ಹಾಸನ: ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಕಾಣಿಸಿಕೊಳ್ಳುವ ಅಪರೂಪದ ಬೀಳುವ ಕಲ್ಲು ಎಂದೇ ಜನಜನಿತವಾದ ಉಲ್ಕಾಮಳೆಗಳ ಅಭೂತಪೂರ್ವ ಸೌರಚಟುವಟಿಕೆ ನಮ್ಮೂರ ಸಭಾಂಗಣದಲ್ಲಿ ಜರುಗಲಿದೆ ಎಂದು ಶಿಕ್ಷಣ ಉಪಸಮಿತಿಯ ಸಂಚಾಲಕರಾದ ಕೆ. ವಿ. ಕವಿತ ತಿಳಿಸಿದ್ದಾರೆ.
ಪ್ರತಿ ಗಂಟೆಗೆ ಸುಮಾರು 20 ರಿಂದ–25 ಕ್ಕೂ ಹೆಚ್ಚು ಉಲ್ಕೆಗಳು ಬೀಳುವ ಅವಕಾಶವಿರುವ ಈ ವಿಸ್ಮಯಕಾರಿ ಆಕಾಶ ಘಟನೆಯನ್ನು ನೋಡುವ ಸಲುವಾಗಿ ಡಿಸೆಂಬರ್ 13ರಿಂದ 14ರ ಮಧ್ಯರಾತ್ರಿ ಹಾಸನ ತಾಲೂಕಿನ ತಿರುಪತಿಹಳ್ಳಿ ಬೆಟ್ಟದಲ್ಲಿ ಖಗೋಳ ವಿಜ್ಞಾನ ಆಸಕ್ತರಿಗೆ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಸನ ಜಿಲ್ಲಾ ಸಮಿತಿ., ನಿಟ್ಟೂರು ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಗ್ರಾಮಸ್ಥರ ಸಹಭಾಗಿತ್ವದಲ್ಲಿ ವಿಶೇಷ ಅರಿವು ಮತ್ತು ವೀಕ್ಷಣಾ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಉಲ್ಕಾಪಾತದ ವೈಷಿಷ್ಠ್ಯ:
ಡಿಸೆಂಬರ್ ತಿಂಗಳಲ್ಲಿ ಉಲ್ಕೆಗಳು ಜೆಮಿನಿ ನಕ್ಷತ್ರ ಪುಂಜದ ದಿಕ್ಕಿನಿಂದ ಗೋಚರಿಸುತ್ತವೆ ಇವುಗಳನ್ನು ಜೆಮಿನಿಡ್ ಉಲ್ಕಾಪಾತ ಎನ್ನುತ್ತಾರೆ, ಇದು 3200 ಪೈತಾನ್ ಎಂಬ ಕ್ಷುದ್ರಗ್ರಹದ ಧೂಳುಗಳಿಂದ ಉಂಟಾಗುವ ಉಲ್ಕಾಪಾತ. ಈ ಪೈತಾನ್ ಕ್ಷುದ್ರಗ್ರಹವು 1000-2000 ವರ್ಷಗಳ ಹಿಂದೆ ಅಸ್ಟ್ರೋಯಿಡ್ ಬೆಲ್ಟ್ನಿಂದ ಹೊರ ಬಂದು ಸೂರ್ಯನ ಸುತ್ತ ತನ್ನ ಹೊಸ ಪಥದಲ್ಲಿ ಸುತ್ತುತ್ತಿದೆ.
ಇದನ್ನೂ ಓದಿ: ಬೆಂಗಳೂರು | ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ಹಾಗೂ ವಿನ್ಯಾಸ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿನೆ – ಎಂ.ಬಿ. ಪಾಟೀಲ್
ಇದು ಕಲ್ಲು ಮತ್ತು ಲೋಹದಿಂದ ರಚಿತವಾದ ಕ್ಷುದ್ರಗ್ರಹ ,ಇದು ಸೂರ್ಯನಿಗೆ ಸಮೀಪಿಸಿದಾಗ ಸೂರ್ಯನ ಶಾಖಕ್ಕೆ ಇದರಿಂದ ಸಣ್ಣ ಕಲ್ಲುಗಳು ಹಾಗೂ ಧೂಳುಗಳು ಹೊರ ಬಂದು ಅಂತರಿಕ್ಷದಲ್ಲಿ ಹರಡಿರುತ್ತವೆ. ಭೂಮಿ ಸೂರ್ಯನ ಸುತ್ತ ಪ್ರತಿಭ್ರಮಿಸುವಾಗ ಕ್ಷುದ್ರಗ್ರಹಗಳ ಅವಶೇಷಗಳು ಹರಡಿರುವ ಜಾಗ ಪ್ರವೇಶಿಸಿದಾಗ ಆ ಕಣಗಳು ಭೂಮಿಯ ವಾತಾವರಣದ ಘರ್ಷಣೆ ಸಿಲುಕಿ ಸುಟ್ಟು ಜೆಮಿನಿಡ್ ಉಲ್ಕಾಪಾತ ಉಂಟಾಗುತ್ತದೆ. ಭೂಮಿಯು ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಈ ಪಥದಲ್ಲಿ ಚಲಿಸುತ್ತದೆ ಎಂದು ಹಳಿದರು.
ಸಾರ್ವಜನಿಕ ವೀಕ್ಷಣಾ ಚಟುವಟಿಕೆ
ನಾವೀಗ ಡಿಸೆಂಬರ್ ತಿಂಗಳಲ್ಲಿದ್ದೇವೆ ಹಾಗಾಗಿ ಈ ಒಂದು ನೈಸರ್ಗಿಕ ವಿದ್ಯಾಮಾನವನ್ನು ಕಂಡ್ತುಂಬಿಕೊಳ್ಳುವ ಅವಕಾಶ ನಮ್ಮದಾಗಿದೆ. ವಿಶೇಷವೆಂದರೆ ಈ ಉಲ್ಕಾಪಾತವು ಡಿಸೆಂಬರ್ 13ರ ರಾತ್ರಿಯಿಂದ 14 ರ ಮುಂಜಾನೆಯವರೆಗೆ ಹೆಚ್ಚಾಗಿ ಕಾಣಬಹುದಾಗಿದೆ ಅಂದರೆ ರಾತ್ರಿ 12ಗಂಟೆಯಿಂದ ಬೆಳಗ್ಗೆ 4 ರ ವರೆಗೆ ವಿಶೇಷವಾಗಿ ರಾತ್ರಿ 2 ರಿಂದ ಮುಂಜಾನೆ 4 ಗಂಟೆಯವರೆಗೆ ಆಕಾಶದಲ್ಲಿ ಉಲ್ಕೆಗಳು ಸ್ಪಷ್ಟವಾಗಿ ಕಾಣುವ ಸಾಧ್ಯತೆ ಹೆಚ್ಚಿದೆ, ಆದರೆ ಇದು ನಗರ ಪ್ರದೇಶದಲ್ಲಿ ಹೆಚ್ಚು ಬೆಳಕಿರುವುದರಿಂದ ನೋಡಲು ಸಾಧ್ಯವಿಲ್ಲ.
ಹಾಗಾಗಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲೆಯು ನಿಟ್ಟೂರು ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಉಲ್ಕಾಪಾತ ವೀಕ್ಷಣಾ ಕಾರ್ಯಕ್ರಮವನ್ನು ಸಾರ್ವಜನಿಕರಿಗೆ, ಹಾಗೂ ವಿದ್ಯಾರ್ಥಿಗಳಿಗೆ ಹಾಸನದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ತಿರುಪತಿಹಳ್ಳಿ ಬೆಟ್ಟದಲ್ಲಿ ಆಯೋಜಿಸಲಾಗಿದೆ.
ಸದರಿ ಕಾರ್ಯಕ್ರಮದಲ್ಲಿ ನಿಮ್ಮ ನಿಮ್ಮ ರಾಶಿ – ಜನ್ಮನಕ್ಷತ್ರಗಳ ಪತ್ತೆ ಹಚ್ಚುವಿಕೆ, ಟೆಲೆಸ್ಕೋಪಿನಲ್ಲಿ ಗ್ರಹಗಳ ವೀಕ್ಷಣೆ ಹಾಗೂ ಸೌರವ್ಯೂಹದ ಪರಿಚಯ ಜೊತೆಗೆ ಸೌರ-ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನೊಂದಾಯಿತರಿಗೆ ಹಾಸನದಿಂದ ಪ್ರಯಾಣದ ವ್ಯವಸ್ಥೆ, ಲಘುಉಪಹಾರ, ಆಗಾಗ್ಗೆ ಕಾಫಿ ಹಾಗೂ ಸರಳ ಸಂಪನ್ಮೂಲ ಪರಿಕರಗಳನ್ನು ಒದಗಿಸಲಾಗುವುದು
ಬೆಟ್ಟಪ್ರದೇಶವಾದಕಾರಣ ನೊಂದಣಿಯನ್ನು ನಿರ್ಭಂಧಿಸಲಾಗಿದ್ದು ಮೊದಲು ನೊಂದಾಯಿತ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗೆ ಈ ಕೆಳಗಿನಂತೆ ಸಂಪರ್ಕಿಸಿ:
ಸಿ. ಸೌಭಾಗ್ಯ, (ಅಧ್ಯಕ್ಷರು) – 6363907441
ಚಿನ್ನೇನಹಳ್ಳಿ ಸ್ವಾಮಿ (ಕಾರ್ಯದರ್ಶಿ)– 9448900181
ಎಚ್.ಆರ್.ರವೀಶ್ (ಖಜಾಂಚಿ)– 9900735212
ಇದನ್ನೂ ನೋಡಿ: ಕನಿಷ್ಠ ವೇತನ ನೀಡಿ, ನಮ್ಮನ್ನು ಖಾಯಂ ಮಾಡಿ | ಅಂಗನವಾಡಿ,ಆಶಾ, ಬಿಸಿಯೂಟ ನೌಕರರ ಪ್ರತಿಭಟನೆ | Janashakthi Media
