ಅಕ್ರಮ ಅದಿರು ಸಾಗಣೆ: ಸತೀಶ್‌ ಸೈಲ್‌ ಕಂಪನಿಯ ವಿರುದ್ದ ದೂರು ದಾಖಲಿಸಿದ ಇ.ಡಿ

ಬೆಂಗಳೂರು: ಜಾರಿ ನಿರ್ದೇಶನಾಲಯವು (ಇ.ಡಿ), ಬೇಲೇಕೇರಿ ಬಂದರಿನಿಂದ ಕಬ್ಬಿಣದ ಅದಿರು ಕದ್ದು ಸಾಗಿಸಿದ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ರ ಒಡೆತನದ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈ. ಲಿಮಿಟೆಡ್‌ ವಿರುದ್ಧ ಪ್ರಾಸಿಕ್ಯೂಷನ್‌ ದೂರು ದಾಖಲಿಸಿದೆ. ಅಕ್ರಮ

ಇದನ್ನೂ ಓದಿ: ನವದೆಹಲಿ | ಆರ್‌ಜೆಡಿಯ ಹೀನಾಯ ಸಾಧನೆ ಕಂಡರು ಮತ ಪ್ರಮಾಣ ಕಾಯ್ದುಕೊಂಡಿದೆ

‘ಸೈಲ್‌ ಅವರ ಕಂಪನಿಯು ಬಳ್ಳಾರಿಯ ಕೆಲ ಅದಿರು ಗಣಿಗಾರಿಕೆ ಕಂಪನಿಗಳಿಂದ ಈ ಕಬ್ಬಿಣದ ಅದಿರನ್ನು ಸಾಗಿಸಿದೆ. ಇದಕ್ಕಾಗಿ ಆ ಕಂಪನಿಗಳಿಗೆ ₹46.18 ಕೋಟಿ ಪಾವತಿಸಲಾಗಿದೆ. ಸೈಲ್‌ ಅವರ ಕಂಪನಿಯು ಆ ಅದಿರನ್ನು ಚೀನಾಕ್ಕೆ ಸಾಗಿಸಿದೆ. ಅಲ್ಲಿ ಸೈಲ್‌ ಅವರ ಒಡೆತನದ ಕಂಪನಿಗಳೇ ಆ ಅದಿರನ್ನು ಖರೀದಿಸಿವೆ. ನಂತರ ಚೀನಾದ ಇತರ ಕಂಪನಿಗಳಿಗೆ ಮಾರಾಟ ಮಾಡಿವೆ’ ಎಂದು ಇ.ಡಿ ವಿವರಿಸಿದೆ.

‘ಸೈಲ್‌ ಅವರ ಚೀನಾದಲ್ಲಿ ಹೊಂದಿರುವ ಜಿಐ ಐರನ್‌ ಆ್ಯಂಡ್‌ ಸ್ಟೀಲ್‌ ಇನ್ವೆಸ್ಟ್‌ಮೆಂಟ್‌ ಕಂಪನಿ ಲಿಮಿಟೆಡ್‌ ಮೂಲಕವೇ ಈ ವಹಿವಾಟುಗಳು ನಡೆದಿವೆ. ಜತೆಗೆ ಸತೀಶ್ ಸೈಲ್‌ ಅವರು ಚೀನಾದ ಸ್ಟಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್‌ (ಹಾಂಗ್‌ಕಾಂಗ್‌ ಶಾಖೆ) ಲಿಮಿಟೆಡ್‌, ಇಂಡಸ್ಟ್ರಿಯಲ್‌ ಆ್ಯಂಡ್‌ ಕಮರ್ಷಿಯಲ್‌ ಬ್ಯಾಂಕ್‌ ಆಪ್‌ ಚೈನಾದಲ್ಲಿ ಖಾತೆಗಳನ್ನು ಹೊಂದಿದ್ದು, ವೈಯಕ್ತಿಕ ಹಾಗೂ ಕಂಪನಿಯ ಹಣಕಾಸು ವಹಿವಾಟುಗಳನ್ನು ಈ ಖಾತೆಗಳ ಮೂಲಕವೇ ನಡೆಸಿದ್ದಾರೆ’ ಎಂದು ವಿವರಿಸಿದೆ.

‘ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್‌, ಆಶಾಪುರ ಮಿನಿಕೆಮ್‌ ಲಿಮಿಟೆಡ್‌, ಐಎಲ್‌ಸಿ ಇಂಡಸ್ಟ್ರೀಸ್‌ ಲಿಮಿಟೆಡ್‌, ಸ್ವಸ್ತಿಕ್ ಸ್ಟೀಲ್ಸ್‌ (ಹೊಸಪೇಟೆ) ಲಿಮಿಟೆಡ್‌, ಲಾಲ್‌ ಮಹಲ್‌ ಲಿಮಿಟೆಡ್‌ ಮತ್ತು ಪಿಜೆಎಸ್‌ ಓವರ್‌ಸೀಸ್‌ ಲಿಮಿಟೆಡ್‌ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈ.ಲಿಮಿಟೆಡ್‌ ಜತೆಗೆ ಅಕ್ರಮ ವಹಿವಾಟು ನಡೆಸಿವೆ’ ಎಂದು ದೂರಿನಲ್ಲಿ ಉಲ್ಲೇಖಿಸಿದೆ.

ಇದನ್ನೂ ನೋಡಿ: ಪುಸ್ತಕ ಪರಿಚಯ | ನಿರಂಜನರ ಬದುಕು-ಬರಹಗಳ ಕತೆ – ಅನಂತ ಶಾಂದ್ರೇಯ Janashakthi Media

Donate Janashakthi Media

Leave a Reply

Your email address will not be published. Required fields are marked *