ನವದೆಹಲಿ| CWC ಸಭೆ ಅಂತ್ಯ: ಕರ್ನಾಟಕ ಸಿಎಂ ಬದಲಾಣೆ ಬಗ್ಗೆ ಚರ್ಚೆ?

ನವದೆಹಲಿ: ಸಿಎಂ ಸಿದ್ದರಾಮಯ್ಯ ರನ್ನು ಮಾತ್ರ CWC ಸಭೆಗೆ ಹೈಕಮಾಂಡ್ ಆಹ್ವಾನ ಮಾಡಿದ್ದೂ, ಇದೀಗ ಡಿಸೆಂಬರ್‌ 27ರಂದು ನಡೆದ CWC ಸಭೆ ಅಂತ್ಯವಾಗಿದೆ. ಇಂದ್ರಾಭವನದಲ್ಲಿ ಈ ಸಭೆ ನಡೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಸಿದ್ದರಾಮಯ್ಯ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಸೇರಿದಂತೆ ಹಲವರು ಭಾಗಿಯಾಗಿದ್ದರು.

ಈ ಸಭೆಯಲ್ಲಿ ಮುಂಬರುವ ಚುನಾವಣೆಗಳ ಬಗ್ಗೆ ಸಾಕಷ್ಟು ಚರ್ಚೆಯನ್ನ ನಡೆಸಿದ್ದಾರೆ.

ಇದನ್ನೂ ಓದಿ: ಮಧುರೈ | ಸಾಮಾಜಿಕ ಮಾಧ್ಯಮ: 16 ವರ್ಷದೊಳಗಿನವರಿಗೆ ನಿಷೇಧಿಸಿ : ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಆದೇಶ

ಇನ್ನು ರಾಜ್ಯದಲ್ಲಿ ಕುರ್ಚಿ ಕದನದ ವಿಚಾರ ಯಾವ ಹಂತ ತಲುಪಿದೆ ಅನ್ನೋದು ಎಲ್ಲರಿಗೂ ಗೊತ್ತು. ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಸಭೆಗೆ ಆಹ್ವಾನಿಸಿದ್ದರ ಹಿನ್ನೆಲೆ ಹೈಕಮಾಂಡ್ ಬಗ್ಗೆ ಸಿದ್ದರಾಮಯ್ಯ ಅವರಿಗೆ ವಿಶ್ವಾಸ ಜಾಸ್ತಿಯಾಗಿದೆ. ಹೀಗಾಗಿ ಸಮಯ ಸಿಕ್ಕಿದರೆ ರಾಜ್ಯದಲ್ಲಿ ನಡೆಯುತ್ತಿರುವ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಬಹುದು. ಅಷ್ಟೇ ಅಲ್ಲ ಸಚಿವ ಸಂಪುಟದ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ.

ಕುರ್ಚಿ ಕದನದ ವಿಚಾರ ಬಂದಾಗೆಲ್ಲಾ ಪದೇ ಪದೇ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಹೆಸರನ್ನೇ ತೆಗೆದುಕೊಳ್ಳುತ್ತಾರೆ. ಹೈಕಮಾಂಡ್ ಹೇಳಿದಂತೆ ಕೇಳುವುದಕ್ಕೆ ಬದ್ಧ ಎನ್ನುತ್ತಾರೆ. ಇದರ ಬೆನ್ನಲ್ಲೇ ದೆಹಲಿಯಲ್ಲೂ ದಲಿತ ಸಿಎಂ ಕೂಗು ಕೇಳಿಸಿದೆ. ಕೆಲವು ಮುಖಂಡರಿಂದ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಅಂತಿದ್ದಾರೆ.

ಒಂದು ವೇಳೆ ಸಿಎಂ ಬದಲಾಯಿಸಲೇಬೇಕು ಅನ್ನುವುದಾದರೆ ಪರಮೇಶ್ವರ್ ಅವರಿಗೆ ನೀಡಿ ಎಂದು ತುಮಕೂರು – ಬೆಂಗಳೂರಿನಿಂದ ಹೋದಂತ ಹತ್ತಕ್ಕೂ ಹೆಚ್ಚು ಮುಖಂಡರಿಂದ ಈ ಒತ್ತಡ ಕೇಳಿ ಬಂದಿದೆ. ಈಗ ಸಿಎಂ ಬದಲಾವಣೆಯ ಜೊತೆಗೆ ದಲಿತ ಸಿಎಂ ಕೂಗು ಜೋರಾಗುವಂತೆ ಕಾಣಿಸುತ್ತಿದೆ.

ಇದನ್ನೂ ನೋಡಿ: ಕಮ್ಯುನಿಸ್ಟ್‌ ಪಕ್ಷಗಳು ದುಡಿಯುವ ಜನ, ಭೂ ರಹಿತರ ಪರ ಧ್ವನಿಯಾದವರು Janashakthi Media

Donate Janashakthi Media

Leave a Reply

Your email address will not be published. Required fields are marked *