ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯರಿಂದ ಅಖಿಲ ಭಾರತ ಐಕ್ಯ ಹೋರಾಟಗಳನ್ನು ಕಟ್ಟುವ ಪ್ರತಿಜ್ಞೆ

ನವದೆಹಲಿ: ಸಿಪಿಐ(ಎಂ)ನ ಕೇಂದ್ರ ಸಮಿತಿಯ ಮೂರು ದಿನಗಳ ಸಭೆಯು ಜನವರಿ 16ರಂದು ತಿರುವನಂತಪುರದ ಇಎಂಎಸ್ ಅಕಾಡೆಮಿಯಲ್ಲಿ ಪ್ರಾರಂಭವಾಯಿತು, ಕಾಂ. ಬಿ. ವಿ. ರಾಘವುಲು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕಾಂ.. ಎಂ. ಎ. ಬೇಬಿ ರಾಜಕೀಯ ಬೆಳವಣಿಗೆಗಳ ಕುರಿತು ವರದಿಯನ್ನು ಮಂಡಿಸಿದರು.

ಬಿಜೆಪಿ ನೇತೃತ್ವದ ಸರ್ಕಾರದ ಕೃಷಿಕೂಲಿಕಾರ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ಕಾನೂನುಗಳು ಮತ್ತು ನೀತಿಗಳನ್ನು ಖಂಡಿಸುತ್ತ ಕೇಂದ್ರ ಸಮಿತಿಯ ಸದಸ್ಯರು ಅಖಿಲ ಭಾರತ ಐಕ್ಯ ಹೋರಾಟಗಳನ್ನು ನಿರ್ಮಿಸುವ ಮತ್ತು ಅವೆಲ್ಲವನ್ನೂ ರದ್ದುಗೊಳಿಸುವವರೆಗೆ ಜನರನ್ನು ಪ್ರತಿರೋಧದಲ್ಲಿ ಸಜ್ಜುಗೊಳಿಸುವ ಪ್ರತಿಜ್ಞೆಯನ್ನು ತೆಗೆದುಕೊಂಡರು.

ಇದನ್ನೂ ಓದಿ: ಹಣಕಾಸು ವ್ಯವಸ್ಥೆಯನ್ನು ಮತ್ತೆ ಅಪಾಯಕಾರಿ ದಿಕ್ಕಿನತ್ತ ತಳ್ಳುವ ‘ಸುಧಾರಣೆ’ಗಳು

ಪ್ರತಿಜ್ಞೆಯ ಪೂರ್ಣ ಪಾಟ ಹೀಗಿದೆ:

ನಾವು, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), ಜನವರಿ 16, 2026 ರಂದು, ಜನಸಮೂಹದೊಂದಿಗೆ ನಿಂಲ್ಲುತ್ತೇವೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಎಲ್ಲಾ ಕೃಷಿ ಕಾರ್ಮಿಕ-ವಿರೋಧಿ, ರೈತ-ವಿರೋಧಿ, ಕಾರ್ಮಿಕ-ವಿರೋಧಿ, ಜನ-ವಿರೋಧಿ ಕಾನೂನುಗಳು ಮತ್ತು ನೀತಿಗಳನ್ನು ರದ್ದುಗೊಳಿಸುವವರೆಗೆ ಪ್ರತಿರೋಧಿಸಲು ಐಕ್ಯತೆಯಿಂದ ದುಡಿಯುವ ದೃಢನಿರ್ಧಾರವನ್ನು ಮಾಡುತ್ತೇವೆ.

ನಾವು ಜನರ ಐಕ್ಯತೆಗಾಗಿ ಕೆಲಸ ಮಾಡಲು ಮತ್ತು ಜನರ ಮೂಲಭೂತ ಹಕ್ಕುಗಳು ಮತ್ತು ಘನತೆಯ ಜೀವನವನ್ನು ಖಾತ್ರಿಪಡಿಸುವ ಜನಪರ ಕಾನೂನುಗಳು ಮತ್ತು ನೀತಿಗಳನ್ನು ರೂಪಿಸುವುದನ್ನು ಖಚಿತಪಡಿಸುವ ಪ್ರತಿಜ್ಞೆ ಮಾಡುತ್ತೇವೆ.

ವಿಜಯ ಗಳಿಸುವ ವರೆಗೂ ಎಡೆಬಿಡದ ಅಖಿಲ ಭಾರತ ಐಕ್ಯ ಹೋರಾಟಗಳನ್ನು ಕಟ್ಟುವ ಪ್ರತಿಜ್ಞೆ ಮಾಡುತ್ತೇವೆ.

ಇದನ್ನೂ ನೋಡಿ: ಒಳ್ಳೆಯ ದಿನಗಳು ಏನಾದವು? ಆರ್ಥಿಕ ಸುಧಾರಣೆ ಭಾರತದ್ದೋ.., ಬಿಜೆಪಿಯದ್ದೋ!?? Janashakthi Media

Donate Janashakthi Media

Leave a Reply

Your email address will not be published. Required fields are marked *