ಬೆಂಗಳೂರು : ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೃಹತ್ ‘ಬೆಂಗಳೂರು ಚಲೋ’ ಬುಧವಾರ (ನವೆಂಬರ್ 26) ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಹೋರಾಟ ನಿರ್ಣಾಯಕ ಹಂತ ತಲುಪಿದೆ.
ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ, ಜಮೀರ್ ಅಹಮ್ಮದ್, ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಭಟನಾ ಸ್ಥಳಕ್ಕೆ ಬರುವ ಭರವಸೆ ನೀಡಿದ್ದರು. ಬೆಳಗಿನಿಂದಲೂ ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿದ್ದು, ಮಧ್ಯಾಹ್ನ ಎರಡು ಗಂಟೆಯಿಂದಲೂ ಸಮಯಾವಕಾಶ ಕೇಳುತ್ತಿದ್ದ ಮೂವರು ಸಚಿವರು ಸಂಜೆ 5 ಗಂಟೆಯಾದರೂ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರು ಅಹವಾಲು ಕೇಳಲಿಲ್ಲ, ಹೀಗಾಗಿ ಪ್ರತಿಭಟನಾಕಾರರು ಕೊನೆಗೆ ರಸ್ತೆಗಿಳಿರುದು ಹೋರಾಟ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಉಳ್ಳಾಲ ಸರಕಾರಿ ತಾಲೂಕು ಆಸ್ಪತ್ರೆ ಸ್ಥಾಪನೆ ಯಾವಾಗ ಶಾಸಕರು ಉತ್ತರಿಸಲಿ- ಸಂತೋಷ್ ಬಜಾಲ್
ಮೂರು ಗಂಟೆಗೆ ಬರುತ್ತೇನೆಂದು ಐದು ಗಂಟೆಯಾದರೂ ಧರಣಿ ಸ್ಥಳಕ್ಕೆ ಬಾರದ ಸಂಬಂಧಪಟ್ಟ ಸಚಿವರ ನಡೆಯಿಂದಾಗಿ ತಾಳ್ಮೆ ಕಳೆದುಕೊಂಡ ಕಾರ್ಮಿಕರು ಮತ್ತು ರೈತ ಮಹಿಳೆಯರು ವಿಧಾನಸೌಧ ಮುತ್ತಿಗೆ ಯತ್ನಿಸಿದರು. ರಸ್ತೆಗಿಳಿದ ಪ್ರತಿಭಟಕಾರರನ್ನು ತಡೆದ ಪೊಲೀಸರು, ಎರಡು ಹಂತದಲ್ಲಿ ತಡೆಗೋಡೆ ನಿರ್ಮಿಸಿ, ಪೊಲೀಸ್ ಬ್ಯಾರಿಕೇಡ್ ಹಾಕಿ, ಕಬ್ಬಿಣದ ಗೇಟಿನಿಂದ ರೈತರನ್ನೂ ತಡೆದರು.

ರೈತ ಕಾರ್ಮಿಕರ ಬೇಡಿಕೆ ಈಡೇರಿಸಲು ಅಸಮರ್ಥ ವಾದ ಸರಕಾರ ಇಂದು ಬೆಳಗಿನಿಂದ ನಡೆದ ಶಾಂತಿಯುತ ಸಮಾವೇಶಕ್ಕೆ ಸಚಿವರು ಬರುವುದಾಗಿ ಹೇಳಿದ್ದರು. ಜನಕಾಯುತ್ತಿದ್ದರು, ಸಚಿವರು ಬಾರದಿದ್ದಾಗ ಆಕ್ರೋಶಿತರಾದ ರೈತರು ಬೀದಿಗಿಳಿದರು. ಫ್ರೀಡಮ್ ಪಾರ್ಕ್ ಎದುರಿಗೆ ಅಕ್ಷರಶಃ ಜೈಲು ಮಾಡಿಟ್ಟಿರುವ ಸರಕಾರ ಜನರ ಸಹನೆ ಪರೀಕ್ಷೆ ಮಾಡುತ್ತಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು. ಬಸವರಾಜ, ರೈತ ನಾಯಕ ಬಡಗಲಪುರ ನಾಗೇಂದ್ರ, ಆರ್. ಬಸವರಾಜಪ್ಪ, ನೂರ್ ಶ್ರೀಧರ್, ಕಾರ್ಮಿಕ ನಾಯಕರಾದ ಎಸ್. ವರಲಕ್ಷ್ಮಿ, ಮೀನಾಕ್ಷಿ ಸುಂದರಂ, ಮೈತ್ರೇಯಿ, ಅಪ್ಪಣ್ಣ, ಜಯಮ್ಮ ಸೇರಿದಂತೆ ಅನೇಕರಿದ್ದರು.
ಇದನ್ನೂ ನೋಡಿ : ನೇರಪ್ರಸಾರ: ರೈತ – ಕಾರ್ಮಿಕ ಕಾಯ್ದೆಗಳ ವಿರುದ್ಧ – ಬೆಂಗಳೂರು ಚಲೋ | JCTU | ಸಂಯುಕ್ತ ಹೋರಾಟ ಕರ್ನಾಟಕ
