ನೇಪಾಳ : ಕಠ್ಮಂಡು ಮಹಾನಗರದ ಮೇಯರ್, ಯುವ ನಾಯಕ ಬಾಲೇಂದ್ರ ಶಾ ನೇಪಾಳದ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಅವರನ್ನು ಆಯ್ಕೆ ಮಾಡಲು ನೇಪಾಳದ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಒಪ್ಪಂದ ಮಾಡಿಕೊಂಡಿದೆ. ಇವರು ಬೆಂಗಳೂರಿನಲ್ಲಿ ಎಂ.ಟೆಕ್ ಶಿಕ್ಷಣ ಪಡೆದಿದ್ದಾರೆ.
ಮುಂದಿನ ವರ್ಷದ ಮಾರ್ಚ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಗೆ ಶಾ, ಪಕ್ಷದ ಸಂಸದೀಯ ನಾಯಕ ಮತ್ತು ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ.
ಇದನ್ನೂ ಓದಿ : ಕೋಗಿಲು ಲೇಔಟ್ ಸ್ಲಂ ಮನೆಗಳ ಧ್ವಂಸ – ಸಿಪಿಐ(ಎಂ) ಖಂಡನೆ; ಬಡವರ ಮನೆಗಳ ಮರು ನಿರ್ಮಾಣಕ್ಕೆ ಆಗ್ರಹ
ಚುನಾವಣೆಯ ನಂತರ ಶಾ ಅವರು ಪಕ್ಷದ ಸಂಸದೀಯ ನಾಯಕ ಮತ್ತು ಅದರ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ. ಆರ್‌ಎಸ್‌ಪಿ 7 ಅಂಶದ ಒಪ್ಪಂದ ಮಾಡಿಕೊಂಡಿದ್ದು, ಆರ್‌ಎಸ್‌ಪಿ ಅಧ್ಯಕ್ಷೆ ರಬಿ ಲಮಿಚಾನೆ ಪಕ್ಷದ ಕೇಂದ್ರ ಅಧ್ಯಕ್ಷರಾಗಿ ಮುಂದುವರಿಯಲಿದ್ದು. ಈ ಕುರಿತು ಲಾಮಿಚಾನೆ ಮತ್ತು ಶಾ ಔಪಚಾರಿಕ ಮತ್ತು ಅನೌಪಚಾರಿಕ ಸಭೆಗಳನ್ನು ನಡೆಸಿದ್ದು, ವಾರಗಳ ಕಾಲ ನಡೆದ ಮಾತುಕತೆಯಲ್ಲಿ ಸಹಕಾರ ಮತ್ತು ಏಕತೆಯ ಕುರಿತು ಚರ್ಚಿಸಲಾಗಿದೆ.
ಭಾನುವಾರ ಈ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ಪಕ್ಷದ ರಾಜಕೀಯ ದೃಷ್ಟಿಕೋನ, ನಾಯಕತ್ವ ವ್ಯವಸ್ಥೆ ಮತ್ತು ಭವಿಷ್ಯದ ಕಾರ್ಯತಂತ್ರವನ್ನು ವಿವರಿಸಿ ಪ್ರಕಟಣೆ ಹೊರಡಿಸಲಾಗಿದೆ.
ರಾಷ್ಟ್ರೀಯ ಸ್ವತಂತ್ರ ಪಕ್ಷ ಸ್ಥಾಪನೆಯಾದ ಒಂದು ವರ್ಷದೊಳಗೆ ವಿಸರ್ಜಿತ ಪ್ರತಿನಿಧಿಗಳ ಸಭೆಯಲ್ಲಿ 21 ಸ್ಥಾನಗಳನ್ನು ಗೆಲ್ಲುವ ಮೂಲಕ ಆರ್‌ಎಸ್‌ಪಿ ನಾಲ್ಕನೇ ಅತ್ಯಂತ ಮಹತ್ವದ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ.
ಝೆನ್ ಜಿ ದಂಗೆಯ ಬಳಿಕ ಪ್ರಧಾನಿ ಸ್ಥಾನಕ್ಕೆ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ. ಹಂಗಾಮಿ ಪ್ರಧಾನಿಯಾಗಿ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿರುವ ಸುಶೀಲಾ ಕರ್ಕಿ ಅಧಿಕಾರವಹಿಸಿಕೊಂಡಿದ್ದು, 2026ರ ಮಾರ್ಚ್ಗೆ ರಾಷ್ಟ್ರೀಯ ಚುನಾವಣೆ ಎದುರಿಸಲಿದೆ.
ಇದನ್ನೂ ನೋಡಿ : ಬಿಕ್ಲು ಶಿವ ಕೊಲೆ ಪ್ರಕರಣ | ಬಿಜೆಪಿ ಶಾಸಕ ಬೈರತಿ ಬಸವರಾಜ್ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ Janashakthi Media
