ದೆಹಲಿ: ಧರ್ಮಸ್ಥಳದ ಸುತ್ತ ನಡೆದ ಕೊಲೆ, ಅತ್ಯಾಚಾರ, ದೌರ್ಜನ್ಯ, ನಾಪತ್ತೆ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ ಬೇಬಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದೃಾಮಯ್ಯರವರಿಗೆ ಪತ್ರ ಬರೆದಿದ್ದಾರೆ.
ಧರ್ಮಸ್ಥಳ ಸುತ್ತಮುತ್ತ ನಡೆದ ನೂರಾರು ಅಸಹಜ ಸಾವುಗಳು, ನಾಪತ್ತೆ ಪ್ರಕರಣಗಳು, ತನಿಖೆ ಇಲ್ಲದೇ ಮುಚ್ಚಿಹಾಕಿದ ಹತ್ಯೆ, ಕೊಲೆ ಅತ್ಯಾಚಾರಗಳ ಸುತ್ತ ಗಂಭೀರವಾದ ಚರ್ಚೆಗಳು ನಡೆದಿವೆ. ಕರ್ನಾಟಕದಲ್ಲಿ ಜನಪರ ಸಂಘಟನೆಗಳು ತನಿಖೆಗೆ ಒತ್ತಾಯಿಸಿ ನಿರಂತರ ಹೋರಾಟಗಳನ್ನು ನಡೆಸುತ್ತಿವೆ.
ಇದನ್ನೂ ಓದಿ : ಕನ್ನಡ ಸಾಹಿತ್ಯ ಪರಿಷತ್‌ಗೆ ಆಡಳಿತಾಧಿಕಾರಿ ಮುಂದುವರಿಕೆ – ಹೈಕೋರ್ಟ್
80 ರ ದಶಕದಲ್ಲಿ ಸಿಪಿಐ(ಎಂ) ಪಕ್ಷದ ಶಾಖಾ ಕಾರ್ಯದರ್ಶಿ ದೇವಾನಂದರ ಮಗಳು ಪದ್ಮಲತಾ ಕೂಡಾ ಕಿಡ್ನಾಪ್ ಆಗಿ ಕೊಲೆಯಾಗಿ, ಕೊಳೆತ ದೇಹವಾಗಿ ಸಿಕ್ಕವರಲ್ಲಿ ಒಬ್ಬಳು.
ನೇಮಕವಾದ ಎಸ್.ಐ.ಟಿ. ಈ ಪ್ರಕರಣವೂ ಸೇರಿದಂತೆ ಉಳಿದ ಇಂತಹ ಅನೇಕ ಪ್ರಕರಣಗಳ ತನಿಖೆಯನ್ನು ಮಾಡಿ ನ್ಯಾಯ ಒದಗಿಸಬೇಕು ಎಂದು ಎಂ.ಎ.ಬೇಬಿ ಪತ್ರದಲ್ಲಿ ಇಲ್ಲೇಕಿಸಿದ್ದಾರೆ.
ಇದನ್ನೂ ನೋಡಿ : ಧರ್ಮಸ್ಥಳದ ನಿಗೂಢಗಳು |ಮಹಿಳಾ ಆಯೋಗ ಮತ್ತೆ ಎಂಟ್ರಿಎಸ್‌ಐಟಿ ವಿರುದ್ಧಅಸಮಾಧಾನ | ಗುರುರಾಜ ದೇಸಾಯಿ Janashakthi Media
