ಪಂಜಾಬ್‌ ಜಿಲ್ಲಾ ಪರಿಷದ್, ಪಂಚಾಯತ್ ಚುನಾವಣೆ: ಎಎಪಿಗೆ ಗೆಲುವು

ಚಂಡಿಗಡ: ‌ಡಿಸೆಂಬರ್‌ 18ರಂದು ಪಂಜಾಬಿನಲ್ಲಿ ಜಿಲ್ಲಾ ಪರಿಷದ್‌ಗಳು ಮತ್ತು ಪಂಚಾಯತ್ ಸಮಿತಿಗಳಿಗೆ ನಡೆದಿದ್ದ ಚುನಾವಣೆಗಳ ಫಲಿತಾಂಶಗಳು ಪ್ರಕಟಗೊಂಡಿದ್ದು, ಆಮ್‌ ಆದ್ಮಿ ಪಕ್ಷ (ಎಎಪಿ)ಗೆ ಭರ್ಜರಿ ಗೆಲುವನ್ನು ಸಾಧಿಸಿದೆ. ಪಂಜಾಬ್‌

22 ಜಿಲ್ಲಾ ಪರಿಷದ್‌ಗಳ 346 ವಲಯಗಳು ಮತ್ತು 153 ಪಂಚಾಯತ್ ಸಮಿತಿಗಳ 2,838 ವಲಯಗಳಿಗೆ ಸದಸ್ಯರ ಆಯ್ಕೆಗಾಗಿ ಡಿ.8ರಂದು ಚುನಾವಣೆಗಳು ನಡೆದಿದ್ದವು.

ಇದನ್ನೂ ಓದಿ: ಮಂಗಳೂರು |ಕಿದ್ವಾಯಿ ಕ್ಯಾನ್ಸರ್, ಜಯದೇವ ಆಸ್ಪತ್ರೆಗಳನ್ನು ಸ್ಥಾಪಿಸಲು ಮುಂದಾಗಿರುವ ರಾಜ್ಯ ಸರಕಾರದ ನಿರ್ಧಾರಕ್ಕೆ ಸ್ವಾಗತ

ಜಿಲ್ಲಾ ಪರಿಷದ್ ಚುನಾವಣೆಯಲ್ಲಿ ಆಪ್ 218, ಕಾಂಗ್ರೆಸ್ 62, ಶಿರೋಮಣಿ ಅಕಾಲಿ ದಳ (ಎಸ್‌ಎಡಿ) 46, ಬಿಜೆಪಿ 7, ಬಿಎಸ್‌ಪಿ 3 ಮತ್ತು ಐಎನ್‌ಡಿ 10 ವಲಯಗಳಲ್ಲಿ ಗೆಲುವು ಸಾಧಿಸಿವೆ.

ಪಂಚಾಯತ್ ಸಮಿತಿ ಚುನಾವಣೆಯಲ್ಲಿ ಆಪ್ 1531, ಕಾಂಗ್ರೆಸ್ 612, ಎಸ್‌ಎಡಿ 445, ಬಿಜೆಪಿ 73, ಬಿಎಸ್‌ಪಿ 28 ಮತ್ತು ಐಎನ್‌ಡಿ 144 ವಲಯಗಳಲ್ಲಿ ಗೆದ್ದಿವೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು, ಚುನಾವಣೆಗಳಲ್ಲಿ ಆಪ್‌ನ ಭರ್ಜರಿ ಗೆಲುವು ಗ್ರಾಮೀಣ ಪ್ರದೇಶಗಳ ಜನರು ಭಗವಂತ್ ಮಾನ್ ಸರಕಾರದ ಕೆಲಸಗಳನ್ನು ಮೆಚ್ಚಿಕೊಂಡಿದ್ದಾರೆ ಎನ್ನುವುದನ್ನು ತೋರಿಸಿದೆ ಎಂದು ಹೇಳಿದರು.

ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ : ಕೊಂದವರು ಯಾರು? ಅಭಿಯಾನವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ – ಜ್ಯೋತಿ ಎ Janashakthi

Donate Janashakthi Media

Leave a Reply

Your email address will not be published. Required fields are marked *