ಬೆಂಗಳೂರು| ಲಾಕಪ್ ಡೆತ್ ಪ್ರಕರಣ: ಕ್ರಮಕ್ಕೆ ಆಗ್ರಹ

ಬೆಂಗಳೂರು: ಎಂ.ಕೆ‌. ದೊಡ್ಡಿ ಪೋಲಿಸ್ ಠಾಣೆಯಲ್ಲಿ ಕುಳುವ ಸಮಾಜದ ರಮೇಶ್ ಎಂಬ ವ್ಯಕ್ತಿಯ ನರಹತ್ಯೆ (ಲಾಕಪ್ ಡೆತ್) ಪ್ರಕರಣದ ಸಂಬಂಧ ಸಿ.ಐ.ಡಿ ತನಿಖೆ ನೆಡೆಯುತ್ತಿದ್ದರೂ ಸಹ ಇದುವರೆವಿಗೆ ಆರೋಪಿ ಪೋಲಿಸ್ ಇನ್ಸ್ ಸ್ಪೆಕ್ಟರ್ ಸಹನಾ ಪಾಟೀಲ್ ಹಾಗೂ ಸಿಬ್ಬಂದಿ ಪೇದೆಗಳಾದ ಸಂಬಂಧಿಸಿದಂತೆ ಸಂತೋಷ್, ವೆಂಕಟೇಶ್, ಪಾಪ್ಪಣ್ಣ, ಪ್ರದೀಪ್ ಹಾಗೂ ಇತರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸದೇ ಮೀನಾಮೇಷ ಏಣಿಸುತ್ತಿದ್ದಾರೆ ಎಂದು ಜಾತಿ ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿಯ ಸಂಸ್ಥಾಪಕ ರಾಜ್ಯ ಅಧ್ಯಕ್ಷೆ ಡಾ. ಭೀಮಾ ಪುತ್ರಿ ನಾಗಮ್ಮ ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಹಾಗೂ DYSP ಗಿರಿ ಇವರ ಜಾತಿ ಕೌರ್ಯ ಮನಸ್ಥಿತಿ ಹಾಗೂ ಜಾತಿವ್ಯಾಧಿ ಅಧಿಕಾರಿಗಳ ದುರ್ತನೆಗೆ ಮಿತಿ ಮೀರಿದೆ ಎಂದು ಆರೋಪಿಸಿದರು.

ಅಮಾಯಕ ಅಲೆಮಾರಿ ಕುಳುವ ಸಮಾಜದ ರಮೇಶ್ ಮತ್ತು ಇಡೀ ಕುಟುಂಬದ ಮೇಲೆ ಎಂ.ಕೆ ದೊಡ್ಡಿ ಪೋಲಿಸರ ದೌರ್ಜನ್ಯ ಕರ್ನಾಟಕ ಜೈ ಭೀಮ್ ಸಿನಿಮಾಕ್ಕೆ ಉತ್ತಮ ನಿದರ್ಶನ ಆಗಿದೆ ಎಂದು ಹೇಳಿದರು.

ಇದನ್ನೂ ಓದಿ: ಬೆದರಿಕೆ ಹಾಕಿ ಹಣ ವಸೂಲಿ: ನಕಲಿ ಪಿಎಸ್‍ಐ ಸೇರಿ ನಾಲ್ವರ ಬಂಧನ

ಇಂತಹ ಪೈಶಾಚಿಕವಾದ ನರಹತ್ಯೆಯಂತಹ ಹೀನ ಕೃತ್ಯ ಎಸಗಿದ ಪೋಲಿಸ್ ಇಲಾಖೆಯ ಅಧಿಕಾರಗಳ ಮೇಲೆ ಕ್ರಿಮಿನಲ್ ದೂರು ದಾಖಲಿಸುವಂತೆ ಸಲ್ಲಿಸಿ ಕಳೆದ 4 ತಿಂಗಳುಗಳು ಆದರೂ ಇಂದಿಗೂ ದೂರು ದಾಖಲಿಸದೇ ಸಬೂಬು ಹೇಳುತ್ತಿರುವುದನ್ನು SP ಹಾಗೂ DYSP ಯ ವಿರುದ್ದ ಜಾತಿವಾದಿ ನಡೆಯನ್ನು ತೀವ್ರವಾಗಿ ಖಂಡಿಸಿ, ಕಳೆದ 15 ದಿನಗಳಿಂದ ವಕೀಲರ ತಂಡ ನಿರಂತರವಾಗಿ ಕಾರ್ಯಪ್ರವೃತ್ತವಾಗಿದೆ ಎಂದರು.

ರಾಜ್ಯ ಪೋಲಿಸ್ ಇಲಾಖೆ ಮುಖ್ಯಸ್ಥರು, ಅಧ್ಯಕ್ಷರು, ರಾಜ್ಯ ಮಾನವ ಹಕ್ಕುಗಳ ಆಯೋಗ, ಅಧ್ಯಕ್ಷರು SC & ST ಆಯೋಗ, SP, CID, DGP ನಾಗರೀಕ ಜಾರಿ ಹಕ್ಕು ನಿರ್ದೇಶನಾಲಯ ಹಾಗೂ SP ಜಿಲ್ಲಾಡಳಿತ ಬೆಂಗಳೂರು ದಕ್ಷಿಣ ಜಿಲ್ಲೆ ಇವರಿಗೆ ಲಿಖಿತ ಮನವಿಗಳನ್ನು ಸಲ್ಲಿಸಲಾಯಿತು. ಸಂತ್ರಸ್ಥ ಕುಟುಂಬದ ಪರವಾಗಿ ಕುಳುವ ಸಮಾಜದ ವಕೀಲರ ತಂಡದ ಮಹದೇವು ಹಾಗೂ ಕಿರಣ್ ಕುಮಾರ್ ಕೊತ್ತಗೆರೆ ಇವರ ತಂಡದೊಂದಿಗೆ ವಕೀಲರ ತಂಡ ಹೋರಾಟ ನೆಡೆಸುತ್ತಿದೆ.

ಇದೇ ಕೆಲಸದ ನಿಮಿತ್ತ್ಯವಾಗಿ ರಾಮನಗರದಲ್ಲಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ, ರಾಮಚಂದ್ರಯ್ಯ , CID SP ವೆಂಕಟೇಶ್, CRE cell ಡಿ.ಜಿ.ಪಿ ರಾಮಚಂದ್ರಯ್ಯ ಹಾಗೂ ADGP ಸಂಜಯ್, ಗೃಹಮಂತ್ರಿ, ಕಾನೂನು ಮಂತ್ರಿಗಳಿಗೆ ಲಿಖಿತ ದೂರು ನೀಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಮುಟ್ಟಿನ ರಜೆ ಮಹಿಳೆಯರ ಹಕ್ಕು Janashakthi Media

Donate Janashakthi Media

Leave a Reply

Your email address will not be published. Required fields are marked *