ಮಾಲೂರು ಕ್ಷೇತ್ರದ ಮರು ಮತ ಎಣಿಕೆ: ಫಲಿತಾಂಶ ನ್ಯಾಯಾಲಯದ ತೀರ್ಪಿನಲ್ಲಿ ಪ್ರಕಟ

ಮಾಲೂರು: ಕಾಂಗ್ರೆಸ್‌ ನ ಕೆ.ವೈ. ನಂಜೇಗೌಡ ಮತ್ತು ಬಿಜೆಪಿಯ ಕೆ.ಎಸ್‌. ಮಂಜುನಾಥ್‌ ಗೌಡ ನಡವಿನ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆ ಬಹುತೇಕ ಮುಕ್ತಾಯಗೊಂಡಿದ್ದೂ, ಮರು ಎಣಿಕೆ ಮುಗಿದರೂ ನವೆಂಬರ್‌ 11ರಂದು ಫಲಿತಾಂಶ ಮಾತ್ರ ಪ್ರಕಟವಾಗುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮರು ಎಣಿಕೆಯ ಫಲಿತಾಂಶವನ್ನು ಚುನಾವಣಾ ಆಯೋಗ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಿದೆ. ತದನಂತರ ನ್ಯಾಯಾಲಯ ಈ ಕುರಿತು ತನ್ನ ತೀರ್ಪು ಪ್ರಕಟಿಸಲಿದೆ.

ಇದನ್ನೂ ಓದಿ: ಮೈಸೂರು| ಕಾರಗೃಹದ ಕೈದಿಗಳು ಹಣ ಕೊಟ್ಟರೆ ಮದ್ಯ, ಮೊಬೈಲ್ ಫೋನ್‌ ಲಭ್ಯ!

ದೇಶದಲ್ಲಿ ಇದೇ ಮೊದಲ ಬಾರಿಗೆ ಇವಿಎಂ ಮತಗಳ ಮರುಎಣಿಕೆ ನಡೆಯುತ್ತಿದ್ದು, ಎಲ್ಲರ ಕುತೂಹಲಕ್ಕೆ ಈ ಕ್ಷೇತ್ರ ಕಾರಣವಾಗಿದೆ. ಇತ್ತೀಚಿಗಷ್ಟೇ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಚುನಾವಣಾ ಅಕ್ರಮದ ಬಗ್ಗೆ ಟೀಕಿಸಿ ಮತಗಳವು ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈಗ ಬಿಜೆಪಿ ಅಭ್ಯರ್ಥಿ ಗೆದ್ದರೆ ಇದರ ಪರಿಣಾಮ ರಾಜ್ಯ ಕಾಂಗ್ರೆಸ್‌ ಮೇಲೆ ಬೀರಲಿದ್ದು, ರಾಹುಲ್‌ ಗಾಂಧಿ ಆರೋಪಕ್ಕೂ ಹಿನ್ನೆಡೆಯಾಗಲಿದೆ.

ಒಂದು ವೇಳೆ ಕಾಂಗ್ರೆಸ್‌ ಅಭ್ಯರ್ಥಿಯೇ ಗೆದ್ದರೆ ಯಥಾಸ್ಥಿತಿಯಂತೆಯೇ ಕೆ.ವೈ. ನಂಜೇಗೌಡ ಶಾಸಕರಾಗಿ ಮುಂದುವರೆಯಲಿದ್ದಾರೆ.

ಇದನ್ನೂ ನೋಡಿ: ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಸಿದ್ದು ಯಾಕೆ? ಬಲಾಢ್ಯ ಜಾತಿಗಳು ವಿರೋಧಿಸಿದ್ದು ಯಾಕೆ? ರಾಜೇಂದ್ರ ಚೆನ್ನಿ ವಿಶ್ಲೇಷಣೆ

Donate Janashakthi Media

Leave a Reply

Your email address will not be published. Required fields are marked *