ಎಮರ್ಸನ್ ಎಂಬ ಲೇಖಕ ಹೇಳ್ತಾನೆ: “ಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗಲಿರುವ ಆಸ್ತಿ ಪುಸ್ತಕಗಳು!” ನಿಜ. ಈಚಿನ ವರ್ಷಗಳಲ್ಲಿ ಕನ್ನಡದ ಮೇರು ಲೇಖಕರ ಕೃತಿಗಳು ಹಾಗೂ ಅವರು ವಾಸವಿದ್ದ ಮನೆಯ ವಿಚಾರದಲ್ಲಿ ಈ ಮಾತು ದುರ್ಬಳಕೆ ಆಗುತ್ತಿರುವ ಘಟನೆಗಳು ನಡೆದಿವೆ. ಹಾಗಾದರೆ ವಾಸ್ತವ ಯೋಚಿಸೋಣ. ಮೈಸೂರು
– ಆರ್.ಜಿ. ಹಳ್ಳಿ ನಾಗರಾಜ
ಕುವೆಂಪು ಹೆಸರಲ್ಲಿ ಅವರ ಕುಟುಂಬ ಅವರಿದ್ದ ಮನೆ ಮಾರಾಟದಲ್ಲಿ ದಂಧೆ ಮಾಡುತ್ತಿದೆಯಾ? ಕಾಸಿಗೆ ಕೈ ಚಾಚೋ ಕುಟುಂಬ ಆಗಿದೆಯಾ? ಹೀಗೆ ವರ್ತಿಸೋರು ಕುವೆಂಪುಗೆ ಯೋಗ್ಯ ಮಕ್ಕಳಲ್ಲವಾ? ಹೀಗೊಂದು ಜಿಜ್ಞಾಸೆ ಶುರುವಾಗಿದೆ. ಮೈಸೂರು ಕುವೆಂಪು ಮನೆ “ಉದಯರವಿ” ಸ್ಮಾರಕ ಆಗಲಿ ಅಂತ ಕೆಲವರು ಹುಯಿಲೆಬ್ಬಿಸಿದರು! ಅದಕ್ಕೆ ಸರ್ಕಾರವು ಮಣಿಯಿತು. ಇದನ್ನೆ ಬಂಡವಾಳ ಮಾಡಿಕೊಂಡ ಕುವೆಂಪು ಕುಟುಂಬದ ಸದಸ್ಯರು ದುರಾಸೆಗೆ ದಾರಿ ಮಾಡಿಕೊಂಡರು.
ಮೈಸೂರಿನಲ್ಲಿ ವಾಸವಿದ್ದ ಕುವೆಂಪು ಮನೆ ಸ್ಮಾರಕ ಆಗುವುದು ಬೇಡ. ಅದಕ್ಕೆ ಅವರ ಕುಟುಂಬ ₹15 ಕೋಟಿಗೆ ಬೇಡಿಕೆ ಇಟ್ಟಿದೆಯಂತೆ! ಇಷ್ಟು ಹಣ ಕೊಡಲು ಇದು ಯಾರಪ್ಪನ ಮನೆ ದುಡ್ಡು? ನನ್ನ ತೆರಿಗೆ ಹಣ ಅದು. ಕುವೆಂಪುಗೆ ಕುಪ್ಪಳಿ ಮನೆಯ ಸ್ಮಾರಕವೆ ಸಾಕು. ಒಬ್ಬ ಕವಿಗೆ ಎರಡು ಸ್ಮಾರಕ ಏಕೆ? ಸರ್ಕಾರ ಕೂಡಲೆ ಈ ಯೋಜನೆ ಕೈ ಬಿಡಲಿ. ಮೈಸೂರು
ಇದನ್ನೂ ಓದಿ: ಸೈಬರ್ ವಂಚನೆ ಪ್ರಕರಣ: 13 ಮಾಸ್ಟರ್ ಮೈಂಡ್‌ಗಳ ಬಂಧನ
ಇನ್ನು ಮೂಡಿಗೆರೆ ಸಮೀಪದಲ್ಲಿರೋ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯ ಪ್ರತಿಷ್ಠಾನವೂ ಹಾಳೊಯ್ಯುತ್ತಿದೆ. ಅಲ್ಲಿ ತೇಜಸ್ವಿ ಬಳಸುತ್ತಿದ್ದ ಒಂದೇ ಒಂದು ವಸ್ತುವನ್ನು ಅವರ ಮಕ್ಕಳು ಪ್ರತಿಷ್ಠಾನಕ್ಕೆ ಕೊಟ್ಟಿಲ್ಲ. ಅಲ್ಲೂ ಕೋಟಿಗಳ ಬೇಡಿಕೆ ಇಟ್ಟಿದ್ದಾರಂತೆ! ದಿನಕ್ಕೆ ಲಕ್ಷಗಟ್ಟಲೆ ಅವರ ಕೃತಿಗಳಿಂದ ಸಂಪಾದನೆ ಇದ್ದು ಇನ್ನೂ ದುರಾಸೆಯೆ? ತೇಜಸ್ವಿ ಕತೆ, ಕಾದಂಬರಿ ನಾಟಕ ಮಾಡಿದರೆ ಅಲ್ಲೂ ಪ್ರದರ್ಶನಕ್ಕಿಷ್ಟು ಹಣ ಕೊಡಲು ಬೇಡಿಕೆಯಿಟ್ಟಿದ್ದಾರೆ! ಇವರು ಕಲಿತ ಕುವೆಂಪು ಮೊಮ್ಮಕ್ಕಳು!!!
ಹಿಂದೆ ಕವಿ ದ.ರಾ. ಬೇಂದ್ರೆ ಮಗ ವಾಮನ ಬೇಂದ್ರೆ ಪೀಡೆ ಆಗಿದ್ದ. ಅವರ ಕವನಗಳ ಎರಡು ಸಾಲು ಪ್ರಕಟಿಸಲು ಒಪ್ಪಿಗೆ ಬೇಕಿತ್ತು. ಅಪ್ಪಿತಪ್ಪಿ ಪ್ರಕಟಿಸಿದರೆ, ಅವರ ಫೋಟೋ ಮುದ್ರಿಸಿ ಹಂಚಿದರೆ copyright ಹೆಸರಲ್ಲಿ ಕೋರ್ಟಿಗೆ ಹೋದ ಉದಾಹರಣೆಯೂ ಇದೆ! ಇನ್ನು ಹುಬ್ಬಳ್ಳಿಯ ಯಾವನೋ ಶರ್ಮನದ್ದು ಇದೇ ಕತೆ. ಬೇಂದ್ರೆ ಕವಿಯ ಅನೇಕ ಬಳಕೆ ವಸ್ತು, ಕಾವ್ಯ ಕೃತಿಗಳ ಹಕ್ಕು ಹೊಂದಿದ್ದಾನೆ. ಆತ ಬೇಂದ್ರೆಯ ಹೆಸರನ್ನು ಹಾಳು ಹಾಳುಮಾಡಿದ. ಧಾರವಾಡದಲ್ಲಿ ಸರ್ಕಾರದ ಬೇಂದ್ರೆ ಟ್ರಸ್ಟ್ ಇದೆ. ಅಲ್ಲೇ ಬೇಂದ್ರೆ ಸ್ಮಾರಕ ಭವನವೂ ಇದೆ. ಆಯ್ತು ಅದರಲ್ಲೇನಿದೆ ಕವಿ ಕುರುಹು? ಹ್ಞೂ… ಹೂ… ಏನೂ ಇಲ್ಲ. ಅಲ್ಲೇನಿದೆ ಮಣ್ಣಂಗಟ್ಟಿ? ಕುಪ್ಪಳಿಯ ಕುವೆಂಪು ಸ್ಮಾರಕದ ಮುಂದೆ ಅದು “ಸೊನ್ನೆ”. ಮೈಸೂರು
ಇನ್ನು ಶಿವರಾಮ ಕಾರಂತರರ ಕೃತಿ ಸ್ವಾಮ್ಯದ ಮಾತು ಹೇಳುವಂತೆಯೇ ಇಲ್ಲ. ಅವರ ಕೃತಿಯೊಂದು ನಾಟಕವಾದರೆ, ಅದಕ್ಕೆ ತಕರಾರು, ರಾಯಲ್ಟಿ ಅಂತ ಕೃತಿ ಸ್ವಾಮ್ಯ ಪಡೆದ ಮಾಲಿನಿ ಮಲ್ಯ ಕೋರ್ಟಿಗೆ ಹೋಗಿದ್ದರು. ಇನ್ನು ಕೃತಿ ಮುದ್ರಣಕ್ಕೆ ಎಷ್ಟೋ ಲಕ್ಷದ ಬೇಡಿಕೆ! ಮಾಲಿನಿ ಮಲ್ಯರಿಗೆ ಕಾರಂತರು ಕೊನೆ ಕಾಲದಲ್ಲಿ ಕೃತಿ ಹಕ್ಕುಸ್ವಾಮ್ಯ ನೀಡಿದ್ದರು. ಇಷ್ಟೇ ಸಾಕಾಯ್ತು ದರ್ಬಾರು ನಡೆಸಲು. KSDL Chandu “ಮೈ ಮನಗಳ ಸುಳಿಯಲ್ಲಿ” ರಂಗಕ್ಕೆ ಅಳವಡಿಸಿದ್ದರು. ಈಯಮ್ಮನ ತಕರಾರು ಶುರುವಾಯ್ತು. ಲಾಯರ್ ನೋಟೀಸು ಕೊಟ್ಟು ಹಿಂಸೆ ಮಾಡಿ, ನಾಟಕ ಪ್ರದರ್ಶನ ಆಗದಂತೆ ನೋಡಿಕೊಂಡರು.
ಯಾವುದೇ ಲೇಖಕ ಬರೆದ ಕೃತಿ, ಆತ ಸತ್ತ 50 ವರ್ಷದವರೆಗೆ ಅವರ ಕುಟುಂಬದವರ ಸ್ವಾಮ್ಯಕ್ಕೆ ಒಳಪಡುತ್ತೆ. ನಂತರ ಅದನ್ನು ಯಾರಾದರೂ ಅಚ್ಚು ಹಾಕಿಸಲು ಕಾನೂನಿನಲ್ಲಿ ಅವಕಾಶ ಇದೆ. ಠಾಗೋರ್ ಅವರ “ಗೀತಾಂಜಲಿ” ಇತರ ಕೃತಿಗಳಿಗೆ ಹಕ್ಕು ಸ್ವಾಮ್ಯ ಇಲ್ಲ. ಈಗ ಯಾರಾದರೂ ಮುದ್ರಿಸಬಹುದು. ದ.ರಾ. ಬೇಂದ್ರೆ ಕೃತಿಗಳು ಜನ ಸಾಮಾನ್ಯರ ಕೈಗೆ, ಪ್ರಕಾಶಕರಿಗೆ ಎಟಗಲು ಇನ್ನು ಕೆಲವೆ ವರ್ಷಗಳಿವೆ.
ಇದನ್ನೂ ನೋಡಿ: ಬಸವನಗುಡಿ| ಸಾರ್ವಜನಿಕ ಶೌಚಾಲಕ್ಕೆ ಬೀಗ – ಜನರ ಪರದಾಟ Janashakthi Media
