ಬೆಂಗಳೂರು: ಗ್ರಂಥಾಲಯ ಇಲಾಖೆಗೆ ಗ್ರಂಥಾಲಯ ಕರವನ್ನು ನೇರವಾಗಿ ಪಾವತಿಸಲು ಕ್ರಮವಹಿಸಿದರೆ, ಪ್ರತ್ಯೇಕ ಅನುದಾನದ ಅಗತ್ಯವಿಲ್ಲದೆ ಪುಸ್ತಕಗಳನ್ನು ಖರೀದಿಸಲು ಇಲಾಖೆಗೆ ಸಾಧ್ಯವಾಗುತ್ತದೆ’ ಎಂದು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಂಗಳೂರು
ಇದನ್ನೂ ಓದಿ : ಮಂಗಳೂರು | ಕಾರ್ಮಿಕ ನಾಯಕರನ್ನು ಬಂಧಿಸಿದ ರಾಜ್ಯ ಸರಕಾರದ ನಡೆಗೆ ಸಿಐಟಿಯು ತೀವ್ರ ಖಂಡನೆ
ಸಂಘವು ನಗರದಲ್ಲಿ ಹಮ್ಮಿಕೊಂಡಿದ್ದ ನೂತನ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಂಗಳೂರು
ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಪುಟವಾರು ಬೆಲೆ ನಿಗದಿಪಡಿಸಿ ಎಂಟು ವರ್ಷಗಳಾಗಿವೆ. ದಿನಬಳಕೆಯ ಎಲ್ಲ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಸರ್ಕಾರ ಪುಟವಾರು ದರ ಪರಿಷ್ಕರಣೆಯನ್ನೇ ಮಾಡಿಲ್ಲ. ಈಗಲಾದರೂ ಈ ನಿಟ್ಟಿನಲ್ಲಿ ಗಮನಹರಿಸಬೇಕು’ ಎಂದು ಆಗ್ರಹಿಸಿದರು.
‘ರಾಜ್ಯದಾದ್ಯಂತ ಪುಸ್ತಕ ಪ್ರದರ್ಶನ ಹಮ್ಮಿಕೊಳ್ಳಲು ಸಂಘವು ಯೋಜನೆ ರೂಪಿಸಿದೆ. ಪುಸ್ತಕದ ಬಗೆಗೆ ಚರ್ಚೆ–ಸಂವಾದ ನಡೆಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಲೇಖಕರು, ಪ್ರಕಾಶಕರು ಮತ್ತು ಮುದ್ರಕರ ಜತೆ ಮಾತುಕತೆ ನಡೆಸಲು ಮಾತಿನ ವಿನ್ಯಾಸ ಕಾರ್ಯಕ್ರಮ, ಹೊಸ ಪ್ರಕಾಶಕರಿಗೆ ಪುಸ್ತಕ ನಿರ್ಮಾಣ ಮಾಡಲು ಕಮ್ಮಟ, ಶಾಲಾ–ಕಾಲೇಜುಗಳಲ್ಲಿ ಪುಸ್ತಕಗಳ ಬಗ್ಗೆ ಅರಿವು ಮೂಡಿಸಲು ‘ಗ್ರಂಥಾಲಯದ ಅಂಗಳ’ ಮುಂತಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ’ ಎಂದರು.
ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಸಂಘದ ಹೊಸ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಅಭಿನವ ರವಿಕುಮಾರ್, ಉಪಾಧ್ಯಕ್ಷ ಜಿ.ಎನ್. ಮೋಹನ್, ಪ್ರಗತಿ ಪರ ಚಿಂತಕ ಸಿದ್ದನಗೌಡ ಪಾಟೀಲ, ‘ವಿಜಯ ಕರ್ನಾಟಕ’ ಪುರವಣಿಗಳ ಸಂಪಾದಕಿ ವಿದ್ಯಾರಶ್ಮಿ ಪೆಲ್ಲತ್ತಡ್ಕ ಉಪಸ್ಥಿತರಿದ್ದರು.
ಇದನ್ನೂ ನೋಡಿ : ಧರ್ಮಸ್ಥಳದ ನಿಗೂಢಗಳು | ಕ್ಲೈಮ್ಯಾಕ್ಸ್ನತ್ತ SIT ತನಿಖೆ ; ಫಲಿತಾಂಶಕ್ಕಾಗಿ ಕಾಯೋಣ Janashakthi Media
