ಸಾಮಾಜಿಕ ಜಾಲತಾಣದಲ್ಲಿ : ಅವಮಾನಕಾರಿ ಬರಹ : ಗುಲಾಮರ ಅಪ್ಪ ಅಡ್ಮಿನ್ ಬಂಧನ

ಕಲಬುರಗಿ: ಗುಲಾಮರ ಅಪ್ಪ’ ಸಾಮಾಜಿಕ ಜಾಲತಾಣದಲ್ಲಿ  ಪರಿಶಿಷ್ಟ ಸಮುದಾಯದ ನಾಯಕರ ಬಗ್ಗೆ ಅವಮಾನಿಸಿ ಬರಹ ಪ್ರಕಟಿಸುತ್ತಿದ್ದ ವ್ಯಕ್ತಿಯನ್ನು ನಗರದ ಸಬರ್ಬನ್‌ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ : ಹೋಮ್ ವರ್ಕ್ ಮಾಡಿಲ್ಲವೆಂದು ಬಾಲಕನ ಮೇಲೆ ಹಲ್ಲೆ; ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು

ಬೆಂಗಳೂರಿನ ವಿದ್ಯಾಮಾನ್ಯ ನಗರದ ನಿವಾಸಿ ಆನಂದ್‌ ಅಂಜನಪ್ಪ (41) ಬಂಧಿತ ಆರೋಪಿ. ಬೆಂಗಳೂರು ರೇಸ್‌ಕೋರ್ಸ್‌ ರಸ್ತೆಯ ಕಂಪನಿಯೊಂದರಲ್ಲಿ ಹಿರಿಯ ಐಟಿ ಎಕ್ಸಿಕ್ಯುಟಿವ್‌ ಆಗಿ ಕೆಲಸ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಪರಿಶಿಷ್ಟ ಸಮುದಾಯದ ನಾಯಕರ ಬಗೆಗೆ ಅವಹೇಳಕಾರಿ ಬರಹ ಪ್ರಕಟಿಸುತ್ತಿದ್ದ. ಗುಲಾಮರ ಅಪ್ಪ’ ಹೆಸರಲ್ಲಿ ಫೇಸ್‌ಬುಕ್ ಖಾತೆ ತೆರೆದಿದ್ದ ಆನಂದ್,  ಈ ಬಗೆಗೆ ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಸಬರ್ಬನ್‌ ಠಾಣೆಗೆ ದೂರು ನೀಡಿದ್ದರು.

ಇದನ್ನೂ ನೋಡಿ : ಬೀದಿ ನಾಟಕ | ಒಂದನ್ನಾದರೂ ಒತ್ತಿ ಎರಡನ್ನಾದರೂ ಒತ್ತಿ’ Janashakthi Media

Donate Janashakthi Media

Leave a Reply

Your email address will not be published. Required fields are marked *