತೆ ನಾಯಕ ಸೂರ್ಯಕುಮಾರ್ ಯಾದವ್ ಹೊತ್ತಿಗೆ ಸರಿಯಾಗಿ ಫಾರ್ಮ್ ಕಂಡುಕೊಂಡಿದ್ದಾರೆ. ಇಶಾನ್ ಕಿಶನ್ ಅವರದು ಸ್ಫೋಟಕ ಆಟವಾಡುತ್ತಿದ್ದಾರೆ. ಒಟ್ಟಾರೆ ಭಾರತದ ಬ್ಯಾಟಿಂಗ್ ಸರದಿ ಕೂಟದಲ್ಲೇ ಅತ್ಯಂತ ಬಲಿಷ್ಠ.
ರಾಣಾ ಗಾಯಾಳು, ಸಿರಾಜ್ ಸೇರ್ಪಡೆ
ಆದರೆ ಬೌಲಿಂಗಿಗೆ ಇದೇ ಮಾತು ಅನ್ವಯಿಸದು. ಬುಮ್ರಾ ಲಯ ತಪ್ಪಿರುವುದು ಚಿಂತೆಯ ಸಂಗತಿ. ಆಲ್ರೌಂಡರ್ ಹರ್ಷಿತ್ ರಾಣಾ ಗಾಯಾಳಾಗಿ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಬಂದಿದ್ದಾರೆ. ಸಿರಾಜ್ ಅನುಭವ ಭಾರತಕ್ಕೆ ದಕ್ಕಬೇಕಿದೆ. ಆರ್ಷದೀಪ್ ಮಿಂಚುವುದು ಒಂದು ಸ್ಪೆಲ್ ನಲ್ಲಿ ಮಾತ್ರ. ಸ್ಪಿನ್ ದಾಳಿಯನ್ನು ಭಾರತ ಹೆಚ್ಚು ಅವಲಂಬಿಸಬೇಕಿದೆ.
ಮುಂಬಯಿ ಮೂಲದವರು…
ಅಮೆರಿಕ ತಂಡದ ಕುರಿತು ಹೇಳುವುದಾದರೆ, ಶುಭಂ ರಂಜನೆ, ಹರ್ಮೀತ್ ಸಿಂಗ್, ಸೌರಭ್ ನೇತ್ರಾವಲ್ಕರ್ ಅವರೆಲ್ಲ ಒಂದು ಕಾಲದಲ್ಲಿ ಸೂರ್ಯಕುಮಾರ್ ಜತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡವರೇ ಆಗಿದ್ದಾರೆ. ಮೂಲತಃ ಇವರೆಲ್ಲ ಮುಂಬಯಿಯವರು.
ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡಿಗೆ ತೀವ್ರ ಪೈಪೋಟಿ ನೀಡಿದ್ದ ಯುಎಸ್ಎ, ಕೇವಲ 7 ರನ್ನಿನಿಂದ ಸೋತಿತ್ತು. ಯಾವ ಕಾರಣಕ್ಕೂ ಈ ಎದುರಾಳಿಯನ್ನು ಭಾರತ ಲಘುವಾಗಿ ಪರಿಗಣಿಸುವ ಹಾಗಿಲ್ಲ.
ಉಳಿದಂತೆ, ಪಾಕಿಸ್ಥಾನ ತಂಡ ಭಾರತದ ವಿರುದ್ಧ ಆಡದಿರುವ ತೀರ್ಮಾನಕ್ಕೆ ಬಂದಿದೆ. ಸೂರ್ಯ ಪಡೆಯ ಉಳಿದೆರಡು ಎದುರಾಳಿಗಳಾದ ನಮೀಬಿಯಾ ಮತ್ತು ನೆದರ್ಲೆಂಡ್ಸ್ ಸಾಮಾನ್ಯ ತಂಡಗಳು. ಹೀಗಾಗಿ ಟೀಮ್ ಇಂಡಿಯಾ ಸುಲಭದಲ್ಲಿ ಲೀಗ್ ಹಂತ ದಾಟಲಿದೆ ಎಂಬುದೊಂದು ಲೆಕ್ಕಾಚಾರ.
3ನೇ ಟ್ರೋಫಿ ಗೆದ್ದರೆ ಭಾರತದ ಹೆಸರಿಗೆ ಸಾಲು ಸಾಲು ದಾಖಲೆ!
ಈ ಬಾರಿ ಟೀಮ್ ಇಂಡಿಯಾ ಗೆದ್ದರೆ ಕಪ್ ಉಳಿಸಿಕೊಂಡ ಮೊದಲ ತಂಡವೆನಿಸಲಿದೆ, ಜೊತೆಗೆ 3 ಸಲ ಚಾಂಪಿಯನ್ ಎನಿಸಿಕೊಂಡ ಪ್ರಪ್ರಥಮ ತಂಡವೆಂಬ ಹಿರಿಮೆಗೂ ಪಾತ್ರವಾಗಲಿದೆ. ಹಾಗೆಯೇ ತವರಿನ ಅಂಗಳದಲ್ಲಿ ಚಾಂಪಿಯನ್ ಎನಿಸಿಕೊಂಡ ಮೊದಲ ತಂಡವೆಂಬ ವಿಶಿಷ್ಟ ದಾಖಲೆಯೂ ನಮ¬¾ದಾಗಲಿದೆ. ಸೂರ್ಯಕುಮಾರ್‌ಯಾದವ್ ಈ ಬಾರಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆರಂಭದಿಂದ 8ನೇ ಕ್ರಮಾಂಕದ ವರೆಗೂ ಹಾರ್ಡ್ ಹಿಟ್ಟರ್‌ಗಳನ್ನು ಒಳಗೊಂಡ ಈ ಕೂಟದ ಏಕೈ ತಂಡವೆಂಬುದು ಭಾರತದ ಹೆಗ್ಗಳಿಕೆ. ಅಭಿಷೇಕ್, ಇಶಾನ್, ತಿಲಕ್, ಸೂರ್ಯ, ಪಾಂಡ್ಯ, ದುಬೆ, ರಿಂಕು, ಅಕ್ಷ.
ಹೀಗೆ ಸಾಗುತ್ತದೆ ಭಾರತದ ಬ್ಯಾಟಿಂಗ್ ಲೈನ್ ಅಪ್. ಇವರೆಲ್ಲ ಸಿಡಿದು ನಿಂತರೆ ಬೃಹತ್ ಮೊತ್ತದ ದಾಖಲೆ ಖಂಡಿತ. ಇವರಲ್ಲಿ ನಾಲ್ವರು ಆಲ್ ರೌಂಡರ್ ಗಳೂ ಇದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ ನಮ¬¾ವರ ಪ್ರಮುಖ ಅಸ್ತ್ರ. ವರುಣ್, ಕುಲದೀಪ್, ಅಕ್ಷರ್‌ಅವರೆಲ್ಲ ಭಾರತಿಈಯ ಸ್ಪಿನ್ ಪಿಚ್ ಗಳ ಲಾಭ ಪಡೆಯುವ ನಿರೀಕ್ಷೆ ದಟ್ಟವಾಗಿದೆ. ಬುಮ್ರಾ, ಅರ್ಷದೀಪ್, ರಾಣಾ ಅವರ ವೇಗದ ದಾಳಿ ಹರಿತಗೊಂಡರೆ ಭಾರತವನ್ನು ತಡೆಯುವುದು ಖಂಡಿತ ಸುಲಭವಲ್ಲ.
ಭಾರತ ತನ್ನ 4 ಲೀಗ್ ಪಂದ್ಯಗಳಲ್ಲಿ ಮೂರನ್ನು ತವರಲ್ಲೇ ಆಡಲಿದೆ. ಪಾಕಿಸ್ತಾನ ನ ಮ್ಮೆದುರು ಆಡುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಹೀಗಾಗಿ ಈಗಾಗಲೇ 2 ಅಂಕ ಭಾರತದ ಖಾತೆಗೆ ಜಮೆ ಆಗಿದೆ!
ಇಂದಿನ ಪಂದ್ಯ
1. ಪಾಕಿಸ್ಥಾನ-ನೆದರ್ಲೆಂಡ್ಸ್
ಸ್ಥಳ: ಕೊಲಂಬೊ
ಆರಂಭ: ಬೆ. 11.00
2. ವೆಸ್ಟ್ ಇಂಡೀಸ್-ಸ್ಕಾಟ್ಲೆಂಡ್
ಸ್ಥಳ: ಕೋಲ್ಕತಾ
ಆರಂಭ: ಅ. 3.00
3. ಭಾರತ-ಯುಎಸ್ಎ
ಸ್ಥಳ: ಮುಂಬಯಿ
ಆರಂಭ: ರಾ. 7.00
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಭಾರತದ ಲೀಗ್ ಪಂದ್ಯಗಳು
ದಿನಾಂಕ ಎದುರಾಳಿ ಸ್ಥಳ ಆರಂಭ
ಫೆ. 7 ಯುಎಸ್ಎ ಮುಂಬಯಿ ರಾ. 7.00
ಫೆ. 12 ನಮೀಬಿಯಾ ಹೊಸದಿಲ್ಲಿ ರಾ. 7.00
ಫೆ. 15 ಪಾಕಿಸ್ಥಾನ ಕೊಲಂಬೊ ರಾ. 7.00
ಫೆ. 18 ನೆದರ್ಲೆಂಡ್ಸ್ ಅಹ್ಮದಾಬಾದ್ ರಾ. 7.00
ಇದನ್ನೂ ನೋಡಿ: ಮುಚ್ಚುವ ಅಂಚಿನಿಂದ.. ನೂರರ ಸಂಭ್ರಮದವರೆಗೆ – ಸರಕಾರಿ ಶಾಲೆಯ ಕಥೆ Janashakthi Media
