ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ಇಲ್ಲ; ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ಕರ್ನಾಟಕದ ಸ್ತಬ್ಧಚಿತ್ರಕ್ಕೆ ಈ ಬಾರಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಅವಕಾಶ ನೀಡಲಾಗಿಲ್ಲ ಎಂಬುದು ರಾಜ್ಯದ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಾರಿ ಕರ್ನಾಟಕದಿಂದ ಮಿಲೆಟ್ಸ್ ಟು ಮೈಕ್ರೋಚಿಪ್ ಎಂಬ ಪರಿಕಲ್ಪನೆಯಲ್ಲಿ ಸ್ತಬ್ಧಚಿತ್ರ ತಯಾರಿಸಲಾಗಿತ್ತು. ಆದರೆ ಕರ್ನಾಟಕದ ಸ್ತಬ್ಧ ಚಿತ್ರ ಆಯ್ಕೆಯಾಗಿಲ್ಲ. ಇದರ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದರೆ ಇತ್ತ ಬಿಜೆಪಿ ತಿರುಗೇಟು ನೀಡಿದೆ.

ಈ ಸ್ತಬ್ಧ ಚಿತ್ರದಲ್ಲಿ ರಾಜ್ಯದ ಬೆಳೆಗಳಾದ ರಾಗಿ, ಜೋಳ, ನವಣೆ ಜೊತೆಗೆ ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ ಬೆಳವಣಿಗೆಯಾಗಿರುವ ಬಗ್ಗೆ ರೂಪ ಕಟ್ಟಿಕೊಡಲಾಗಿತ್ತು. ಆತ್ಮನಿರ್ಭರ ಭಾರತದ ಸೃಷ್ಟಿಗೆ ರಾಜ್ಯದ ಕೊಡುಗೆ ಗಣನೀಯ ಎಂದು ಈ ಸ್ತಬ್ಧ ಚಿತ್ರ ಸಾರುತ್ತಿತ್ತು. ಗಣರಾಜ್ಯೋತ್ಸವ

ಇದನ್ನೂ ಓದಿ: ಜೇವರ್ಗಿ | ಕಲ್ಲು ತಲೆಯ ಮೇಲೆ, ನೋವು ಮನದಲ್ಲಿ: ಜೇವರ್ಗಿಯಲ್ಲಿ ಜನರ ಪ್ರತಿರೋಧದ ಹೊಸ ರೂಪ

ಆದರೆ ಕೊನೆಯ ಕ್ಷಣದಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಆಯ್ಕೆಯಿಂದ ಹೊರಬಿದ್ದಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿಗೆ ಮತ ಹಾಕಿದವರು ಯೋಚನೆ ಮಾಡಿ. ರಾಜ್ಯದ ಪರ ಧ್ವನಿ ಎತ್ತದ ಸಂಸದರು ಇದನ್ನು ಗಮನಿಸಬೇಕು. 30 ಟ್ಯಾಬ್ಲೋಗಳಿಗೆ ಅವಕಾಶ ನೀಡಲಾಗಿದೆ. 17 ಸ್ತಬ್ಧಚಿತ್ರಗಳು ಕರ್ತವ್ಯ ಪಥದಲ್ಲಿ ಸಂಚರಿಸುತ್ತದೆ. ಇದರಲ್ಲಿ ಕೇರಳ, ತಮಿಳುನಾಡಿನ ಸ್ತಬ್ಧ ಚಿತ್ರವಿದೆ. ಯಾಕೆಂದರೆ ಮುಂದೆ ಅಲ್ಲಿ ಚುನಾವಣೆಯಿದೆ.

ಆದರೆ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ ಸಿಗದ ಬಗ್ಗೆ ಪ್ರತಿಕ್ರಿಯಿಸಿದ ಮೈಸೂರು ಬಿಜೆಪಿ ಸಂಸದ ಯದುವೀರ್ ಒಡೆಯರ್ ಸರಿಯಾಗಿ ಪತ್ರ ವ್ಯವಹಾರವಿಲ್ಲದೇ ಗೊಂದಲದಿಂದಾಗಿ ನಮ್ಮ ಸ್ತಬ್ಧ ಚಿತ್ರ ಆಯ್ಕೆಯಾಗಿಲ್ಲ ಎಂದಿದ್ದಾರೆ.

ಇದನ್ನೂ ನೋಡಿ: “ದುಡಿಯುವ ವರ್ಗದ ಆಕ್ರೋಶ: ಫೆಬ್ರವರಿ 12ಕ್ಕೆ ಸಾರ್ವತ್ರಿಕ ಮುಷ್ಕರ ಘೋಷಣೆ” Janashakthi Media

Donate Janashakthi Media

Leave a Reply

Your email address will not be published. Required fields are marked *