ನವೆಂಬರ್‌ 3ರ ಸಂಜೆಗೆ ಎಲ್ಲ ಗುಂಡಿಗಳನ್ನು ಮುಚ್ಚಿ ವರದಿ ಸಲ್ಲಿಸಿ: ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಬೆಂಗಳೂರು: ಗುಂಡಿ ಮುಚ್ಚಲು ವಿಫಲವಾಗಿರುವ ಹಿನ್ನೆಲೆ ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡಿದ್ದೂ, ಅಕ್ಟೋಬರ್ 31ರ ಡೆಡ್‌ಲೈನ್ ಮುಗಿದ ನಂತರವೂ ರಸ್ತೆ ಗುಂಡಿಗಳನ್ನು ಮುಚ್ಚದಿರುವುದನ್ನು ಖಂಡಿಸಿ, ನವೆಂಬರ್‌ 3ರ ಸಂಜೆ 4 ಗಂಟೆಗೆ ಎಲ್ಲ ಗುಂಡಿಗಳನ್ನು ಮುಚ್ಚಿ ವರದಿ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಈ ‘ಫೈನಲ್ ಡೆಡ್‌ಲೈನ್’ ಪಾಲಿಸದಿದ್ದರೆ ಕಠಿಣ ಕ್ರಮ ಎಂದು ಎಚ್ಚರಿಸಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಐದು ನಗರ ಪಾಲಿಕೆ ಆಯುಕ್ತರಿಗೂ, ಇಂಜಿನಿಯರ್‌ಗಳಿಗೂ ಯಾವುದೇ ನೆಪ ಹೇಳದೆ ಕಾರ್ಯಾನುಷ್ಠಾನಕ್ಕೆ ಇಳಿಯುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆ: ಎರಡನೇ ಹಂತದಲ್ಲಿ 40 ಕಾಂಗ್ರೆಸ್ ಸ್ಟಾರ್ ಪ್ರಚಾರಕರು

ಗುಂಡಿ ಮುಚ್ಚಿದ ಕುರಿತು ಸಂಜೆ ವೇಳೆಗೆ ಕಡ್ಡಾಯ ವರದಿ ಸಲ್ಲಿಸಿ ಎಂದು ತಿಳಿಸಿದ್ದಾರೆ. ಸಧ್ಯದಲ್ಲೇ ಸಿಎಂ ಸಿದ್ದರಾಮಯ್ಯ ನಗರದ ರಸ್ತೆಗಳಲ್ಲಿ ‘ಸಿಟಿ ರೌಂಡ್ಸ್’ ಆರಂಭಿಸಿ, ಕೆಲಸಗಳನ್ನು ಪರಿಶೀಲಿಸಿಲಿಸಲಿದ್ದಾರೆ. ನಗರ ನಿವಾಸಿಗಳ ಜೀವನ ಸುಗಮಗೊಳಿಸಲು ಈ ಕ್ರಮ ಸ್ವಾಗತಾರ್ಹ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಇದನ್ನೂ ನೋಡಿ: ನಿರಂಜನರ ಸಾಹಿತ್ಯದಲ್ಲಿ ನಿಜವಾದ ಜನಪರತೆ ಇದೆ – ರಂಗನಾಥ ಕಂಟನಕುಂಟೆ Janashakthi Media

Donate Janashakthi Media

Leave a Reply

Your email address will not be published. Required fields are marked *