ಆನೇಕಲ್‌ | ರಾಗಿ ಉತ್ತಮ ಫಸಲು ರೈತರ ಮುಖದಲ್ಲಿ ಸಂತಸದ ಕಳೆ

ಆನೇಕಲ್: ರಾಗಿಯ ಕಣಜ ಖ್ಯಾತಿಯ ಆನೇಕಲ್‌ನಲ್ಲಿ ಈ ಬಾರಿ ಭರ್ಜರಿ ಫಸಲು ಬಂದಿದೆ.  ರಾಗಿ ಕಟಾವು ಮಾಡಿ ತಾಲ್ಲೂಕಿನ ರೈತರು ಸಂತಸದಿಂದ ರಾಗಿ ರಾಶಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ ಮಳೆ ಕೊರತೆ–ಕಟಾವಿಗೆ ಬಂದಾಗ ಮಳೆ ಭೀತಿಯ ನಡುವೆಯೂ ರಾಗಿ ಉತ್ತಮ ಫಸಲು ನೀಡಿದ್ದು.

ಆನೇಕಲ್‌ ತಾಲ್ಲೂಕಿನಾದ್ಯಂತ 2,375 ಹೆಕ್ಟೇರ್‌ನಲ್ಲಿ ರಾಗಿಯ ಬೆಳೆ ಬೆಳೆಯಲಾಗಿದ್ದು, ಭರ್ಜರಿ ಬೆಳೆ ರೈತರಲ್ಲಿ ಸಂತಸ ಮೂಡಿಸಿದೆ.

ಇದನ್ನೂ ಓದಿ : ಬೆಂಗಳೂರು | ನಗರದ ಸೌಂದರ್ಯ ಹಾಳು ಮಾಡುವ ಫ್ಲೆಕ್ಸ್–ಬ್ಯಾನರ್ ತೆರವು ಅಭಿಯಾನ – ರಾಜೇಂದ್ರ ಚೋಳನ್

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ವರ್ಷವಿಡೀ ಬೆಳೆದ ಬೆಳೆ ವಿವಿಧ ಕಾರಣಗಳಿಂದ ಕೈತಪ್ಪಿ ಹೋಗುತ್ತಿತ್ತು. ಆದರೆ ಈ ವರ್ಷ ಆನೆಗಳ ಹಾವಳಿಯಿಲ್ಲ, ಮಳೆಯ ತೊಡಕಿಲ್ಲದೇ ಗ್ರಾಮಗಳ ಮನೆ ಮನೆಗಳ ಮುಂದೆ ರಾಗಿಯನ್ನು ಒಣಗಿಸುತ್ತಿರುವುದು, ಇಲ್ಲವೇ ಕಣದಲ್ಲಿ ರಾಶಿ ಮಾಡುತ್ತಿರುವುದು ಎಲ್ಲೆಡೆ ಕಂಡು ಬಂದಿದೆ. ರಾಗಿಯ ಕಣದಲ್ಲಿ ರಾಗಿಯ ರಾಶಿಗೆ ಕುಟುಂಬದವರೆಲ್ಲರೂ ಒಗ್ಗೂಡಿ ಪೂಜೆ ಸಲ್ಲಿಸಿ ವರ್ಷದ ಬೆಳೆಯನ್ನು ಮನೆ ತುಂಬಿಕೊಳ್ಳುವ ಸಂತಸ ಎಲ್ಲರಲ್ಲಿ ಮನೆ ಮಾಡಿತ್ತು.

ಸುಮಾರು 20 ಎಕರೆ ಪ್ರದೇಶದಲ್ಲಿ ರಾಗಿ ಬೆಳೆಯನ್ನು ಬೆಳೆದಿದ್ದು 200 ಕ್ವಿಂಟಾಲ್‌ಗೂ ಹೆಚ್ಚು ರಾಗಿ ಫಸಲು ಬಂದಿದೆ. ಕೊಯ್ಲಿಗೆ ಬಂದ ಬೆಳೆ ಕೊಯ್ಯಲು ಕೂಲಿಯ ಕೆಲಸದವರು ಸಿಗುವುದು ಕಷ್ಟವಾಗಿದೆ. ಹಾಗಾಗಿ ಯಂತ್ರದ ಮೂಲಕ ಕೊಯ್ಲು ಮಾಡಲಾಗಿದೆ. ಒಂದು ಗಂಟೆಗೆ 3.5 ಸಾವಿರದಿಂದ ₹4 ಸಾವಿರ ಯಂತ್ರಕ್ಕೆ ಬಾಡಿಗೆ ನೀಡಬೇಕು. ಒಂದು ಎಕರೆ ಕೊಯ್ಯಲು ಎರಡು ಗಂಟೆ ಸಮಯ ತಗುಲುತ್ತದೆ ಎಂದು ಆನೇಕಲ್‌ ತಾಲ್ಲೂಕಿನ ಇಂಡ್ಲವಾಡಿಯ ರೈತರಾದದ ರೇಣುಕಪ್ರಸಾದ್, ದೇವರಾಜ್‌, ರುದ್ರೇಶ್‌, ಅವಿನಾಶ್‌ ತಿಳಿಸಿದರು.

ಕಳೆದ ಹಲವು ವರ್ಷಗಳಿಂದ ಇಂತಹ ಫಸಲೇ ಬಂದಿರಲಿಲ್ಲ. ಈ ಬಾರಿ ಉತ್ತಮ ರಾಗಿ ಫಸಲು ಬಂದಿದೆ ಎಂದು ರೈತ ಚಂದ್ರಶೇಖರ್‌ ತಿಳಿಸಿದರು.  ರಾಗಿಯ ಕಾಲ ಬಂತೆಂದರೆ ಕಾಡಾನೆಗಳ ಕಾಟವೇ ಹೆಚ್ಚಿರುತ್ತದೆ. ಈ ನಡುವೆ ಈ ಬಾರಿ ಕಾಡಾನೆಗಳು ಕರ್ನಾಟಕದತ್ತ ಸುಳಿಯದೇ ತಮಿಳುನಾಡಿನ ಗಡಿಯಲ್ಲಿಯೇ ಓಡಾಡಿದ್ದರಿಂದ ಈ ಭಾಗದ ರೈತರು ರಾಗಿಯ ಬೆಳೆಗೆ ರಕ್ಷಣೆ ಸಿಕ್ಕಂತಾಯಿತು. ಆನೇಕಲ್‌ ಅರಣ್ಯ ಪ್ರದೇಶದ ಗಡಿಗಳಲ್ಲಿ ಕಾಡಾನೆಗಳು ನಿರಂತರವಾಗಿ ಓಡಾಡುತ್ತಿವೆ. ಈ ನಡುವೆ ರಾಗಿಯನ್ನು ಕಟಾವು ಮಾಡಿಕೊಂಡು ರಾಗಿಯನ್ನು ಬೆಳೆಯನ್ನು ರೈತರು ಮನೆಗೆ ಸಾಗಿಸಿದ್ದಾರೆ. ಇದರಿಂದಾಗಿ ರೈತರಲ್ಲಿ ಉತ್ಸಾಹ ಮನೆ ಮಾಡಿದೆ.

ರಾಗಿಯ ಬೆಳೆಯನ್ನು ಮಳೆಯಿಂದ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಕಳೆದ ಕೆಲ ದಿನಗಳಿಂದ ಮಳೆ ಹೆಚ್ಚಿತ್ತು. ಈ ನಡುವೆ ಭಾರಿ ಗಾಳಿಯಿಂದ ರಾಗಿಯ ಬೆಳೆಯು ನೆಲಕಚ್ಚಿತ್ತು. ರೈತರು ರಾಗಿಯನ್ನು ಬಿಸಿಲಿಗೆ ಹಾಕಿ ಕಾಟವು ಮಾಡಿ ರಾಗಿಯನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ  ನೋಡಿ : ಉದ್ಯೋಗ ಸೃಷ್ಟಿಯಲ್ಲಿ ಕುಂಟುತ್ತಿರುವ ಸರಕಾರಗಳು | ವಿಶ್ಲೇಷಣೆ : ಗುರುರಾಜ ದೇಸಾಯಿ Janashakthi Media

 

Donate Janashakthi Media

Leave a Reply

Your email address will not be published. Required fields are marked *