ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ| ವಿಪಕ್ಷ ಯುಡಿಎಫ್‌ಗೆ ಮುನ್ನಡೆ

ತಿರುವನಂತಪುರಂ: ಡಿಸೆಂಬರ್‌ 13ರ ಬೆಳಿಗ್ಗೆ 8 ಗಂಟೆಗೆ ಕೇರಳದ 1,199 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು, ಸಂಜೆ 5ರ ಮಾಹಿತಿ ಪ್ರಕಾರ ವಿಪಕ್ಷ ಯುಡಿಎಫ್‌ ಹೆಚ್ಚು ಗ್ರಾಮ ಪಂಚಾಯತಿಗಳಲ್ಲಿ  ಮತ್ತು ಪಂಚಾಯತ್‌ಗಳು, ಪುರಸಭೆಗಳು ಮತ್ತು ಪಾಲಿಕೆಗಳಲ್ಲಿ ಎಲ್‌ಡಿಎಫ್‌ ಮತ್ತು ಯುಡಿಎಫ್‌ ಸಮಬಲದ ಪೈಪೋಟಿ ನಡೆಸಿವೆ.

ರಾಜ್ಯ ಚುನಾವಣಾ ಆಯೋಗದ ಪ್ರಕಾರ ಸಂಜೆ 5 ಗಂಟೆಗೆ 941 ಗ್ರಾಮ ಪಂಚಾಯತಿಯಲ್ಲಿ  ಆಡಳಿತಾರೂಢ ಎಲ್‌ಡಿಎಫ್‌‍ 341 ಗ್ರಾಮ ಪಂಚಾಯತ್‌ ಸ್ಥಾನಗಳಲ್ಲಿ,  ವಿರೋಧ ಪಕ್ಷ ಯುಡಿಎಫ್‌ 504  ಗ್ರಾಮ ಪಂಚಾಯತ್‌ ಸ್ಥಾನಗಳಲ್ಲಿ, ಎನ್‌ಡಿಎ 26 ಪಂಚಾಯತ್‌ಗಳಲ್ಲಿ ಮುನ್ನಡೆ ಸಾಧಿಸಿವೆ. ಯುಡಿಎಫ್‌ 54 ಪುರಸಭೆಗಳು, 7 ಜಿಲ್ಲಾ ಪಂಚಾಯತ್‌ಗಳು, 79 ತಾಲೂಕು ಪಂಚಾಯತ್‌ಗಳು ಮತ್ತು 4 ಪಾಲಿಕೆಸ್ಥಾನಗಳಲ್ಲಿಮುಂದಿದ್ದರೆ, ಎಲ್‌ಡಿಎಫ್‌‍ 28 ಪುರಸಭೆಗಳು, 7 ಜಿಲ್ಲಾ ಪಂಚಾಯತ್‌ಗಳು, 63 ತಾಲೂಕು ಪಂಚಾಯತ್‌ಗಳು ಮತ್ತು ಒಂದು ಪಾಲಿಕೆಯಲ್ಲಿ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: ಬೆಂಗಳೂರು | ಸ್ಕೂಟರ್‌ಗೆ ವೇಗವಾಗಿ ಡಿಕ್ಕಿ ಹೊಡೆದ ಮಾಜಿ ಸಚಿವರ ಪುತ್ರನ ಕಾರು

ಬಿಜೆಪಿ ನೇತೃತ್ವದ ಎನ್‌ಡಿಎ 26 ಗ್ರಾಮ ಪಂಚಾಯತ್‌ಗಳು, 2 ಪುರಸಭೆ, ಒಂದು ಪಾಲಿಕೆಯಲ್ಲಿ ಮುಂದಿದೆ. 244 ಕೇಂದ್ರಗಳು ಮತ್ತು 14 ಜಿಲ್ಲಾ ಕಲೆಕ್ಟರೇಟ್‌ಗಳಲ್ಲಿ ಎಣಿಕೆ ನಡೆಯುತ್ತಿದೆ. ತಿರುವನಂತಪುರಂ, ಪಾಲಕ್ಕಾಡ್‌ ಮತ್ತು ವಡಕರ ಸೇರಿದಂತೆ ಕೆಲವು ಎಣಿಕೆ ಕೇಂದ್ರಗಳಲ್ಲಿ ಬೂತ್‌ ಏಜೆಂಟ್‌ಗಳು ಮತ್ತು ಅಭ್ಯರ್ಥಿಗಳಿಗೆ ಪ್ರವೇಶ ನೀಡುವ ಬಗ್ಗೆ ಬೆಳಿಗ್ಗೆ ಕೆಲವು ಸಮಸ್ಯೆ ಉಂಟಾಗಿತ್ತು.

ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ | ಕೊಂದವರು ಯಾರು? ಎಂಬುದು ಹೊರಬರಲಿ – ಡಾ. ನಾಗಲಕ್ಷ್ಮೀ ಚೌಧರಿJanashakthi Media

Donate Janashakthi Media

Leave a Reply

Your email address will not be published. Required fields are marked *