ಬೆಂಗಳೂರು: ಇದೇ 27ರಂದು ಎಚ್‌ಎಸ್‌ಆರ್ ಬಡಾವಣೆಯಲ್ಲಿರುವ ಸಮರ್ಥನಂ ಸಭಾಂಗಣದಲ್ಲಿ ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತಿನಿಂದ ಅಖಿಲ ಕರ್ನಾಟಕ ಅಂಧರ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.
ಇದನ್ನೂ ಓದಿ : ಬೆಂಗಳೂರು | ಡಿಸೆಂಬರ್ 23ರಿಂದ 28ರವರೆಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ವರ್ಣ ಚಿತ್ರಗಳ ಸ್ವರ ಮೇಳ
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಮುದಿಗೆರೆ ರಮೇಶ್ ಕುಮಾರ್, ಅಂಧ ಬರಹಗಾರರ ‘ಆಧುನಿಕ ಕನ್ನಡ ಸಾಹಿತ್ಯಕ್ಕೆ ಕೊಡುಗೆಗಳು, ಅಂಧತ್ವ ಮತ್ತು ಸಾಹಿತ್ಯ ಸಂಕಥನಗಳು ಎಂಬ ಗೋಷ್ಠಿಗಳು ನಡೆಯಲಿವೆ. ವಿಮರ್ಶಕಿ ಎಚ್.ಎಲ್. ಪುಷ್ಪ ಅಧ್ಯಕ್ಷತೆಯಲ್ಲಿ ಅಂಧರ ಕವಿಗೋಷ್ಠಿ ನಡೆಯಲಿದೆ’ ಎಂದರು.
ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಬಂಜಗೆರೆ ಜಯಪ್ರಕಾಶ್, ಸಚಿವ ಶಿವರಾಜ ತಂಗಡಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕವಿ ಎಲ್. ಹನುಮಂತಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಇದನ್ನೂನೋಡಿ : ಪರ್ಯಾಯ ರಾಜಕಾರಣದ ಕಹಳೆ ಮೊಳಗಿಸಿದ ಸಾವಿರಾರು ಜನ Janashakthi Media
