ಧಾರವಾಡ: ಅಂತರ್ಜಾತಿ ವಿವಾಹವಾದ ಹಿನ್ನಲೆ ಪೊಲೀಸರೇ ಯುವಕನ ತಾಯಿಯ ಮೇಲೆ ಮನಸ್ಸೋಇಚ್ಛೆ ಹಲ್ಲೆ ಮಾಡಿರುವ ಘಟನೆ ಡಿಸೆಂಬರ್ 14ರಂದು ಜಿಲ್ಲೆಯ ಕುಂದಗೋಳ ತಾಲೂಕಿನ ಮುಳ್ಳಳಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಸಂತ್ರಸ್ತ ಮಹಿಳೆಯನ್ನು ಲಕ್ಷ್ಮವ್ವ ಬೆಂತೂರು ಎಂದು ಗುರುತಿಸಲಾಗಿದೆ.
ಜಿಲ್ಲೆಯ ಕುಂದಗೋಳ ತಾಲೂಕಿನ ಮುಳ್ಳಳಿ ಗ್ರಾಮದ ಲಕ್ಷ್ಮವ್ವರ ಮಗ ದೇವರಾಜ್ ಎಂಬಾತ ಕಳೆದ ಕೆಲ ತಿಂಗಳಿಂದ ಎದುರು ಮನೆಯ ಸುಧಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಆದರೆ ಇವರಿಬ್ಬರ ಪ್ರೀತಿಗೆ ಯುವತಿಯ ಮನೆಯ ಅಡ್ಡಿಯಾಗಿದ್ದರು.
ಈ ಹಿನ್ನೆಲೆ ದೇವರಾಜ್ ಹಾಗೂ ಸುಧಾ ಇಬ್ಬರೂ ಕೂಡ ಹೇಳದೇ ಕೇಳದೇ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದರು. ಮಗಳನ್ನು ಎಲ್ಲಾ ಕಡೆ ಹುಡುಕಿದರೂ ಸಿದಾಗ ಹಿನ್ನಲೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದನ್ನೂ ಓದಿ: ಡಿ.13ರ ರಾತ್ರಿ ಜಿಮಿನಾಯ್ಡ್ ಉಲ್ಕೆಗಳ ಸುರಿಮಳೆ – ಸಂಭ್ರಮಿಸಿದ ವಿದ್ಯಾರ್ಥಿಗಳು, ಸಾರ್ವಜನಿಕರು
ದೂರನ್ನು ಸ್ವೀಕರಿಸಿದ ಪೊಲೀಸರು ಲಕ್ಷ್ಮವ್ವರನ್ನು ಠಾಣೆಗೆ ಕರೆಸಿಕೊಂಡಿದ್ದರು. ಈ ವೇಳೆ ಮಗ ದೇವರಾಜ್ ಎಲ್ಲಿದ್ದಾನೆ ಎಂದು ಕೇಳಿದ್ದಾರೆ. ಇದಕ್ಕೆ ಗೊತ್ತಿಲ್ಲ ತಿಂಗಳ ಹಿಂದೆಯೇ ಮನೆ ಬಿಟ್ಟು ಹೋಗಿದ್ದಾನೆ ಎಂದು ತಿಳಿಸಿದ್ದಾರೆ.
ಇದರಿಂದ ಸಿಟ್ಟಾದ ಪೊಲೀಸರು ಠಾಣೆಯಲ್ಲಿ ಕೂಡಿ ಹಾಕಿ ಬೆಲ್ಟ್ ನಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ, ಅಲ್ಲದೇ ಮಹಿಳಾ ಪೊಲೀಸ್ ಸಿಬ್ಬಂದಿಯ ಜೊತೆ ಸೇರಿ ಪುರುಷ ಪೊಲೀಸ್ ಸಿಬ್ಬಂದಿಯಿಂದ ಕೂಡ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಮಗನ ಬಗ್ಗೆ ಏನು ಗೊತ್ತಿಲ್ಲ ಎಂದು ಹೇಳಿದರೂ ಕೂಡ ಬೆಲ್ಟ್ ನಿಂದ ಕಾಲಿನಿಂದ ಲಕ್ಷ್ಮವ್ವ ಹಲ್ಲೆ ನಡೆಸಲಾಗಿದ್ದು, ಜೊತೆಗೆ ಮಹಿಳೆ ಬಳಿ ಇದ್ದ 27 ಗ್ರಾಂ ಚಿನ್ನದ ಸಾರ, ಕಿವಿಯೋಲೆ, 20 ಸಾವಿರ ನಗದು ಕಿತ್ತುಕೊಂಡಿದ್ದಾರೆ ಎಂದು ಲಕ್ಷ್ಮವ್ವ ಆರೋಪಿಸಿದ್ದಾರೆ.
ಅದೆಷ್ಟೇ ಕೇಳಿದರೂ ಹೇಳದ ಹಿನ್ನಲೆ ಬಳಿಕ ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ. ಸದ್ಯ ಲಕ್ಷ್ಮವ್ವ ಅಸ್ವಸ್ಥವಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ನೋಡಿ: ಡಿಸೆಂಬರ್ 10| ಮಾನವ ಹಕ್ಕುಗಳ ದಿನ ; ನಮ್ಮ ದೈನಂದಿನ ಹಕ್ಕುಗಳು Janashakthi Media
