ಬಳ್ಳಾರಿ : ವಿ.ಎಸ್.ಕೆ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಮುಂದೆ ಭಾರತ ವಿದ್ಯಾರ್ಥಿ ಫೆಡರೇಷನ್(SFI) ಬಳ್ಳಾರಿ, ಕೊಪ್ಪಳ ವಿಜಯನಗರ ಜಿಲ್ಲಾ ಸಮಿತಿಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಡಾ.ದೊಡ್ಡಬಸವರಾಜ ಮಾತಾನಾಡಿ ಇತ್ತೀಚೆಗೆ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಒಂದಲ್ಲ ಒಂದು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಎದುರಿಸುತ್ತಿದ್ದಾರೆ ವಿವಿದ ರೀತಿಯ ಸಮಸ್ಯಗಳನ್ನು ಸೃಷ್ಟಿಸುತ್ತಿದೆ. ವಿಶ್ವವಿದ್ಯಾಲಯ ವ್ಯಾಪ್ತಿಯ ಕೊಪ್ಪಳ ಪಿಜಿ ಸೆಂಟರ್ನಲ್ಲಿ 2022-23 ಹಾಗೂ 2023-24 ರ ಸಾಲಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ಅಂಕಪಟ್ಟಿ ಕೊಟ್ಟಿಲ್ಲ. ಅನೇಕ ವಿದ್ಯಾರ್ಥಿಗಳು ಶುಲ್ಕ ಕಟ್ಟಿದರೂ ಅಂಕಪಟ್ಟಿ ಹಾಗೂ ಪಾಸಿಂಗ್ ಸರ್ಟಿಫಿಕೇಟ್ಗಳನ್ನು ನೀಡಿರುವುದಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ : ಹಾವೇರಿ | ಕೆಪಿಎಸ್ ಶಾಲೆ ಹೆಸರಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರ
ಕೊಪ್ಪಳ ವಿಶ್ವವಿದ್ಯಾಲಯ ಸ್ಥಾಪನೆಯಾದ ನಂತರ ಬಳ್ಳಾರಿಗೆ ಎಲ್ಲ ಡಾಕ್ಯುಮೆಂಟ್ ಕಳುಸಿದ್ದೇವೆ ಎಂದು ಹಿಂದಿನ ಕೊಪ್ಪಳ ಪಿಜಿ ಸೆಂಟರ್ ನಿರ್ದೇಶಕರಾಗಿದ್ದ ಡಾ. ಪ್ರಕಾಶ್ ಅಳವಟ್ಟಿ ಅವರು ಹೇಳುತ್ತಾರೆ. ಆದರೆ ಕೊಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ರಿಜಿಸ್ಟರ್ ಅವರು ಹೇಳುವ ವರೆಗೂ ಅಂಕ ಪಟ್ಟಿ ಕೊಡಲಾಗದು ಎಂದು ಹೇಳಿದ್ದಾರೆ. ಒಂದು ಕಡೆ KSET ಪಾಸಾದ ವಿದ್ಯಾರ್ಥಿಗಳು ಮೂಲ ಅಂಕಪಟ್ಟಿ ತುರ್ತಾಗಿ ಬೇಕಿದೆ. ನಾಳೆ ವೆರಿಫಿಕೇಶನ್ಗೆ ಹೋಗಬೇಕಾದರೆ ಅಂಕಪಟ್ಟಿ ಹಾಗೂ ಪಾಸಿಂಗ್ ಸರ್ಟಿಫಿಕೇಟ್ ಬೇಕಿದೆ. ಕೂಡಲೆ ಅಂಕಪಟ್ಟಿ ಪಾಸಿಂಗ್ ಸರ್ಟಿಫಿಕೇಟ್ ಕೊಡಬೇಕು ಎಂದು ಒತ್ತಾಯಿದರು.
ಗ್ಯಾನೇಶ್ ಕಡಗದ್ ಮಾನಾಡಿ ವಿಶ್ವವಿದ್ಯಾಲಯ ನಕಲು ಅಂಕಪಟ್ಟಿ ವಿಚಾರದ ಪಾರದರ್ಶಕತೆ ಕಳೆದು ಕೊಂಡಿದೆ. ನಕಲಿ ಘಟಿಕೋತ್ಸವ ಪ್ರಮಾಣ ಪತ್ರ ಸೃಷ್ಟಿಸಲಾಗಿತ್ತು. ಮತ್ತು ಹಣವನ್ನು ದುಪ್ಪಟ್ಟು ವಸೂಲಿ ಮಾಡುತ್ತಿದ್ದಾರೆ. ನಾವು ಕಲ್ಯಾಣ ಕರ್ನಾಟಕ ಭಾಗದ ದಲಿತ, ಹಿಂದುಳಿದ ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳ ತೀವ್ರ ತೊಂದರೆಯಾಗಿದೆ. ರಾಜ್ಯದಲ್ಲಿ ಇರುವ ಬೇರೆ ಬೇರೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಪ್ರಮಾಣ ಪತ್ರದ ಶುಲ್ಕ ಈ ವಿಶ್ವವಿದ್ಯಾಲಯಕ್ಕಿಂತ ಕಡಿಮೆ ಇದೆ. ಬಡ ವಿದ್ಯಾರ್ಥಿಗಳು 10,000 ರಿಂದ 20,000 ಹಣ ಭರಿಸುವುದು ಹೇಗೆ. ವಿ.ಎಸ್.ಕೆ ವಿಶ್ವವಿದ್ಯಾಲಯ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳ ಪರವಾದ ಯಾವುದೇ ಆದೇಶಗಳಿಲ್ಲ. ಬಾಕಿ ಇರುವ ಪ್ರಮಾಣ ಪತ್ರ ಕೂಡಲೇ ಎಲ್ಲಾ ವಿದ್ಯಾರ್ಥಿಗಳಿಗೆ ನೀಡಬೇಕು. ಹಾಗೂ MFM ತತ್ಸಮಾನ ಪ್ರಮಾಣ ಪತ್ರ ಸೇರಿದಂತೆ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಆದೇಶ ಮಾಡಿ ಸೂಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಸ್ಥಳಕ್ಕೆ ಬಂದ ಪ್ರೋ. ನಾಗರಾಜ್ ಕುಲಚಿವರು, ಹಾಗೂ ಪ್ರೋ. ಸಾಲಿ ಮೌಲ್ಯಮಾಪನ ಕುಲಸಚಿವರು ಕೂಡಲೆ ಎಲ್ಲಾ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಮತ್ತು ಪಾಸಿಂಗ್ ಸರ್ಟಿಫಿಕೇಟ್ ನ್ನು ಇಂದು ಮಧ್ಯಾಹ್ನ 3 ಗಂಟೆಗೆ ಕೊಡುತ್ತೇವೆ. MFM ವಿಚಾರವಾಗಿ ಸಮಿತಿ ರಚನೆಯಾಗಿದೆ UGC ನಿಯಮದಂತೆ ಕೊಡುತ್ತೇವೆ. ಹಾಗೂ ಘಟಿಕೋತ್ಸವ ಪ್ರಮಾಣ ಪತ್ರ ಶುಲ್ಕ ಕಡಿತ ಮಾಡುವುದಕ್ಕೆ ಸಿಂಡಿಕೇಟ್ ಸಭೆಯಲ್ಲಿ ಚೆರ್ಚಿಸುತ್ತೇವೆ ಇಂದು ಎಲ್ಲಾ ವಿದ್ಯಾರ್ಥಿಗಳ ಅಂಕಪಟ್ಟಿ ನೀಡುತ್ತೇವೆ ಎಂದರು. ಅದರಂತೆ ಪಾಸಿಂಗ್ ಸರ್ಟಿಫಿಕೇಟ್, ಅಂಕಪಟ್ಟಿಯನ್ನು ವಿತರಣೆ ಮಾಡಿದರು.
ವರದರಾಜು ಮಾತಾನಾಡಿ ಇದು SFI ಸಂಘಟನೆ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರಾಜೇಂದ್ರಪ್ರಸದ್ ತಾಲೂಕು ಅಧ್ಯಕ್ಷರು, ಬಾಲಜಿ, ಶಂಕರ ಲಿಂಗ, ಪ್ರದೀಪ್, ಬಸವರಾಜ, ದೇವರಾಜ, ಅಂಜಿನಪ್ಪ, ಹನುಮಂತರಾಯ, ಸುಭಾಸ್ ಚಂದ್ರ, ಪ್ರಶಾಂತ ಇನ್ನು ಅನೇಕರು ಇದ್ದರು.
ಇದನ್ನೂ ನೋಡಿ : ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರಕಾರ | ತಳ ಸಮುದಾಯಕ್ಕೆ ಎಸಗುತ್ತಿರುವ ದ್ರೋಹ Janashakthi Media
