ಸಿಬ್ಬಂದಿ ಕೊರತೆ ಜೊತೆಗೆ ಕಾಮಗಾರಿಗಳಿಂದ 80ಕ್ಕೂ ಅಧಿಕ ಹಾಪ್‌ಕಾಮ್ಸ್ ಮಳಿಗೆಗಳಿಗೆ ಬೀಗ!

ಬೆಂಗಳೂರು: ಸಿಬ್ಬಂದಿ ಕೊರತೆ ಜೊತೆಗೆ ನಗರದಲ್ಲಿ ರಸ್ತೆ ವಿಸ್ತರಣೆ, ಮೇಲ್ವೇತುವೆ, ಮೆಟ್ರೋ ಮತ್ತಿತರ ಕಾಮಗಾರಿಗಳ ಕಾರಣದಿಂದಾಗಿ ನಗರದಲ್ಲಿ ತಾಜಾ ಹಣ್ಣು ಮತ್ತು ತರಕಾರಿಗಳಿಗೆ ಅತ್ಯಂತ ವಿಶ್ವಾಸಾರ್ಹ ಎನಿಸಿರುವ ತೋಟಗಾರಿಕಾ ಉತ್ಪಾದಕರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸಂಘ (ಹಾಪ್‌ಕಾಮ್ಸ್) ಮಳಿಗೆಗಳು ಇದೀಗ ನಿಧಾನವಾಗಿ ಕಣ್ಮರೆಯಾಗುತ್ತಿವೆ.  80ಕ್ಕೂ ಅಧಿಕ ಹಾಪ್‌ಕಾಮ್ಸ್ ಮಳಿಗೆಗಳಿಗೆ ಬೀಗ ಬಿದ್ದಿದೆ ಎಂದು ತಿಳಿದುಬಂದಿದೆ.

ರೈತರು ಬೆಳೆಯುವ ಹಣ್ಣು-ತರಕಾರಿ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದೊಂದಿಗೆ ಮಧ್ಯವರ್ತಿಗಳಿಗೆ ಪರ್ಯಾಯವಾಗಿ ಹಾಪ್‌ಕಾಮ್ಸ್‌ಗಳನ್ನು ತೆರೆಯಲಾಗಿತ್ತು. ರೈತರು ಮತ್ತು ಗ್ರಾಹಕರ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸಬೇಕಾದ ಮಳಿಗೆಗಳು ಇದೀಗ ಮುಚ್ಚುವ ಹಂತ ತಲುಪುತ್ತಿವೆ.

ಇದನ್ನೂ ಓದಿ: ಹೊಸದಿಲ್ಲಿ | ಸುಪ್ರೀಂ ಕೋರ್ಟ್ ಜಾಮೀನು ನಿರಾಕರಣೆ Xನಲ್ಲಿ ಕವಿತೆಯನ್ನು ಹಂಚಿಕೊಂಡ ಸಂಸದೆ ಮಹುವಾ ಮೊಯಿತ್ರಾ

5 ಜಿಲ್ಲೆಗಳಿಗೆ ಒಳಪಡುವ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 250ಕ್ಕೂ ಅಧಿಕ ಹಾಪ್‌ಕಾಮ್ಸ್ ಮಳಿಗೆಗಳಿದ್ದು ಇದರಲ್ಲಿ ಸದ್ಯ 134 ಮಳಿಗೆಗಳಷ್ಟೇ ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ 80ಕ್ಕೂ ಹೆಚ್ಚು ಹಾಪ್‌ಕಾಮ್ಸ್‌ಗಳು ಸಿಬ್ಬಂದಿ ಕೊರತೆ, ಆರ್ಥಿಕ ನಷ್ಟ, ಗ್ರಾಹಕರು ಬಾರದಿರುವುದು, ಮೂಲಸೌಕರ್ಯ ಕೊರತೆಯ ಜೊತೆಗೆ ಹಲವು ಅಭಿವೃದ್ಧಿ ನಿರ್ಮಾಣ ಕಾಮಗಾರಿಗಳ ಕಾರಣದಿಂದಾಗಿ ಮಳಿಗೆಗಳು ಸ್ಥಗಿತಗೊಂಡಿವೆ. ಹಾಪ್‌ಕಾಮ್ಸ್ ಒಂದು ಕಾಲದಲ್ಲಿ ಸುಮಾರು 1500 ಉದ್ಯೋಗಿಗಳನ್ನು ಹೊಂದಿತ್ತು. ಆದರೆ, ಈಗ ಅದರ ಸಂಖ್ಯೆ 300ಕ್ಕೆ ಇಳಿಕೆಯಾಗಿ ಮಾರಾಟಗಾರಿಲ್ಲದೇ ಸಿಬ್ಬಂದಿ ಕೊರತೆ ಎದುರಾಗಿದೆ.

ಆ ಕಾರಣದಿಂದಾಗಿಯೇ ಕೆಲವು ಹಾಪ್‌ಕಾಮ್ಸ್‌ಗಳು ಮುಚ್ಚಿವೆ. ಇನ್ನುಳಿದಂತೆ ವಿಜಯನಗರ, ಬೊಮ್ಮನಹಳ್ಳಿ, ರೆಸ್ ಕೋರ್ಸ್ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿನ ರಸ್ತೆ ವಿಸ್ತರಣೆ, ಒತ್ತುವರಿ, ಶಿವಾಜಿನಗರ ಮೆಟ್ರೋ ನಿಲ್ದಾಣ, ಮೇಲ್ಸೇತುವೆ ಕಾಮಗಾರಿ ಕಾರಣದಿಂದಾಗಿಯೂ ಮಳಿಗೆಗಳು ಸ್ಥಗಿತವಾಗಿವೆ. ಕೆಲವನ್ನು ಸ್ಥಳಾಂತರಗೊಳಿಸಿದ್ದು, ಮರುನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಹಾಪ್‌ಕಾಮ್ಸ್ ಅಧಿಕಾರಿಯೊಬ್ಬರು ತಿಳಿಸಿದರು. ಬೆಂಗಳೂರು ಕೇಂದ್ರ ಹಾಪ್‌ಕಾಮ್ಸ್ ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿದಂತೆ 5 ಜಿಲ್ಲೆಗಳ ವ್ಯಾಪ್ತಿಗೆ ಒಳಪಡಲಿದೆ.

ಇದನ್ನೂ ನೋಡಿ: ನಮ್ಮ ಆಹಾರ: ತಪ್ಪು ಒಪ್ಪುಗಳು| ಡಾ. ಎನ್.ಬಿ. ಶ್ರೀಧರ Janashakthi Media

Donate Janashakthi Media

Leave a Reply

Your email address will not be published. Required fields are marked *