ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ – ನಟಿ ಜಯಮಾಲಗೆ ಗೆಲುವು; ಅಧ್ಯಕ್ಷೆ ಸ್ಥಾನ

ಬೆಂಗಳೂರು: ಜನವರಿ 31ರಂದು ಗುರುರಾಜ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆದಿದ್ದು, ನಟಿ ಜಯಮಾಲ ಗೆಲುವು ಸಾಧಿಸಿದ್ದಾರೆ. ಕರ್ನಾಟಕ 

ಈ ಭಾರಿಯ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟಿ ಜಯಮಾಲಾ ಹಾಗೂ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಭಾ.ಮಾ. ಹರೀಶ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ 512 ಮತ ಪಡೆದು ಜಯಮಾಲಾ ಜಯಗಳಿಸಿದ್ದಾರೆ.

ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ 2026–27ನೇ ಸಾಲಿನ ವಾರ್ಷಿಕ ಚುನಾವಣೆ ನಡೆಯಿತು. ಈ ಬಾರಿಯ ಅಧ್ಯಕ್ಷ ಸ್ಥಾನ ನಿರ್ಮಾಪಕರ ವಲಯಕ್ಕೆ ಮೀಸಲಾಗಿತ್ತು.

ಇದನ್ನೂ ಓದಿ: ದ್ವೇಷ ಭಾಷಣ ಮಸೂದೆ ತಡೆಗಟ್ಟಲು ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ: ರಾಜ್ಯಪಾಲರ ವಿರುದ್ಧ ಪರಮೇಶ್ವರ್ ಆರೋಪ

ಈಗಾಗಲೇ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ನಟಿ ಜಯಮಾಲಾ ಹಾಗೂ ನಿರ್ಮಾಪಕ ಭಾ.ಮಾ.ಹರೀಶ್‌ ಅವರು ಈ ವರ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದರು. ಒಟ್ಟು 846 ಮತಗಳು ಚಲಾವಣೆಯಾಗಿದ್ದು, ಜಯಮಾಲಾ ಅವರು 512 ಮತಗಳನ್ನು ಪಡೆದುಕೊಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ನಟ ಸುಂದರ್‌ರಾಜ್‌, ವಿತರಕ ವಲಯದಿಂದ ನಿರ್ಮಾಪಕ ಕೆ.ಮಂಜು ಹಾಗೂ ಪ್ರದರ್ಶಕರ ವಲಯದಿಂದ ಕಿಶೋರ್‌ ಕುಮಾರ್‌ ಎಂ.ಎನ್‌. ಆಯ್ಕೆಯಾಗಿದ್ದಾರೆ. ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ಎ.ಗಣೇಶ್‌, ಪ್ರದರ್ಶಕ ವಲಯದಿಂದ ಅಶೋಕ್‌ ಕೆ.ಸಿ., ವಿತರಕ ವಲಯದಿಂದ ರಮೇಶ್‌ ಬಾಬು ಎಂ.ಆರ್‌. ಚುನಾಯಿತರಾದರು.

ಖಜಾಂಚಿಯಾಗಿ ಜಯಸಿಂಹ ಮುಸುರಿ ಬಿ.ಕೆ. ಆಯ್ಕೆಯಾದರು. ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿಗೆ ಮೂರು ವಲಯದಿಂದ 48 ಮಂದಿ ಸದಸ್ಯರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗಿದೆ.

ಈ ಹಿಂದೆ 2008 ರಿಂದ 2010 ರ ವರೆಗೆ ಜಯಮಾಲಾ ಕೆಎಫ್‌ಸಿಸಿ ಅಧ್ಯಕ್ಷೆ ಆಗಿದ್ದರು. ಇದೀಗ 2ನೇ ಬಾರಿಗೆ ಜಯಮಾಲಾ ಅಧ್ಯಕ್ಷೆ ಆಗಿದ್ದಾರೆ.

ಇದನ್ನೂ ನೋಡಿ: ಗಣರಾಜ್ಯೋತ್ಸವ 2026 | ಒಕ್ಕೂಟ ವ್ಯವಸ್ಥೆ ಗಂಡಾಂತರದಲ್ಲಿದೆ – ಡಾ. ಎಂ. ಚಂದ್ರ ಪೂಜಾರಿ Janashakthi Media

Donate Janashakthi Media

Leave a Reply

Your email address will not be published. Required fields are marked *