ಆಂಧ್ರಪ್ರದೇಶ : ಸರ್ಕಾರಿ ಕೆಲಸಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಿ ಓದುವವರಿದ್ದಾರೆ, ಸರ್ಕಾರಿ ಕೆಲಸ ಪಡೆದು, ಕುಟುಂಬವನ್ನು ನೆಮ್ಮದಿಯಾಗಿ ನೋಡಿಕೊಳ್ಳಬೇಕು ಎಂಬುದು ಅನೇಕರ ಕನಸು. ಇದಕ್ಕಾಗಿ ಹಲವು ವರ್ಷಗಳ ಕಾಲ ಮುಡಿಪಾಗಿಟ್ಟು ನಾಲ್ಕು ಐದು ಪ್ರಯತ್ನಗಳ ಬಳಿಕ ಯಶಸ್ಸು ಕಂಡಿದ್ದಾರೆ. ಇನ್ನು ಕೆಲವರು ಅದನ್ನು ಮೀರಿ 10 ಅಥವಾ 15 ಬಾರಿ ಪ್ರಯತ್ನ ಮಾಡಿ ಸುಮ್ಮನಾಗುತ್ತಾರೆ. ಆದರೆ, ಇಲ್ಲೊಬ್ಬರು ಛಲ ಬಿಡದಂತೆ 50 ಪ್ರಯತ್ನಗಳನ್ನು ಮಾಡಿ ಅಂತಿಮವಾಗಿ ಯಶಸ್ಸು ಕಂಡಿದ್ದಾರೆ.
ಕಳೆದ ಏಳು ವರ್ಷಗಳಿಂದ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸಿದ್ದರೆ, ಪ್ರತಿ ಬಾರಿ ವಿಫಲ ಯತ್ನ ಮಾಡಿ ನಿರಾಸೆ ಅನುಭವಿಸಿದ್ದರು. ಆದರೆ ಎದೆಗುಂದದೆ ಆತ್ಮ ವಿಶ್ವಾಸದಿಂದ ಒಂದು ದಿನ ಗೆದ್ದೇ ಗೆಲ್ಲುವೆ ಎಂಬ ಛಲದಿಂದ ಪ್ರಯತ್ನ ಮಾಡಿದ್ದಾರೆ. ಕಡೆಗೆ ತಮ್ಮ 50ನೇ ಪ್ರಯತ್ನದಲ್ಲಿ ಇದೀಗ ಅವರು ಕಾನ್ಸ್ಟೇಬಲ್ ಆಗಿದ್ದು, ಕೊರುಕೊಂಡ ಮಂಡಲದ ದೋಸಕಾಯಲಪಲ್ಲಿಯ ಆಂಡಿಬೋಯಿನಾ ಅಶೋಕ್ ಈ ಸಾಹಸ ಮಾಡಿರುವ ಯುವಕ. ಈ ತಮ್ಮ ಅವಿರತ ಪ್ರಯತ್ನದ ಕುರಿತು ಈಟಿವಿ ಭಾರತ್ ಜೊತೆಗೆ ತಮ್ಮ ಅನುಭವ ಹಾಗೂ ಖುಷಿ ಹಂಚಿಕೊಂಡಿದ್ದಾರೆ.
ಇದನ್ನೂ ನೋಡಿ : ಶಾಸಕ – ತಹಸೀಲ್ದಾರ್ ತುಘಲಕ್ ದರ್ಬಾರ್ ನಡೆಸಿ ಶಿಷ್ಟಾಚಾರ ಉಲ್ಲಂಘನೆ: ರೈತ ಸಂಘ ಪ್ರತಿಭಟನೆ
ಸೋಲನ್ನು ಒಪ್ಪದ ಯುವಕ: ಪದವಿ ಬಳಿಕ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿದರು. ಅದರಲ್ಲಿ ಸಿಗುವ ವೇತನದಲ್ಲಿ ಅವರ ಅಗತ್ಯತೆ ಪೂರೈಸಿಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲದೇ ಈ ಉದ್ಯೋಗ ಅವರ ಭವಿಷ್ಯದ ಕುರಿತು ಭದ್ರತೆಯನ್ನು ನೀಡಿಲ್ಲ. ಇದರಿಂದ ಸರ್ಕಾರಿ ಉದ್ಯೋಗ ಪಡೆಯುವ ನಿರ್ಧಾರ ಮಾಡಿದರು. ಸರ್ಕಾರಿ ಉದ್ಯೋಗ ಲಭಿಸಿದರೆ, ಅದು ನಮ್ಮ ಕುಟುಂಬದ ಪರಿಸ್ಥಿತಿ ಬದಲಾಯಿಸುವ ಜೊತೆಗೆ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ನೀಡಲು ಸಾಧ್ಯ ಎನ್ನುತ್ತಾರೆ ಅಶೋಕ್. ಅಂತಿಮವಾಗಿ ಯಶಸ್ಸು ಪಡೆದುಕೊಂಡಿರುವ ಅಶೋಕ್ ಅವರ ತಂದೆ ವಿಷ್ಣು ವೃತ್ತಿಯಲ್ಲಿ ಟೈಲರ್, ತಾಯಿ ಆದಿ ಲಕ್ಷ್ಮಿ ಗೃಹಿಣಿಯಾಗಿದ್ದಾರೆ. ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಇವರಿಗೆ ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂಬ ಕನಸು.
ಆರ್ಆರ್ಬಿ, ಬ್ಯಾಂಕ್, ಎಸ್ಎಸ್ಸಿ ಅಥವಾ ಎಪಿಪಿಎಸ್ಸಿ ಎಲ್ಲಾ ಪರೀಕ್ಷೆಗಳನ್ನು ಬರೆದೆ. ಪರೀಕ್ಷಾ ಶುಲ್ಕ, ಪುಸ್ತಕ ಮತ್ತು ಆನ್ಲೈನ್ ಮಾಕ್ ಪರೀಕ್ಷೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದೆ. ನನ್ನ ಸ್ನೇಹಿತ ದೀಪಕ್ ಕೂಡ ನನ್ನ ಜೊತೆ ಪ್ರಯತ್ನಿಸಿದ್ದು, ಆತ 2022ರಲ್ಲಿ ಬ್ಯಾಂಕಿಂಗ್ ಉದ್ಯೋಗ ಪಡೆದ. ಈ ಹೊತ್ತಿಗಾಗಲೇ ನಾನು ಅನೇಕ ಪರೀಕ್ಷೆ ಬರೆದಿದ್ದೆ. ಕೇವಲ ಮೂರು ಅಂಕಗಳಿಂದ ರೈಲ್ವೆಯ ಸ್ಟೇಷನ್ ಮಾಸ್ಟರ್ ಉದ್ಯೋಗ ನನಗೆ ಸಿಗಲಿಲ್ಲ. ಇದು ಮಾತ್ರವಲ್ಲ, 2 ರಿಂದ 5 ಅಂಕಗಳಲ್ಲಿ ಆರು ಉದ್ಯೋಗಗಳು ನನ್ನ ಕೈ ತಪ್ಪಿದವು. 21ನೇ ವಯಸ್ಸಿನಲ್ಲಿ ನಾನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಆರಂಭಿಸಿದೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಎದುರಿಸಿದೆ
