ಕಾಸರ ಘಾಟ್‌ನಲ್ಲಿ ಸಿಪಿಐ(ಎಂ)-ಎಐಕೆಎಸ್ ನಾಸಿಕ್ ಮಾರ್ಚ್ ಆರಂಭ

ಮುಂಬೈನ ಮಂತ್ರಾಲಯದಲ್ಲಿ ಜ. 27ರಂದು ನಡೆಯಲಿರುವ ಮಾತುಕತೆಗಾಗಿ ನಿಯೋಗವನ್ನು ಆಹ್ವಾನಿಸಿದ ರಾಜ್ಯ ಸರ್ಕಾರ
ಮುಂಬೈ: ನಾಸಿಕ್‌ನಿಂದ ಜನವರಿ 25ರಂದು ಆರಂಭವಾದ ಸಿಪಿಐ(ಎಂ)–ಎಐಕೆಎಸ್ ನೇತೃತ್ವದ ಭಾರಿ ರೈತ ಪಾದಯಾತ್ರೆ, ಕಳೆದ ಎರಡು ದಿನಗಳಲ್ಲಿ ಸುಮಾರು 60 ಕಿಲೋಮೀಟರ್ ದೂರವನ್ನು ಕ್ರಮಿಸಿ, ಜನವರಿ 27ರ ಬೆಳಿಗ್ಗೆ ಸುಂದರ ಕಾಸರಾ ಘಾಟ್ ಇಳಿಜಾರಿನ ಮೂಲಕ ಮುಂದುವರಿಯಿತು. ಇಂದು ಪಾದಯಾತ್ರೆ ನಾಸಿಕ್ ಜಿಲ್ಲೆಯನ್ನು ದಾಟಿ ಥಾಣೆ ಜಿಲ್ಲೆಗೆ ಪ್ರವೇಶಿಸಿದೆ. ಬಡ ಆದಿವಾಸಿ ರೈತ ಮಹಿಳೆಯರು ಹಾಗೂ ಪುರುಷರು ತೋರಿದ ಹೋರಾಟದ ದೃಢತೆ ನಿಜಕ್ಕೂ ಶ್ಲಾಘನೀಯವಾಗಿದೆ. ಕಾಸರ

ಇಂದು ಈ ಪಾದಯಾತ್ರೆಗೆ ಪಾಲ್ಘರ್‌ನಿಂದ ನಡೆದಿದ್ದ ಭಾರಿ ರೈತ ಮೆರವಣಿಗೆಯ ಮುಖಂಡರಾದ ಶಾಸಕ ವಿನೋದ್ ನಿಕೋಲೆ, ಕಿರಣ್ ಗಹಲಾ, ರಡ್ಕಾ ಕಲಾಂಗಡಾ, ಚಂದ್ರಕಾಂತ್ ಘೋರ್ಕಾಣಾ ಸೇರಿದಂತೆ ಥಾಣೆ–ಪಾಲ್ಘರ್ ಜಿಲ್ಲೆಯ ಹಲವು ಕಾರ್ಯಕರ್ತರು ಸೇರ್ಪಡೆಯಾದರು. ಜೊತೆಗೆ ಅಹಿಲ್ಯಾನಗರ ಜಿಲ್ಲೆಯಿಂದ ನಮದೇವ್ ಭಾಂಗ್ರೆ, ಏಕನಾಥ್ ಮೆಂಗಲ್ ಸೇರಿದಂತೆ ಹಲವು ನಾಯಕರು ಹಾಗೂ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದರು.

ಇದನ್ನೂ ಓದಿ: ಮುಂಬೈ | ಶಿಂಧೆ ರಾಜಕೀಯವನ್ನೇ ಮುಗಿಸುತ್ತೇನೆ” – ಸಚಿವ ಗಣೇಶ್ ನಾಯ್ಕ್

ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪಾದಯಾತ್ರೆಗೆ ವ್ಯಾಪಕ ಪ್ರಚಾರ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ರಾಜ್ಯ ಸರ್ಕಾರ, ಇಂದು ಮುಂಬೈನ ಮಂತ್ರಾಲಯದಲ್ಲಿ ಚರ್ಚೆಗೆ ರೈತ ಸಂಘಟನೆಗಳ ನಿಯೋಗವನ್ನು ಆಹ್ವಾನಿಸಿದೆ. ಮುಖ್ಯಮಂತ್ರಿ ಹಾಗೂ ಸಂಬಂಧಿತ ಸಚಿವರೊಂದಿಗೆ ಚರ್ಚೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.

ಈ ನಿಯೋಗದಲ್ಲಿ ಸಿಪಿಐ(ಎಂ) ಮುಖಂಡರಾದ ಡಾ. ಅಶೋಕ್ ಧಾವಳೆ, ಮಾಜಿ ಶಾಸಕ ಜೆ.ಪಿ. ಗಾವಿತ್, ಡಾ. ಅಜಿತ್ ನವಲೆ, ಶಾಸಕ ವಿನೋದ್ ನಿಕೋಲೆ, ಉಮೇಶ್ ದೇಶಮುಖ್, ಸುಭಾಷ್ ಚೌಧರಿ, ಇಂದ್ರಜಿತ್ ಗಾವಿತ್, ಇರ್ಫಾನ್ ಶೇಖ್, ಕಿರಣ್ ಗಹಲಾ, ಭಿಕಾ ರಾಥೋಡ್, ದೇವಿದಾಸ್ ವಾಘ್ ಹಾಗೂ ರಾಮದಾಸ್ ಪವಾರ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದಾರೆ.

ಇದನ್ನೂ ನೋಡಿ: ಬೀದಿ ನಾಟಕ | ಫಾರ್ ಸೇಲ್ – ರಚನೆ,ನಿರ್ದೇಶನ:ಡಾ.ಟಿ ಎಚ್ ಲವಕುಮಾರ್Janashakthi Media

Donate Janashakthi Media

Leave a Reply

Your email address will not be published. Required fields are marked *