‘ಲಕ್ಕಿ ಭಾಸ್ಕರ್’ ಸಿನಿಮಾ ಮಾದರಿಯಲ್ಲಿ ಗ್ರಾಹಕರಿಂದ ಕೋಟಿ ಕೋಟಿ ವಂಚಿಸಿದ ಬ್ಯಾಂಕ್ ಮ್ಯಾನೇಜರ್

ಬೆಂಗಳೂರು: ‘ಲಕ್ಕಿ ಭಾಸ್ಕರ್’ ಸಿನಿಮಾ ಮಾದರಿಯಲ್ಲಿಯೇ ಬ್ಯಾಂಕ್ ಮ್ಯಾನೇಜರ್ ಓರ್ವ ಗ್ರಾಹಕರಿಂದ ಕೋಟಿ ಕೋಟಿ ವಂಚಿಸಿರುವ ಘಟನೆ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ರಾಷ್ಟ್ರೀಕೃತ ಬ್ಯಾಂಕ್ ವೊಂದರ ಮ್ಯಾನೇಜರ್ ನಿಂದಲೇ ಈ ಕೃತ್ಯ ನಡೆದಿದ್ದು, ವಂಚನೆಗೊಳಗಾದ ಗ್ರಾಹಕರು ಮ್ಯನೇಜರ್ ನನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮಲ್ಲೇಶ್ವರಂನ 15ನೇ ಕ್ರಾಸ್ ನಲ್ಲಿರುವ ಕೆನರಾ ಬ್ಯಾಅಂಕ್ ನ ಹಿರಿಯ ಮ್ಯಾನೇಜರ್ ಎನ್.ರಘು ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ನೇಪಾಳ | ಬೆಂಗಳೂರಿನಲ್ಲಿ ಓದಿದ ಹುಡುಗ ನೇಪಾಳ ಪ್ರಧಾನಿ ಅಭ್ಯರ್ಥಿ!

ಬ್ಯಾಂಕ್ ನ 41 ಖಾತೆಗಳ ಹೆಸರಲ್ಲಿ ನಕಲಿ ಗೋಲ್ಡ್ ಲೋನ್ ಖಾತೆ ತೆರೆದು ಬರೋಬ್ಬರಿ 3.11 ಕೋಟಿಗೂ ಹೆಚ್ಚು ವಂಚಿಸಿದ್ದಾರೆ. ವೃದ್ಧರು, ಪೆನ್ಷನ್ ದಾರರು, ಅರ್ಚಕರು, ವ್ಯಾಪಾರಿಗಳೇ ಈ ಮ್ಯಾನೇಜರ್ ನ ಟಾರ್ಗೆಟ್. ಇವರ ಖಾತೆಗಳ ಒಟಿಪಿ ಹಾಗೂ ಚೆಕ್ ಪಡೆದು ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ.

ಬ್ಯಾಂಕ್ ನಲ್ಲಿ ಅಕೌಂಟ್ ಇರುವ ಗ್ರಾಹಕರಿಗೆ ಒಟಿಪಿ, ಚೆಕ್ ಕೊಟ್ಟರೆ ಗ್ರಾಹಕರಿಗೆ ಗೊತ್ತಾಗದಂತೆ ಗೋಲ್ಡ್ ಲೋನ್ ಅಕೌಂಟ್ ಓಪನ್ ಆಗುತ್ತದೆ. ಹೀಗೆ ನಕಲಿ ಗೋಲ್ಡ್ ಲೋನ್ ಮೂಲಕ ಗ್ರಾಹಕರ ಖಾತೆಯಿಂದಲೇ ಹಣ ವರ್ಗಾವಣೆ ಮಾಡಿಕೊಂಡು ಮ್ಯಾನೇಜರ್ 41 ಗ್ರಾಹಕರಿಗೆ ಮಕ್ಮಲ್ ಟೋಪಿ ಹಾಕಿದ್ದಾನೆ. ಹಣ ಕಳೆದುಕೊಂಡ ಗ್ರಾಹಕರು ಬ್ಯಾಂಕ್ ಮುಂದೆ ಜಮಾವಣೆಗೊಂಡಿದ್ದಾರೆ. ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.

ಇದನ್ನೂ ನೋಡಿ: ಕಮ್ಯುನಿಸ್ಟ್‌ ಪಕ್ಷಗಳು ದುಡಿಯುವ ಜನ, ಭೂ ರಹಿತರ ಪರ ಧ್ವನಿಯಾದವರು Janashakthi Media

Donate Janashakthi Media

Leave a Reply

Your email address will not be published. Required fields are marked *