ಕೂಡಲೇ ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಆರಂಭಿಸಿ: ರೈತ ಸಂಘಟನೆ ಒತ್ತಾಯ

ಮೈಸೂರು: ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ, “ಕೂಡಲೇ ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಆರಂಭಿಸಬೇಕು, ಬಣ್ಣಾರಿ ಕಾರ್ಖಾನೆ ಕಬ್ಬು ಹಣ ಪಾವತಿಸಬೇಕು” ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ಬೆಂಬಲ

ಭತ್ತ ಖರೀದಿ ಕೇಂದ್ರ ಆರಂಭಿಸಿದ್ದೇವೆ ಎಂದು ರೈತರ ನೋಂದಣಿ ಮಾಡಿಕೊಳ್ಳುವ ಮೂಲಕ ವಿಳಂಬ ಮಾಡುತ್ತಿದ್ದಾರೆ. ಭತ್ತದ ಬೆಲೆ ಖುಷಿಯುತ್ತಿದೆ. ವಿಳಂಬವಾಗಿ ಖರೀದಿ ಕೇಂದ್ರ ಆರಂಭವಾದರೆ. ರೈತರ ಬದಲಿಗೆ ದಲ್ಲಾಳಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಹೀಗಾಗಿ ಕೂಡಲೇ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ರಾಜ್ಯ ಸರ್ಕಾರ ಟನ್ ಕಬ್ಬಿಗೆ ಹೆಚ್ಚುವರಿ ನೂರು ರೂ ನಿಗದಿ ಮಾಡಿದ್ದು, ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕೂಡಲೇ ಕೊಡಿಸಬೇಕು. ಕಳೆದ ವರ್ಷದ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಿ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಆಂಧ್ರಪ್ರದೇಶ | ಶಸ್ತ್ರಚಿಕಿತ್ಸೆ : ಹಸುವಿನ ಹೊಟ್ಟೆಯಲ್ಲಿದ್ದ 52 ಕೆ.ಜಿ ಪ್ಲಾಸ್ಟಿಕ್ ಹೋರ ತೆಗೆದ ವೈದ್ಯರು

ಈ ವೇಳೆ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಬಣ್ಣಾರಿ ಸಕ್ಕರೆ ಕಾರ್ಖಾನೆ ರೈತರಿಗೆ ನ್ಯಾಯ ಸಮ್ಮತ ಬೆಲೆ ನೀಡುತ್ತಿಲ್ಲ. ಆದರೆ, ರೈತರನ್ನು ಹೆಚ್ಚು ಕಬ್ಬು ಬೆಳೆಯುವಂತೆ ಆಮಿಷ ಒಡ್ಡುತ್ತಿದ್ದಾರೆ. ಇಂತಹ ಆಮಿಷಕ್ಕೆ ರೈತರು ಬಲಿ ಆಗಬಾರದು. ಜನಸಾಮಾನ್ಯರು ತಿನ್ನುವ ಭತ್ತಕ್ಕೆ ಎಂಎಸ್‍ಪಿ 2369 ರೂ, ದನ ಕರುಗಳು, ಪ್ರಾಣಿಗಳು ತಿನ್ನುವ ಮೆಕ್ಕೆಜೋಳಕ್ಕೆ 2400 ರೂ ನಿಗದಿ ಮಾಡಿದೆ. ಈ ರೀತಿಯ ಬೆಲೆ ನಿಗದಿ ಮಾಡುವುದರಿಂದ ರೈತರ ಬದುಕು ನರಕವಾಗುತ್ತಿದೆ. ಕೇಂದ್ರ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಭತ್ತದ ಬೆಂಬಲ ಬೆಲೆಯನ್ನು 3000 ರೂಗೆ ಹೆಚ್ಚಳ ಮಾಡಲಿ ಎಂದು ಆಗ್ರಹಿಸಿದರು.

15 ವರ್ಷಗಳ ಹಿಂದೆ ಕೃಷಿ ಜಮೀನಿನಲ್ಲಿ ಓಎನ್‍ಜಿಸಿ ಕಂಪನಿಯವರು ಅನಿಲ ತೆಗೆಯುತ್ತಿರುವುದನ್ನು ವಿರೋಧಿಸಿ ಹೋರಾಟ ನಡೆಸಿದ ತಮಿಳುನಾಡು ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪಿ.ಆರ್.ಪಾಂಡೆನ್ ಅವರನ್ನು ಬಂಧಿಸಿರುವುದು ನ್ಯಾಯ ಸಮ್ಮತವಲ್ಲ. ಹೀಗಾಗಿ ಕೂಡಲೇ ಅವರನ್ನು ಬಿಡುಗಡೆಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ದೇಶಾದ್ಯಂತ ರೈತ ಸಂಘಟನೆಯ ಮುಖಂಡರು ತಮಿಳುನಾಡು ಚಲೋ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ನೋಡಿ: “ಪರ್ಯಾಯ ರಾಜಕಾರಣಕ್ಕಾಗಿ ಜನದನಿ ರ‍್ಯಾಲಿ” Janashakthi Media

Donate Janashakthi Media

Leave a Reply

Your email address will not be published. Required fields are marked *