ಧಾರವಾಡ: ನಾಟಕಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ‘ಪ್ರಸ್ತುತ ನಾಟಕಗಳು ಪ್ರೇಕ್ಷಕರ ಕೊರತೆ ಎದುರುಸುತ್ತಿವೆ. ಎಂದು ರಂಗ ಸಮಾಜದ ಸದಸ್ಯ ಎಸ್.ಜಹಾಂಗೀರ ಹೇಳಿದರು.
ರಂಗಾಯಣ ವತಿಯಿಂದ ಪಂಡಿತ ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ರಂಗಾಯಣ ನಾಟಕೋತ್ಸವ ಹಾಗೂ ಗಾಂಧೀ ಭಾರತ ಐತಿಹಾಸಿಕ ಭಾವಚಿತ್ರಗಳ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಇದನ್ನೂ ಓದಿ : ಮರ್ಯಾದೆಗೇಡು ಹತ್ಯೆ ತಡೆಗೆ ಮಾನ್ಯಾ ಹೆಸರಿನಲ್ಲಿ ಕಾಯ್ದೆ ಜಾರಿಗೆ ಚಿಂತನೆ: ಎಚ್.ಸಿ.ಮಹದೇವಪ್ಪ
ಸಾರ್ವಜನಿಕರು ನಾಟಕ ವೀಕ್ಷಿಸುವ ಮೂಲಕ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು’ ‘ಹವ್ಯಾಸಿ ಕಲಾವಿದರು ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ನಿಂಗಪ್ಪ ಮುದೇನೂರ ಮಾತನಾಡಿ, ಜೀವನದ ಕಷ್ಟ, ಸುಖ, ದುಃಖಗಳನ್ನು ತೆರೆಯ ಮೇಲೆ ತರುವ ಕಲಾವಿದರ ಬದುಕು ಕೂಡ ಇಂದು ಸಂಕಷ್ಟದಲ್ಲಿದೆ. ರಂಗಭೂಮಿಯು ಕತ್ತಲಿನಿಂದ ಆರಂಭವಾಗುವ ಪಯಣವಾಗಿದೆ. ರಂಗಭೂಮಿ ಉಳಿಸಲು ಎಲ್ಲರ ಪ್ರೋತ್ಸಾಹದ ಅಗತ್ಯವಿದೆ’ ಎಂದರು.
ಆಲೂರು ವೆಂಕಟರಾವ್ ಟ್ರಸ್ಟ್ ಅಧ್ಯಕ್ಷ ರಂಜಾನ್ ದರ್ಗಾ ಮಾತನಾಡಿ, ‘ನಾಟಕಗಳು ಕಾಂತ್ರಿಕಾರಿ ಮಾಧ್ಯಮಗಳಾಗಿವೆ. ವೇದಗಳು, ಮಹಾಕಾವ್ಯಗಳು ಜನಸಾಮಾನ್ಯರಿಗೆ ತಲುಪಿಸಲು ನಾಟಕಗಳು ಪ್ರಮುಖ ಪಾತ್ರವಹಿಸಿವೆ’ ಎಂದು ಹೇಳಿದರು.
ಕಾರ್ಕಳ ಯಕ್ಷ ರಂಗಾಯಣದ ರೆಪರ್ಟರಿ ಕಲಾವಿದರು ‘ಸೋಮಿಯ ಸೌಭಾಗ್ಯ’ ನಾಟಕ ಪ್ರದರ್ಶಿಸಿದರು. ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಉಪಸ್ಥಿತರಿದ್ದರು.
ಇದನ್ನೂ ನೋಡಿ : ಮರ್ಯಾದೆಗೇಡು ಹತ್ಯೆ ತಡೆಗೆ ಪ್ರತ್ಯೇಕ ಕಾಯ್ದೆಗೆ ಸಿದ್ಧತೆ!?| ವಿಶ್ಲೇಷಣೆ : ಗುರುರಾಜ ದೇಸಾಯಿ Janashakthi Media
